ಸುದ್ದಿಬಿಂದು ಬ್ಯೂರೋ
ಕಾರವಾರ : ಉತ್ತರಕನ್ನಡ ಜಿಲ್ಲೆಯ ಹಾಲಿ ಬಿಜೆಪಿ ಸಂಸದರಾಗಿರುವ ಅನಂತಕುಮಾರ ಹೆಗಡೆ( Uttara Kannada Lok Sabha ) ಅವರು ಈ ಭಾರಿ ಸ್ಪರ್ಧೆಯಿಂದ ಹಿಂದೆ ಸರಿಯಲಿದ್ದಾರೆ ಎನ್ನುವ ಕಾರಣಕ್ಕೆ ಬಿಜೆಪಿ ಹೈಕಮಾಂಡ ಉತ್ತರಕನ್ನಡ ಜಿಲ್ಲೆಯಿಂದ ಕುಮಾರ ಬಂಗಾರಪ್ಪ (Kumar Bangarappa ) ಅವರನ್ನ ಸ್ಪರ್ಧೆಗಿಳಿಸಲು ಬಿ ಜೆ ಪಿ ಹೈಕಮಾಂಡ ಮುಂದಾಗಿದೆ ಎನ್ನಲಾಗಿದೆ.
ಹೌದು ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ( S Bangarappa ) ಅವರ ಪುತ್ರ ಕುಮಾರ ಬಂಗಾರಪ್ಪ ಅವರನ್ನ ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ನಾಯಕರು ಮುಂದಾಗಿದ್ದಾರೆ ಎನ್ನುವ ಚರ್ಚೆ ಬಿಜೆಪಿ ವಲಯದಿಂದ ಕೇಳಿ ಬರುತ್ತಿದೆ.
ಒಂದು ವೇಳೆ ಅನಂತಕುಮಾರ ಹೆಗಡೆ ಸ್ಪರ್ಧೆಯಿಂದ ಸಂಪೂರ್ಣವಾಗಿ ಹಿಂದಕ್ಕೆ ಸರಿದಲ್ಲಿ ಪರ್ಯಾಯ ಅಭ್ಯರ್ಥಿ ಯಾರು ಎನ್ನುವುದು ಬಿಜೆಪಿ ನಾಯಕರಿಗೂ ಸಹ ಗೊಂದಲ ಉಂಟಾಗಿದೆ.ಅದರಲ್ಲೂ ಈಗಾಗಲೇ ಕುಮಾರ ಬಂಗಾರಪ್ಪ ಅವರು ತಮ್ಮ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆ ಉಂಟಾಗಿದೆ.
ಜಿಲ್ಲೆಯಲ್ಲಿ ಎಸ್ ಬಂಗಾರಪ್ಪ ಅವರ ಅಭಿಮಾನಿಗಳು ಇಂದಿಗೂ ಇರುವುದರಿಂದ ಹಾಗೂ ಲೋಕಸಭಾ ಕ್ಷೇತ್ರವ್ಯಾಪ್ತಿಯಲ್ಲಿ ನಾಮಧಾರಿ ಮತದಾರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣ ಕುಮಾರ ಬಂಗಾರಪ್ಪ ಅವರಿಗೆ ಟಿಕೇಟ್ ನೀಡಿದರೆ ಸಮಾಜದ ಮತಗಳ ಜೊತೆಗೆ ಬಿಜೆಪಿಯ ಸಾಂಪ್ರದಾಯಕ ಮತಗಳ ಮೂಲಕ ಈ ಕ್ಷೇತ್ರವನ್ನ ಗೆಲ್ಲಬಹುದು ಎನ್ನುವುದು ಬಿಜೆಪಿ ನಾಯಕರ ಲೆಕ್ಕಾಚಾರ.
ಆದರೆ ಕುಮಾರ ಬಂಗಾರಪ್ಪ ಹೇಳ್ತಾರ ಇರೋದೆ ಬೇರೆ ಎನ್ನಲಾಗಿದೆ. ಪಕ್ಷದ ಹೈಕಮಾಂಡ ಅಥವಾ ಉತ್ತರಕನ್ನಡ ಜಿಲ್ಲೆಯ ಬಿಜೆಜೆಪಿಗರು ಹೇಳಿದಾಕ್ಷ ಸ್ಪರ್ಧೆ ಮಾಡಲು ಕುಮಾರ ಬಂಗಾರಪ್ಪ ಅವರು ಸಿದ್ದರಿಲ್ಲ ಎನ್ನಲಾಗಿದ್ದು, ಹಾಲಿ ಸಂಸದರಾಗಿರುವ ಅನಂತಕುಮಾರ ಹೆಗಡೆ ಅವರು ಬೆಂಬಲ ನೀಡಿದರೆ ಮಾತ್ರ ಸ್ಪರ್ಧೆ ಮಾಡುವುದಾಗಿ ಕುಮಾರ ಬಂಗಾರಪ್ಪ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನೂ ಕುಮಾರ ಬಂಗಾರಪ್ಪ ಅವರು ಸ್ಪರ್ಧೆಗೆ ಹಿಂದೆಟ್ಟು ಹಾಕಿದರೆ ಜಿಲ್ಲೆಯವರೆ ಆಗಿರುವ ನ್ಯಾಯವಾಧಿ ನಾಗರಾಜ ನಾಯಕ ಅವರ ಹೆಸರು ಸಹ ಮುಚ್ಚುಣಿಯಲ್ಲಿದ್ದು, ಅವರು ಕಳೆದ ಅನೇಕ ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ಗುರುತಿಸಿಕೊಳ್ಳುವ ಮೂಲಕ ಜಿಲ್ಲಾಧ್ಯಂತ ಸಂಘಟನೆ ಮಾಡಿಕೊಂಡಿದ್ದಾರೆ.ಅಷ್ಟೆ ಅಲ್ಲದೆ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರಿಗೆ ಯಾವುದೆ ಸಮಸ್ಯೆಗಳು ಉಂಟಾದಾಗ ಅವರ ಬೆಂಬಲಕ್ಕೆ ನಿಂತಿರುವುದು ಬಿಜೆಪಿ ಹೈ ಕಮಾಂಡ ಗಮನಕ್ಕೂ ಸಹ ಬಂದಿದೆ ಎನ್ನಲಾಗಿದೆ.
ಇವರ ಜೊತೆಯಲ್ಲಿ ಪತ್ರಕರ್ತರಾಗಿರುವ ಹರಿಪ್ರಕಾಶ ಕೋಣೆ ಮನೆ ಅವರು ಸಹ ಟಿಕೆಟ್ ಗಾಗಿ ಪ್ರಯತ್ನಿಸುತ್ತಿದ್ದು, ಜಿಲ್ಲೆಯಲ್ಲಿ ಓಡಾಟ ಸಹ ಆರಂಭಿಸಿದ್ದಾರೆ.ಇನ್ನೂ ಅನಂತಮೂರ್ತಿ ಹೆಗಡೆ ಅವರು ಸಹ ಬಿಜೆಪಿ ಟಿಕೆಟ್ ಗಾಗಿ ಎದುರು ನೋಡುತ್ತಿದ್ದು, ಈಗಾಗಲೇ ಅವರು ಜಿಲ್ಲೆಯಲ್ಲಿ ಹೋರಾಟದ ಮೂಲಕ ಗುರುತಿಸಿಕೊಂಡಿದ್ದಾರೆ.