ಸುದ್ದಿಬಿಂದು ಬ್ಯೂರೋ
ಕಾರವಾರ :ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನಮ್ಮಲ್ಲಿ ಸಾಕಷ್ಟು ಮಂದಿ ಅಭ್ಯರ್ಥಿ ಆಕಾಂಕ್ಷಿಗಳಿದ್ದಾರೆ. ನಾವು ದೇಶಪಾಂಡೆ ಅವರಲ್ಲಿ ಸ್ಪರ್ಧೆ ‌ಮಾಡುವಂತೆ ಕೇಳಿಕೊಂಡಿದ್ದೇನೆ ಎಂದು ಉತ್ತರಕನ್ನಡ (Utara kannda) ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ(Minister Mankalu Vaidya) ಅವರು ಹೇಳಿದ್ದಾರೆ.

ಅವರು ಇಂದು ಕಾರವಾರದಲ್ಲಿ(karwar)ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಮಕ್ರಮ ಬಳಿಕ ಸುದ್ದಿಗೋಷ್ಟೀಯನ್ನ ಉದ್ದೇಶಿ ಮಾತನಾಡಿದ ಮಂಕಾಳು ವೈದ್ಯ ಅವರು ದೇಶಪಾಂಡೆ(RV Deshpande) ಅವರಲ್ಲಿ ಈ ಭಾರೀಯ ಲೋಕಸಭಾ ಚುನಾವಣೆಗೆ(Lok Sabha Elections) ಸ್ಪರ್ಧೆ ಮಾಡುವಂತೆ ಕೇಳಿಕೊಂಡಿದ್ದೇನೆ.ಅವರು ಸ್ಪರ್ಧೆ ಮಾಡಿದಲ್ಲಿ ಗೆಲುವು ನಿಶ್ಚಿತ.ದೇಶಪಾಂಡೆಯವರಿಗೆ ಜಿಲ್ಲೆಯ ಬಗ್ಗೆ ಸಂಪೂರ್ಣ ಮಾಹಿತಿ ಜೊತೆಗೆ ಅವರು ಎಲ್ಲರಿಗೂ ಚಿರಪರಿಚಿರಾಗಿದ್ದಾರೆ ಹೀಗಾಗಿ ಅವರು ಸ್ಪರ್ಧೆ ಮಾಡಿದ್ದರೆ ಉತ್ತಮ ಎಂದಿದ್ದಾರೆ.

ಪಕ್ಷ ಸಂಘಟನೆ ಚೆನ್ನಾಗಿದೆ

ಇನ್ನೂ ‌ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆ‌‌ ಕೊರತೆ ಆಗಿದೆ ಎನ್ನುವ ಬಗ್ಗೆ ಮೊನ್ನೆಯಷ್ಟೇ ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರು ಸಭೆಯೊಂದರಲ್ಲೆ ಅಸಮಧಾನ ಹೊರಹಾಕಿದ್ದರು. ಈ‌ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಂಕಾಳು ವೈದ್ಯ ಅವರು ನಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆ ಚೆನ್ನಾಗಿದೆ. ಜಿಲ್ಲಾಧ್ಯಕ್ಷರು ಸಹ ಒಳ್ಳೆಯ ಸಂಘಟನೆ ‌ಮಾಡುತ್ತಿದ್ದಾರೆ. ಆದರೆ ಭೀಮಣ್ಣ ನಾಯ್ಕ ಅವರು ಯಾಕೆ ಆ ವಿಚಾರವಾಗಿ ಮಾತನಾಡಿದ್ದರು ಎಂಬುದು ಗೋತ್ತಾಗುತ್ತಿಲ್ಲ.‌ಎಲ್ಲರೂ ಸೇರಿ ಪಕ್ಷ ಸಂಘಟನೆ ಮಾಡಬೇಕಿದೆ ಎಂದರು.

ಯಲ್ಲಾಪುರ ಬಿಜೆಪಿ ಶಾಸಕರಾಗಿರುವ ಶಿವರಾಮ ಹೆಬ್ಬಾರ್ ಅವರು ಕಾಂಗ್ರೆಸ್ ಗೆ ಸೇರ್ಪಡೆ ಆಗಲಿದ್ದಾರೆ ಎನ್ನುವ ವಿಚಾರವಾಗಿ ಮಾತನಾಡಿದ ಮಂಕಾಳು ವೈದ್ಯ ಅವರು ಹೆಬ್ಬಾರ್ ಅವರಿಗೆ ಕಾಂಗ್ರೆಸ್ ಗೆ ಬನ್ನಿ ಎಂದು ಕೇಳಿಲ್ಲ. ಅವರು ಕೂಡ ನಾನು ಕಾಂಗ್ರೆಸ್ ಗೆ ಬರುವುದಾಗಿ ಹೇಳಿಲ್ಲ ಸದ್ಯ ನಮ್ಮ ಪಕ್ಷದಲ್ಲಿ ಕೊರತೆ ಇಲ್ಲ.ಅವರಾಗೆ ಪಕ್ಷಕ್ಕೆ ಬಂದರೆ ಸ್ವಾಗತ ಇದೆ ಅಂದರು.