sirsi: ಶಿರಸಿ :ಯುವತಿಯರ ಅಶ್ಲೀಲ ಪೋಟೋ ಎಡಿಟ್, ಮಾಡಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನ ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪಿ ಬಂಧನದ ಭೀತಿಯಲ್ಲಿ, ಓರ್ವ ಆರೋಪಿ “ಇಲಿ ಪಾಷಾಣ” ಸೇವಿಸಿದ ಆರೋಪಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶಿರಸಿಯಲ್ಲಿ ನಡೆದಿದೆ.
ಪ್ರಕರಣಕ್ಕೆ ಬಂಧಿಸಿ ಆರೋಪಿಗಳಾಗಿರುವ ಅರ್ಜುನ್ ಅಲಿಯಾಸ ಅರುಣ ಗೌಡ ಮಳಲಿ, ನಾಗವೇಣಿ ಲಕ್ಣ್ಮಣ ಗೌಡ ಹಾಗೂ ಚಾಲಚಂದ್ರ ಎಂಬುವವರು ತಲೆ ಮರೆಸಿಕೊಂಡಿದ್ದರು. ನಿನ್ನೆ ದಿನ ಪೊಲೀಸರು ಆರೋಪಿಗಳನ್ನ ಬಂಧಿಸಲು ಮುಂದಾಗಿದ್ದರು. ಶಿರಸಿಯ ಗ್ರಾಮೀಣ ಠಾಣೆಯ ಮೂವರು ಪೊಲೀಸರು ಮೊದಲು ಅರ್ಜುನ್ ಅಲಿಯಾಸ ಅರುಣ ಗೌಡ ಎಂಬಾತನ ಬಂಧನಕ್ಕೆ ಆತನ ಮನೆಗೆ ತೆರಳಿದ ವೇಳೆ ಆರೋಪಿ ಬಂಧನಕ್ಕೆ ಹೋಗಿರುವ ಪೊಲೀಸರ ಮೇಲೆ ಕಲ್ಲು,ಹೆಂಚು ತೂರಿ ಹಲ್ಲೆ ನಡೆಸಿದ್ದಾನೆ.
ನಂತರ ಬಂಧನ ಆಗುವುದ ಖಾತರಿ ಪಡಿಸಿಕೊಂಡ ಆರೋಪಿ ಬಂಧನದ ಭೀತಿಯಲ್ಲಿ ಮನೆಯಲ್ಲಿದ್ದ ಇಲಿ ಪಾಷಾಣ ಸೇವಿಸಿ ಆತ್ಮ ಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಆರೋಪಿಯನ್ನ ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೋರ್ವ ಆರೋಪಿ ಬಾಲಚಂದ್ರ ಗೌಡ ಎಂಬಾತನ್ನ ಬಂಧಿಸಲಾವಿದ್ದು, ಮೂರನೇ ಆರೋಪಿಯಾಗಿರುವ ನಾಗವೇಣಿ ಲಕ್ಷ್ಮಣ ಗೌಡ ತಲೆ ಮರೆಸಿಕೊಂಡಿದ್ದಾರೆ.ಆರೋಪಿಗಳ ವಿರುದ್ಧ ಶಿರಸಿ ಸೇರಿದಂತೆ ಕುಂದಾಪುರ, ಬನವಾಸಿ ಸೇರಿ. ಹಲವು ಪೊಲೀಸ್ ಠಾಣೆಯಲ್ಲಿ ಪ್ರಕರಣಗಳಿವೆ.
ಆರೋಪಿಗಳ ಬಂಧನಕ್ಕೆ ಹೋಗಿರುವ ವೇಳೆ ಮೂವರು ಪೊಲೀಸರ ಮೇಲೆ ಹಲ್ಲೆ ಮಾಡಿರುವ ಪ್ರಕರಣಕ್ಕ ಸಂಬಂಧಿಸಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿ.ಎಸ್. ಪ್ರತಾಪ ಅವರಿಂದ ತನಿಖೆ ನಡೆಸಲಾಗುತ್ತಿದೆ.