ಸುದ್ದಿಬಿಂದು ನ್ಯೂಸ್ ಡೆಸ್ಕ್
ಶಿರಸಿ :
ಚುನಾವಣೆ ಘೋಷಣೆ ಆಗುತ್ತಿರುವಂತೆ ಪಕ್ಷಾಂತರ ಪರ್ವ ಮುಂದುವರೆದಿದೆ. ಜೆಡಿಎಸ್ ಶಾಸಕರಾಗಿದ್ದ ಶಿವಲಿಂಗೆ ಗೌಡ ಅವರು ಇಂದು ತಮ್ಮ ರಾಜೀನಾಮೆಯನ್ನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಸಲ್ಲಿಕೆ ಮಾಡಲಿದ್ದಾರೆ.

ಹಾಸನ ಜಿಲ್ಲೆಯ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕರಾಗಿದ್ದ ಶಿವಲಿಂಗೆ ಗೌಡ ಅವರು ಇಂದು ವಿಧಾನಸಭಾಧ್ಯಕ್ಷರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ. ಶಿರಸಿಯಲ್ಲಿ ಇರುವ ಸ್ಪೀಕರ್ ಕಾಗೇರಿ ಅವರ ಕಚೇರಿಗೆ ಇಂದು 11-30ಕ್ಕೆ ಆಗಮಿಸಲಿದ್ದು, ಅಲ್ಲಿ ಅವರು ರಾಜೀನಾಮೆ‌ ನೀಡಲಿದ್ದಾರೆ.

ಶಿವಲಿಂಗೆ ಗೌಡ ರಾಜೀನಾಮೆ ನೀಡುವ ಬಗ್ಗೆ ಈ ಹಿಂದಿನಿಂದಲ್ಲೆ ಕೇಳಿಬಂದಿತ್ತು. ಅದಕ್ಕೆ ಈಗ ಸಮಯ ಕೂಡಿ ಬಂದಿದೆ. ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಈಗಾಗಲೆ ಕಾಂಗ್ರೆಸ್ ‌ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನುವ ಮಾತುಕೇಳಿ ಬರುತ್ತಿದೆ.