ಸುದ್ದಿಬಿಂದು ಬ್ಯೂರೋ
ಕಾರವಾರ : ಪಕ್ಷದ ಸಂಘಟನೆ ಕೇವಲ ಜಿಲ್ಲಾಧ್ಯಕ್ಷರೊಬ್ಬರಿಂದ ಆಗುವುದಲ್ಲ.ಅದಕ್ಕೆ ಎಲ್ಲರೂ ಕೈ ಜೋಡಿಸಬೇಕು.ಅಂದಾಗ ಮಾತ್ರ ಪಕ್ಷ ಮತ್ತಷ್ಟು ಸದೃಢವಾಗಲು ಸಾಧ್ಯ ಎಂದು ಉತ್ತರಕನ್ನಡ(uttara Kannada) ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅಭಿಪ್ರಾಯ ಪಟ್ಟಿದ್ದಾರೆ.

ಅವರು ಇಂದು ಕಾರವಾರದಲ್ಲಿ(karwar) ಪತ್ರಿಕಾಗೋಷ್ಠಿಯನ್ನ ಉದ್ದೇಶಿ ಮಾತನಾಡಿ.ಹಾಲಿ ಜಿಲ್ಲಾಧ್ಯಕ್ಷರಾಗಿರುವ ಸಾಯಿ ಗಾಂವ್ಕರ್ ಅವರು ಜಿಲ್ಲೆಯಲ್ಲಿ ಓಡಾಡಿ ಸಂಘಟನೆ ಮಾಡುತ್ತಿದ್ದಾರೆ.ಅವರಿಗೆ ಎಲ್ಲರ ಸಹಕಾರ ಬೇಕು. ನಮಲ್ಲಿ ನಾಲ್ಕು ಮಂದಿ ಶಾಸಕರಿದ್ದೇವೆ ನಾವೇಲ್ಲರೂ ಅವರಿಗೆ ಬೆಂಬಲಿಸಬೇಕು.ನಮ್ಮ ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಸಂಘಟನೆ (Congress Organization) ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ.ಇನ್ನೂ ಕೆಲ ದಿನದಲ್ಲಿ ಲೋಕಸಭಾ ಚುನಾವಣೆ ಬರಲಿದೆ.ಸಂಘಟನೆ ಜಿಲ್ಲಾಧ್ಯಕ್ಷರೊಬ್ಬರ ಹೊಣೆ ಎಂದು ತಿಳಿದುಕೊಳ್ಳದೆ ಎಲ್ಲರೂ ಕೈ ಜೋಡಿಸಿ(Lok Sabha Elections) ಲೋಕಸಭಾ ಚುನಾವಣೆ ಗೆಲ್ಲಬೇಕಿದೆ.
ಕಾಂಗ್ರೆಸ್ ಬಹುದೊಡ್ಡ ಪಕ್ಷ ಇಲ್ಲಿ ಸಣ್ಣಪುಟ್ಟ ತಪ್ಪುಗಳು ಆದರೆ ಅದನ್ನೆ ದೊಡ್ಡದಾಗಿ ಮಾಡದೆ.ಒಟ್ಟಾಗಿ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು. ಪ್ರತಿಯೊಬ್ಬರಿಗೂ ಜವಾಬ್ದಾರಿ ಇದೆ. ಸಂಘಟನೆ ಎಲ್ಲರೂ ಅವರವರ ಜವಾಬ್ದಾರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.ಎಲ್ಲಾಕಡೆ ಸಂಘಟನೆ ಆಗತ್ತಾ ಇದೆ.
ಜಿಲ್ಲಾಧ್ಯಕ್ಷರಿಂದ ಬ್ಲಾಕ್ ಅಧ್ಯಕ್ಷರು ಎಲ್ಲರೂ ಸೇರಿ ಸಂಘಟನೆಯಲ್ಲಿದ್ದಾರೆ.
ಇದರಲ್ಲ ಯಾವ ಗೊಂದಲವೂ ಬೇಡ.ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆ ಈ ಹಿಂದಿನಿಂದ ಹೇಗೆ ಇದೆ ಎನ್ನುವುದು ಎಲ್ಲರಿಗೂ ಗೊತ್ತು ಎಂದು ಹೇಳುವ ಮೂಲಕ. ಸಚಿವ ಮಂಕಾಳು ವೈದ್ಯ ಅವರು ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆಯನ್ನ ಸಮರ್ಥಿಸಿಕೊಂಡಿದ್ದಾರೆ.