ಸುದ್ದಿಬಿಂದು ನ್ಯೂಸ್ ಡೆಸ್ಕ್
ಕಾರವಾರ
: ಈಗಾಗಲೆ ಚುನಾವಣೆ ಘೋಷಣೆ ಆಗಿದ್ದು ಕಾಂಗ್ರೆಸ್ ಹಾಗೂ ಜೆಡಿಎಸ್ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಇದೀಗ ಬಿಜೆಪಿ ಸಹ ಅಭ್ಯರ್ಥಿಗಳ ಮೊದಲ ಪಟ್ಟಿಯ ಸಿದ್ದಪಡಿಸಿಕೊಂಡಿದ್ದು ಮೊದಲ ಪಟ್ಟಿಯಲ್ಲಿ ನೂರು ಕ್ಷೇತ್ರದ ಅಭ್ಯರ್ಥಿಗಳನ್ನ ಘೋಷಣೆ ಮಾಡಲಿದ್ದು ಜಿಲ್ಲೆಯ ಐವರು ಹಾಲಿ ಶಾಸಕರಿಗೆ ಟಿಕೆಟ್ ಬಹುತೇಕ ಫೈಲನ್ ಎನ್ನಲಾಗಿದೆ.

ಕಾರವಾರ ಕ್ಷೇತ್ರದಿಂದ ರೂಪಾಲಿ ನಾಯ್ಕ,ಕುಮಟಾ ದಿನಕರ ಶೆಟ್ಟಿ, ಭಟ್ಕಳದಲ್ಲಿ ಸುನೀಲ್ ನಾಯ್ಕ,ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಯಲ್ಲಾಪುರದಲ್ಲಿ ಶಿವರಾಮ ಹೆಬ್ಬಾರ. ಅವರ ಹೆಸರು ಸಂಭಾವ್ಯ ಪಟ್ಟಿಯಲ್ಲಿದೆ.

ಬಿಜೆಪಿಯ ಮೊದಲ ಪಟ್ಟಿ ಏಪ್ರೀಲ್ 5ಅಥವಾ 6ರಂದು ಬಿಡುಗಡೆ ಆಗುವ ಸಾದ್ಯತೆ ಇದೆ. ಈ ಎಲ್ಲಾ ಕ್ಷೇತ್ರದಲ್ಲಿ ಬೇರೆ ಯಾರದೆ ಹೆಸರು ಕೇಂದ್ರದ ಬಿಜೆಪಿಗೆ ರವಾನೆ ಆಗಿಲ್ಲ ಎನ್ನಲಾಗಿದೆ. ಇಷ್ಡು ದಿನಗಳ ಕಾಲ ಟಿಕೆಟ್ ವಿಚಾರದಲ್ಲಿ ಉಂಟಾಗಿದ್ದ ಊಹಾಪೋಹಗಳಿಗೆ ಇದೀಗ ತೆರೆ ಬಿದ್ದಂತೆ ಆಗಿದೆ..