ಸುದ್ದಿಬಿಂದು ನ್ಯೂಸ್ ಡೆಸ್ಕ್
ಕಾರವಾರ
: ಕೆಎಸ್ಆರ್ ಟಿಸಿ ಸಾರಿಗೆ ಸಂಚಾರದಲ್ಲಿ ಸಮತೋಲ ಇದ್ದಾಗ ಮಾತ್ರ ಪ್ರತಿಯೊಬ್ಬರ ದೈನ್ಯದಿನ ವ್ಯವಹಾರ, ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಸಾದ್ಯ. ಆದರೆ ಕೆಎಸ್ಆರ್ಸಿಟಿಸಿ ಸರ್ವಾಧಿಕಾರಿ ನಿರ್ಣಯದಿಂದ ಪ್ರಯಾಣಿಕರು ಪ್ರತಿನಿತ್ಯ ಈ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕುವಂತಾಗಿದೆ.

ಕೆಎಸ್ಆರ್ ಟಿಸಿ ಸಂಸ್ಥೆ ಬಸ್ ಸಂಚಾರವನ್ನ ಹೆಚ್ಚು ಕಲ್ಪಿಸಿ ಸಾರ್ವಜನಿಕರ ಓಡಾಟಕ್ಕೆ ಅನೂಕುಲ ಮಾಡಿಕೊಂಡಬೇಕು‌. ಆದರೆ ದಿವಾಳಿಯ ಹಾದಿಯಲ್ಲಿರುವ ಈ ಸಂಸ್ಥೆ ಇರುವ ವ್ಯವಸ್ಥೆಯನ್ನ ಕಡಿತ ಮಾಡುವ ಮೂಲಕ ಸಾರ್ವಜನಿಕರ ಜೊತೆ ಚಲ್ಲಾಟವಾಡುತ್ತಿದೆ. ಚಾಲಕ, ನಿರ್ವಾಹಕ ಸಹಿತ ಬಸ್ ಬದಲಿಸಿ ನಿರ್ವಾಹಕ ರಹಿತ ಬಸ್ ಎಂದು ಪರಿವರ್ತನೆ ಮಾಡಿದೆ. ಆದರೆ ಹಿಂದೆ ಅದೆ ಸಮಯಕ್ಕೆ ಬಸ್ ನಿಲ್ದಾಣದಿಂದ ಹೊರಡುವ ಬಸ್ ಗೆ ನಿಗದಿ ಪಡಿಸಿದ ಸ್ಥಳದಲ್ಲಿ ಪ್ರಯಾಣಿಕನ್ನ ಹತ್ತಿಸಿಕೊಳ್ಖುವ ಹಾಗೂ ಇಳಿಸಿ ಹೋಗುವ ವ್ಯವಸ್ಥೆ ಇತ್ತು. ಆದರೆ ಅದೆ ಸಮಯಕ್ಕೆ ಇರುವ ಬಸನ್ನೆ ಈಗ ನಿರ್ವಾಹಕ ರಹಿತ ಸಂಚಾರ ಎಂದು ಮಾಡಿಕೊಳ್ಳಲಾಗಿದೆ.

ಉದಾರಣೆಗೆ ಕುಮಟಾದಿಂದ ಭಟ್ಕಳಕ್ಕೆ ಹೊರಡುವ ನಿರ್ವಾಹ ರಹಿತ ಬಸ್ ನಲ್ಲಿ ಪ್ರಯಾಣ ಮಾಡಿ. ಕರ್ಕಿ,ಹೊಳೆಗದ್ದೆ, ಮುರುಡೇಶ್ವರ,ಇನ್ನೂ ಕುಮಟಾ- ಕಾರವಾರ ಬಸ್ ನಲ್ಲಿ ಪ್ರಯಾಣಿಸುವವರ ಮಿರ್ಜಾನ,ಬರ್ಗಿ, ಹಿರೇಗುತ್ತಿ, ಮಾದನಗೇರಿ, ಶಿರೂರು, ಹೀಗೆ ಈ ಯಾವ ಕಡೆಯಲ್ಲೂ ನಿಲುಗಡೆ ಇಲ್ಲ.‌ ಹೀಗಾಗಿ ಇನ್ನೊಂದು ಬಸ್ ಬರಬಹುದು ಅಂತಾ ಕಾಯುತ್ತಾ ಇದ್ದರೆ ಅದರ ಜೊತೆ  ನಿರ್ವಾಹಕ ರಹಿತ ಇನ್ನೊಂದು ಬಸ್ ಬರುತ್ತವೆ..ಹೀಗಾಗಿ ಸಾಮಾನ್ಯ ಬಸ ಬರುವ‌ ತನಕ ಬಸ್‌ಗಾಗಿ ರಸ್ತೆಯಲ್ಲಿ ನಿಂತು ಕಾಯುವ ಪ್ರಯಣಿಕರು‌ ಕಾದುಕಾದು ಸುಸ್ತಾಗ ಬೇಕಾಗಿದೆ.‌

ಈ ಬಸ್ಸು ಒಂದು ತಾಲೂಕಿನಿಂದ ಇನ್ನೊಂದು ತಾಲೂಕಾ ಬಸ್ ನಿಲ್ದಾಣಕ್ಕೆ ಪ್ರಯಾಣಿಸುವವರು ಮಾತ್ರ ಪ್ರಯಾಣ ಮಾಡಬೇಕು. ಹಾಗಂತಾ ಇದೆ ಸಮಯಕ್ಕೆ ಬೇರೆ ಬಸ್ ಬಿಡುವ ವ್ಯವಸ್ಥೆ ಸಹ ಮಾಡಿಲ್ಲ. ಇದರಿಂದ ಆ ಬಸ್ ನ ನಿರ್ವಾಹರ ಬಳಿ ಹೋಗಿ ನಮ್ಮೂರಲ್ಲಿ ಸ್ವಲ್ಪ ನಿಲುಗಡೆ ಮಾಡಿ ಅಂದರೆ ಸಾಕು. ಮೈ ಮೇಲೆ‌ ದೆವ್ವ ಬಂದವರಂತೆ ಮಾಡುತ್ತಾರೆ. ಇದರಿಂದಾಗಿ ಕೆಲಸ ಕಾರ್ಯಗಳಿಗೆ ನಿಗದಿತ ಸಮಯಕ್ಕೆ ಹೋಗಬೇಕಾದವರು ಪರದಾಡುವಂತಾಗಿದೆ.

ನಿರ್ವಾಹಕ ರಹಿತ ಬಸ್ ಸಂಚಾರ ಮಹಾನಗರಗಳಲ್ಲಿ ಮಾತ್ರ ವರ್ಕ್ ಔಟ್ ಆಗಬಹುದು ಆದ್ರೆ ಉತ್ತರಕನ್ನಡ ಜಿಲ್ಲೆಯಲ್ಲಿ  ಕಾರ್ಯರೂಪಕ್ಕೆ ತರುವುದು ಕಷ್ಟ ಎನ್ನುವುದನ್ನ ಹಿರಿಯ ಅಧಿಕಾರಿಗಳು ತಿಳಿದುಕೊಳ್ಳಬೇಕಿದೆ.ಇಂತಹ ನಿಯಮಾವಳಿ ಜಾರಿ ಮಾಡುವ ಅಧಿಕಾರಿಗಳು ಸ್ವಲ್ಪ ದಿನ ಬಸ್ಸಾಗಿ ಕಾದು ಪ್ರಯಾಣ ಮಾಡಿದರೆ ಅವರೆ ಮಾಡಿದ ನಿಯಮಾವಳಿ ಅರ್ಥವಾಗಲು ಸಾಧ್ಯ.