suddibindu. in
ಕಾರವಾರ : ಪಾರ್ಲೇಜಿ ಬಿಸ್ಕೇಟ್ (Biscuit) ಅಂದರೆ ಚಿಕ್ಕಮಕ್ಕಳಿಂದ‌‌ ವೃದ್ಧರ ಕೂಡ ಬಿಸ್ಕೇಟ್ ಇಷ್ಟ ಪಡೋದು ಸಹಜ ಆದರೆ‌. ಆದರೆ ಆಮೆಗಳು ಕೂಡ ಪಾರ್ಲೇಜಿ ಬಿಸ್ಕೇಟ್ ತಿನ್ನುತ್ತವೆ ಅಂದರೆ ನಂಬೋದಕ್ಕೆ ಸಾಧ್ಯನಾ.? ಹೌದು ಇದನ್ನ‌ ನಂಬಲೇ ಬೇಕಾದ ಪರಿಸ್ಥಿತಿ ನಮ್ಮಗೆಲ್ಲಾ ಎದುರಾಗಿದೆ. ಈ ಸುದ್ದಿಯನ್ನ ಕೊನೆ‌ ತನಕ ಓದಿ..

ಇದನ್ನೂ ಓದಿ:-ಅವಧಿ ಮುಗಿದರಯ ಅಕ್ಚಾ ರೇಡ್ ಸಂಸ್ಥೆಯಿಂದ ಸ್ಕೂಬಾ ಡೈವಿಂಗ್

ಇವತ್ತು ತಿಂದು ಬಿಸಾಕಿದ ಬಿಸ್ಕೇಟ್‌ ಪ್ಲಾಸ್ಟಿಕ್ ಅನೇಕ‌ ಪ್ಲಾಸ್ಟಿಕ್ ವಸ್ತುಗಳು ಸಮುದ್ರ ಜೀವಿಗಳ ಹೊಟ್ಟೆಯನ್ನ ಸೇರಿಕೊಳ್ಳುತ್ತಿದೆ‌ ಎನ್ನುವುದಕ್ಕೆ ಇದೂ ಒಂದು ತಾಜಾ ಉದಾರಣೆ. ಮೊನ್ನೆ‌ ಶನಿವಾರ ಕಾರವಾರ(karwar) ತಾಲೂಕಿನ ದೇವಬಾಗ ಕಡಲ ತೀರದಲ್ಲಿ (Devabaga Beach,)ಸಿಕ್ಕ ಆಮೆಯ ಮೃತ ದೇಹದಲ್ಲಿ ಪಾರ್ಲೇಜಿ ಬಿಸ್ಕೇಟ್(Parlage packet)ಪ್ಯಾಕ್‌ಗಳು ಪತ್ತೆ ಯಾಗಿದೆ.

ಪತ್ತೆಯಾಗಿರುವ ಮೃತ‌ ಆಮೆ ಹಾಕ್ಸ್ ಬಿಲ್‌ ಪ್ರಭೇದಕ್ಕೆ ಸೇರಿದ್ದಾಗಿದೆ. ಸುಮಾರು 30 ವರ್ಷದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ. ಅರಣ್ಯ ಇಲಾಖೆಯ(Forest Department,)ಮರೈನ್ ಇಕೋ ಸಿಸ್ಟಂ ವಿಭಾಗದ ಅಧಿಕಾರಿಗಳು ಮೃತ ಆಮೆಯ ಮರಣೋತ್ತರ ಪರೀಕ್ಷೆ ನಡೆಸಿದಾಗ ಆಮೇ‌ ಹೊಟ್ಟೆಯಲ್ಲಿ ಬಿಸ್ಕೇಟ್ ಪ್ಯಾಕೆಟ್ ಪತ್ತೆಯಾಗಿದ್ದು, ಎಲ್ಲರನ್ನು ಅಚ್ಚರಿ ಮೂಡಿಸಿದೆ.