suddibindu.in
Murudeshwar: ಮುರುಡೇಶ್ವರ : ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರದ ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್ ಮಾಡಲು ಅಕ್ವಾ ರೇಡ್ ಸಂಸ್ಥೆಗೆ ಪ್ರವಾಸೋದ್ಯಮ ಇಲಾಖೆ (Tourism Department) ನೀಡಿರುವ ಟೆಂಡರ್ ಅವಧಿ ಮುಗಿದಿದ್ದು, ಬಗ್ಗೆ ಪ್ರವಾಸೋದ್ಯಮ ಇಲಾಖೆ ಅಕ್ವಾ ರೇಡ್ ಸಂಸ್ಥೆಗೆ ಟೆಂಡರ್ ಆಗುವ ತನಕ ಸ್ಕೂಬ್ ಡೈವಿಂಗ್ ಮಾಡದಂತೆ ನೋಟಿಸ್ ನೀಡಿದೆ ಆದರೆ ಈ ಸಂಸ್ಥೆ ಇಲಾಖೆಯ ನೋಟಿಸ್‌ನ್ನ ಗಾಳಿಗೆ ತೂರಿ ಕಾನೂನು ಬಾಹಿರವಾಗಿ ಸ್ಕೂಬಾ ಡೈವಿಂಗ್ ಮುಂದುವರೆಸಿದೆ..
ಇದನ್ನೂ ಓದಿ : ಮೊರಬದಲ್ಲಿ ಕತ್ತು ಹಿಸುಕಿ ಮಕ್ಕಳ ಕೊಲೆಗೈದ ತಾಯಿ ಆತ್ಮಹತ್ಯೆ
ಈ ಕಂಪನಿಗೆ ಈ ಮೊದಲು ನೀಡಿದ ಟೆಂಡರ್ ಅವದಿ ನಿನ್ನೆ ಶನಿವಾರ (24-02-2024ರಂದು) ಮುಕ್ತಾಯವಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು ಹಾಗೂ ಸದಸ್ಯ ಕಾರ್ಯದರ್ಶಿ, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ಇದೆ ತಿಂಗಳ 23ರಂದ ನೋಟಿಸ್ ನೀಡಿ 25ರಿಂದ ಸ್ಕೂಬಾ ಡೈವಿಂಗ್ ಮಾಡಲು ಅವಕಾಶವಿಲ್ಲ ಒಂದು ವೇಳೆ ಸ್ಕೂಬಾ ಡೈವಿಂಗ್ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ನೋಟಿಸ್ ನಲ್ಲಿ ತಿಳಿಸಲಾಗಿದೆ.
ಆದರೆ ಅಕ್ವಾ ರೈಡ್ ಸಂಸ್ಯೆ ಅಧಿಕಾರಿಗಳಿಗೂ ತಮ್ಮಗೂ ಯಾವುದೇ ಸಂಬಂದವಿಲ್ಲ ಎನ್ನುವ ರೀತಿಯಲ್ಲಿ ಇಂದು ಸಹ ಅಕ್ವಾ ರೈಡ್ ಸಂಸ್ಥೆ ಪ್ರವಾಸಿಗರನ್ನು ಬೋಟ್ ಮೂಲಕ ನೇತ್ರಾಣಿ ಐಲೆಂಡ್ ಕರೆದೊಯ್ದು ಸ್ಕೂಬಾ ಡೈವ್ ಮಾಡಿದ್ದಾರೆ. ಟೆಂಡರ್ ಮುಗಿದ ಮೇಲೆ ಹೊಸ ಟೆಂಡರ್ ಆಗುವ ತನಕ ಯಾವ ಕಾರಣಕ್ಕೂ ಈ ಚಟುವಟಿಕೆ ಮಾಡುವಂತಿಲ್ಲ. ಆದರೆ ಹೊಸ ಟೆಂಡರ್ ಆಗುವ ಮೊದಲೆ ಕಾನೂನು ಬಾಹಿರವಾಗಿ ಸ್ಕೂಬಾ ಡೈವಿಂಗ್ ಮಾಡಲಾಗುತ್ತಿದೆ.
ಪ್ರವಾಸಿಗರ ಜೀವಕ್ಕೆ ಹಾನಿ ಆದ್ರೆ ಯಾರು ಹೊಣೆ…?
ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಮಾಡಲು ಅಕ್ವಾ ರೈಡ್ ಸಂಸ್ಥೆಗೆ ನೀಡಿದ ಅವಧಿ ಮುಕ್ತಾಯವಾಗಿರುವ ಕಾರಣ ಇಂದಿನಿಂದ ಸ್ಕೂಬಾ ಮಾಡುವಂತಿಲ್ಲ. ಒಂದುವೇಳೆ ಇವರ ಸಂಸ್ಥೆ ಮೂಲಕ ಸ್ಕೂಬಾ ಮಾಡಲು ತೆರಳಿದ ಪ್ರವಾಸಿಗರಿಗೆ ಏನಾದ್ದರೂ ಅವಘಢಗಳು ಉಂಟಾದರೆ ಅದಕ್ಕೆ ಯಾರು ಹೊಣೆ. ಸ್ಕೂಬಾ ಮಾಡಲು ಬರುವವರಿಗೆ ಇಲ್ಲಿನ ಟೆಂಡರ್ ಅವಧಿ ಮುಕ್ತಾಯವಾಗಿದೆಯೋ ಇಲ್ಲವೋ ಎನ್ನುವುದು ಗೊತ್ತಿರುವುದಿಲ್ಲ.ಅವರು ಕೇವಲ ಸ್ಕೂಬಾ ಡೈವಿಂಗ್ ಮಾಡೋದಕ್ಕಾಗಿ ಬಂದಿರುತ್ತಾರೆ.
ಇನ್ನೂ ಟೆಂಡರ್ ಮುಗಿದಿರುವ ಬಗ್ಗೆ ಇಲಾಖೆ ನೋಟಿಸ್ ನೀಡಿ ತೆಪ್ಪಗೆ ಇರುವುದು ಸರಿಯಾದ ಮಾರ್ಗವಲ್ಲ. ನೋಟಿಸ್ ನೀಡಿದ ಮೇಲೆ ಅವರಿ ಸ್ಥಗಿತ ಮಾಡಿದ್ದಾರೋ ಇಲ್ಲವೋ ಎನ್ನುವ ಬಗ್ಗೆ ಸಹ ಗಮನಹರಿಸಬೇಕಿದೆ. ನೋಟಿಸ್ ನೀಡುವುದು ಮಾತ್ರ ಈ ಇಲಾಖೆಯ ಕೆಲಸವಲ್ಲ ನೋಟಿಸ್ ನೀಡಿದ ಮೇಲೆ ಏನಾಗಿದೆ ಎನ್ನುವುದನ್ನ ನೋಡಬೇಕಾಗಿರುವುದು ಕೂಡ ಅಷ್ಟೆ ಜವಾಬ್ದಾರಿಯಾಗಿದೆ. ಹೀಗಾಗಿ ಇನ್ನಾದ್ರೂ ನೋಟಿಸ್ ನೀಡಿದ ಪ್ರವಾಸೋದ್ಯಮ ಇಲಾಖೆ ನಾಳೆಯಿಂದ ಅಕ್ವಾ ರೈಡ್ ಸಂಸ್ಥೆ ಬಗ್ಗೆ ಗಮನ ನೀಡಬೇಕಿದೆ. ಅದರ ಜೊತೆಗೆ ನೋಟಿಸ್ ನೀಡಿದ ಮೇಲೂ ಸಹ ಅಕ್ವಾ ರೈಡ್ ಸಂಸ್ಥೆ ಸ್ಕೂಬಾ ಡೈವಿಂಗ್ ಮಾಡಿರುವ ಬಗ್ಗೆ ಯಾವ ಕಾನೂನು ಕೈಕೊಳ್ಳಲಿದೆ ಎಂಬುವುದನ್ನ ಕಾದು ನೋಡಬೇಕಿದೆ.
ಕ್ಯಾಬೀನ್ ಮೇಲೆ ಕುಳಿತ್ತು ಪ್ರಯಾಣಿಸಲು ಅವಕಾಶ ಕೊಟ್ಟವರು ಯಾರು..?
ಸಮುದ್ರದಲ್ಲಿ ನಿತ್ಯವೂ ಕೆಲಸ ಮಾಡುವವರೇ ಒಮ್ಮೆ ಇಳಿಯುವಾಗ ಹತ್ತಾರೂ ಬಾರಿ ಆಲೋಚನೆ ಮಾಡಿ ಇಳಿಯುತ್ತಾರೆ. ಆದರೆ ಈ ಅಕ್ವಾ ರೈಡ್ ಸಂಸ್ಥೆಯ ಬೋಟ್ ಮೂಲಕ ಇಂದು ನೇತ್ರಾಣಿಗೆ ಹೋಗುವ ಪ್ರವಾಸಿಗರು ಅದರಲ್ಲ ಲೈಪ್ ಜಾಕೇಟ್ ಇಲ್ಲದೆ ಬೋಟ್ ಮೇಲ್ಭಾಗದಲ್ಲಿ ಕುಳಿದು ಮೋಜು ಮಸ್ತಿ ಮಾಡುತ್ತಾ ತೆರಳಿದ್ದಾರೆ. ಸಮುದ್ರಸಲ್ಲಿ ಬರುವ ಒಂದೊಂದು ಕಡಲ ಅಲೆಯೂ ಸಹ ಭಾರೀ ಅಪಾಯವಾಗಿಯೇ ಇರುತ್ತದೆ. ಒಂದೊಮ್ಮೆ ಸಮುದ್ರ ಅಲೆ ಅಬ್ಬರಕ್ಕೆ ಬೋಟ್ ಸ್ವಲ್ಪ ವಾಲಿದರೂ ಲೈಪ್ ಜಾಕೇಟ್ ಇಲ್ಲದೆ ಬೋಟ್ ಮೇಲೆ ಕುಳಿದ ಪ್ರವಾಸಿಗರು ಆಳ ಸಮುದ್ರದಲ್ಲಿ ಮುಳುಗಿ ಹೋದರೆ ಅದಕ್ಕೆ ಪ್ರವಾಸೋದ್ಯ ಇಲಾಖೆಯಾಗಲಿ ಅಥವಾ ಅಕ್ವಾ ರೈಡ್ ಸಂಸ್ಥೆ ಜವಾಬ್ದಾರಿ ತೆಗೆದುಕೊಳ್ಳತ್ತಾ…ಟೆಂಡರ್ ಮುಗಿದ ಬಳಿಕವೂ ಪ್ರವಾಸಿಗರಿಗೆ ಯಾವುದೇ ರಕ್ಷಣೆ ಇಲ್ಲದೆ ಕರೆದುಕೊಂಡು ಹೋಗಿರುವುದು ದೊಡ್ಡ ಅಪರಾಧವಾಗಿದೆ.ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಕ್ರಮ ಜರುಗಿಸಬೇಕಾಗಿರುವುದು ಅನಿವಾರ್ಯವಾಗಿದೆ.