ಸುದ್ದಿಬಿಂದು ಬ್ಯೂರೋ
ಬೆಂಗಳೂರು
: ಈಗಾಗಲೆ ರಾಜ್ಯದ ಮುಖ್ಯಮಂತ್ರಿ ಯಾರು ಎನ್ನುವ ಚರ್ಚೆಗೆ ತೆರೆ ಎಳೆಯಲಾಗಿದ್ದು,ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ ಅವರಿಗೆ ಎರಡು ವರೆ ವರ್ಷಗಳ ಕಾಲ ಸಿ ಎಂ ಸ್ಥಾನ ಹಂಚಿಕೆ‌ ಮಾಡಲಾಗಿದ್ದು,ಇದರ ಬೆನ್ನಲೆ ಇದೀಗ ಸಚಿವ ಯಾರೆಲ್ಲಾ ಸಚಿವರಾಗಬೇಕು ಎನ್ನುವ ಕುರಿತು ಪಟ್ಟಿ ಸಿದ್ದಪಡಿಸಲಾಗುತ್ತಿದೆ.

ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಉತ್ತರಕನ್ನಡ ಜಿಲ್ಲೆಯ ಕಾರವಾರ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅವರ ಹೆಸರಿದೆ ಎನ್ನಲಾಗುತ್ತಿದೆ‌. ಸತೀಶ್ ಸೈಲ್ ಕಾರವಾರ ಅಂಕೋಲಾ ‌ಕ್ಷೇತ್ರದಿಂದ ಎರಡನೇ ಅವಧಿಗೆ ಶಾಸಕರಾಗಿ ಆಯ್ಕೆ ಆಗಿದ್ದು, ಈ ಮೊದಲು ಅವರು ಪಕ್ಷೇತರವಾಗಿ ಸ್ಪರ್ಧಿಸಿ ಗೆದ್ದು, ಬಳಿಕ ಕಾಂಗ್ರೆಸ್ ಗೆ ಬೆಂಬಲ ನೀಡಿದ್ದರು, ಇದಾದ ಬಳಿಕ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ‌ನಿಂದ ಸ್ಪರ್ಧೆ ಮಾಡಿದ್ದರು ಸಹ ಶಾಸಕರಾಗುವ ಭಾಗ್ಯ ಅವರಿಗೆ ಸಿಕ್ಕಿರಲಿಲ್ಲ.
ಸತೀಶ್ ಸೈಲ್ ಈ ಬಾರಿ ಮತ್ತೆ ಕಾಂಗ್ರೆಸ್ ನಿಂದ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ವಿರುದ್ದ ಸ್ಪರ್ಧೆ ಮಾಡುವ ಮೂಲಕ ಗೆದ್ದು ಎರಡನೇ ಬಾರಿ ಶಾಸಕರಾಗಿದ್ದಾರೆ. ಸೈಲ್ ಈ ಹಿಂದೆ ಶಾಸಕರಾಗಿದ್ದ ವೇಳೆ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನ ತರುವ ಮೂಲಕ ಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಸೈಲ್ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ ಇಬ್ಬರಿಗೂ ಆಪ್ತರಾಗಿದ್ದು, ಹಿಂದೂಳಿದ ವರ್ಗದಲ್ಲಿ ಸೈಲ್ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಇವರ ಜೊತೆ ಶಿರಸಿ ಶಾಸಕ ಭೀಮಣ್ಣ ನಾಯ್ಕ, ಮಂಕಾಳು ವೈದ್ಯ ಅವರುಗಳ ಹೆಸರು ಕೂಡ ಕೇಳಿ ಬರುತ್ತಿದೆ. ಸತೀಶ್ ಸೈಲ್, ಭೀಮಣ್ಣ ನಾಯ್ಕ್, ಮಂಕಾಳು ವೈದ್ಯ ಈ ಮೂವರು ಕೂಡ ಆಪ್ತರಾಗಿದ್ದಾರೆ.ಸದ್ಯದ ಮಾಹಿತಿ ಪ್ರಕಾರ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ ಅವರ ಹೆಸರು ಕೇಳಿಬರುತ್ತಿದೆ. ಇನ್ಬೂ ಜಿಲ್ಲೆಯ ಹಿರಿಯ ರಾಜಕಾರಣಿ ಆಗಿರುವ ಆರ್ ವಿ ದೇಶಪಾಂಡೆ ಅವರಿಗೆ ವಿಧಾನಸಭಾಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ಹೀಗಾಗಿ ಉಳಿದ ಮೂವರು ಶಾಸಕರಲ್ಲಿ ಒಂದರಿಂದ ಇಬ್ಬರಿಗೆ ಸಚಿವ ಸ್ಥಾನ ಸಿಕ್ಕರು ಅಚ್ಚರಿ ಪಡಬೇಕಿಲ್ಲ.