suddibindu
ಕಾರವಾರ: ಇಂಡಿಯನ್ ಎಕ್ಸಪ್ರೆಸ್‌ನ (Indian Express )ಉತ್ತರಕನ್ನಡ Uttara Kannada )ಜಿಲ್ಲಾ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸುಭಾಷ್ ಚಂದ್ರ ಹುಬ್ಬಳ್ಳಿಗೆ ( Hubli) ವರ್ಗಾವಣೆಗೊಂಡಿದ್ದು, ಈ ಹಿನ್ನಲೆಯಲ್ಲಿ ಜಿಲ್ಲಾ ಪತ್ರಿಕಾ ಪತ್ರಿಕಾಭವನ ನಿರ್ವಹಣಾ ಸಮಿತಿ ವತಿಯಿಂದ ಸಹಭಾಷ್ ಚಂದ್ರ ಅವರನ್ನ ಆತ್ಮೀಯವಾಗಿ ಬಿಳ್ಕೋಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪತ್ರಿಕಾ ಭವನ ನಿರ್ವಹಣಾ‌ ಸಮಿತಿ ಅಧ್ಯಕ್ಷರಾದ ಟಿ ಬಿ ಹರಿಕಾಂತ್ ಸುಭಾಷ್ ಚಂದ್ರ ಕಳೆದ ಹಲವು ವರ್ಷದಿಂದ ಕಾರವಾರದಲ್ಲಿ (karwar) ಕೆಲಸ ಮಾಡಿ ಉತ್ತಮ ಹೆಸರು ಗಳಿಕೆ ಮಾಡಿ ಹೋಗುತ್ತಿದ್ದಾರೆ. ವೃತ್ತಿಯಲ್ಲಿ ಅಪಾರ ಅನುಭವವಿದ್ದು ಪರಿಸರದ ಬಗ್ಗೆ ಹೆಚ್ಚು ಕಾಳಜಿ ಇರುವುದು ಅವರ ಬರವಣಿಗೆಯಿಂದ ನೋಡಬಹುದಿತ್ತು. ಕಾರವಾರದ ಪತ್ರಕರ್ತರ ಏಳಿಗೆಗೆ ಸದಾ ಕಾಲ ಶ್ರಮಿಸಿದ್ದು ಮರೆಯುವಂತದಲ್ಲ ಎಂದರು.

ಹಿರಿಯ ಪತ್ರಕರ್ತ ದೀಪಕ್ ಶೆಣೈ ಮಾತನಾಡಿ ಕಾರವಾರ ಇಂಗ್ಲಿಷ್ ಪತ್ರಿಕೆಯ ವರದಿಗಾರರಾಗಿ ಬಂದು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಭವಿಷ್ಯದಲ್ಲಿ ಇನ್ನು ಉನ್ನತ ಸ್ಥಾನಕ್ಕೆ ಅವರು ಹೋಗುವಂತಾಗಲಿ ಎಂದರು.

ಪತ್ರಕರ್ತ ಶೇಷಗಿರಿ ಮಾತನಾಡಿ ಪರಿಸರದ ಬಗ್ಗೆ ಕಾಳಜಿ ಇದ್ದ ಸುಭಾಷ್ ಅವರು ಕಿರಿಯರಿಗೆ ಸಹಕಾರಿಯಾಗಿದ್ದರು. ಪ್ರತಿ ಸುದ್ದಿಗಳಿಗೆ ಕಿರಿಯರಿಗೆ ಮಾರ್ಗದರ್ಶಕರಾಗಿದ್ದು ಅವರು ಕಾರವಾರದಲ್ಲಿ ಮಾದರಿಯಾಗಿ ಕೆಲಸ ಮಾಡಿದ್ದಾರೆ ಎಂದರು.

ಇನ್ನೊರ್ವ ಪತ್ರಕರ್ತ ಸೂರಜ್ ಮಾತನಾಡಿ ಸುಭಾಷ್ ಅವರು ಬೆಳಗಾವಿಯವರದಾಗಿದ್ದರು ಕಾರವಾರದವರೇ ಆಗಿ ಕೆಲಸ ಮಾಡಿದ್ದಾರೆ. ಪರಿಸರ, ಪ್ರಾಣಿ, ಪಕ್ಷಿಗಳ ಮೇಲೆ ಅವರ ಕಾಳಜಿ ಹಾಗೂ ಬರವಣಿಗೆ ಕಿರಿಯರಿಗೆ ಮಾರ್ಗದರ್ಶನವಾಗಿತ್ತು ಎಂದರು.

ಇದನ್ನೂ ಓದಿ

ಬಿಳ್ಕೋಡುಗೆ ಸಮಾರಂಭ ಸ್ವೀಕರಿಸಿ ಮಾತನಾಡಿದ ಸುಭಾಷ್ ಚಂದ್ರ ಕಾರವಾರದಲ್ಲಿ ಕೆಲಸ ಮಾಡಿದ ಅನುಭವ ಮರೆಯುವಂತದಲ್ಲ. ಪರಿಸರ ಸುದ್ದಿಯ ಜೊತೆ ಇತರೇ ಸುದ್ದಿಯ ಬಗ್ಗೆ ಕಾಳಜಿ ವಹಿಸಿ ಕೆಲಸ ಮಾಡಿದ್ದು ತೃಪ್ತಿ ತಂದಿದೆ ಎಂದರು.

ಕಾರವಾರದಲ್ಲಿ ಪತ್ರಕರ್ತರು ಒಳ್ಳೆಯ ವರದಿಗಳನ್ನ ಬರೆಯಲು ಸೂಕ್ತ ಸ್ಥಳ. ಕುಟುಂಬವೊಂದಕ್ಕೆ ಬಹಿಷ್ಕಾರ ಹಾಕಿದ ವರದಿ, ಬೋಟ್ ನಾಪತ್ತೆಯಾದ ವರದಿ ಹೀಗೆ ಹತ್ತಾರು ವರದಿ ಮುಖಪುಟಕ್ಕೆ ಬಂದಿದ್ದು ಖುಷಿ ನೀಡಿತ್ತು. ಪತ್ನಿಗೆ ಡೆಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಹುಬ್ಬಳ್ಳಿಯಲ್ಲಿ ಕೆಲಸ ಸಿಕ್ಕಿದ್ದರಿಂದ ಅನಿವಾರ್ಯವಾಗಿ ಕಾರವಾರ ಬಿಡುವ ಪರಿಸ್ಥಿತಿ ಬಂದಿದೆ. ಭವಿಷ್ಯದಲ್ಲಿ ಕಾರವಾರದ ಒಡನಾಟ ಹೀಗೆ ಮುಂದುವರೆಸಿಕೊಂಡು ಹೋಗುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಸಮಿತಿಯ ಕಾರ್ಯದರ್ಶಿ ಸಂದೀಪ್ ಸಾಗರ್, ಖಜಾಂಚಿ ಗಣೇಶ ಹೆಗಡೆ, ಪತ್ರಕರ್ತರಾದ ಶೇಷಗಿರಿ ಮುಂಡಳ್ಳಿ, ದೀಪಕ್ ಶೆಟ್ಟಿ ಗೋಕರ್ಣ, ನವೀನ್ ಸಾಗರ್, ದೀಪಕ್ ರೇವಣಕರ್, ಭರತ್, ಕಿಶನ್, ದೇವರಾಜ್, ರವಿಗೌಡ, ಗುರುಪ್ರಸಾದ್, ಅಕ್ಷಯ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.