ಬೆಂಗಳೂರು : ಚೈತ್ರಾ ಕುಂದಾಪುರ (Chaitra Kundapura) ಡೀಲ್ ಪ್ರಕರಣದಲ್ಲಿ ನಮೋ ಬ್ರಿಗೇಡ್ (Namo Brigade) ಮುಖ್ಯಸ್ಥ, ಲೇಖಕ ಚಕ್ರವರ್ತಿ ಸೂಲಿಬೆಲೆ (chakravarthy sulibele) ಹೆಸರು ಕೇಳಿ ಬಂದಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೂಲೆ‌ ಬೆಲೆ‌ ಅವರು ಇದಕ್ಕೂ ನನ್ನಗೂ ಯಾವುದೇ ಸಂಬಂಧವಿಲ್ಲ. ಮಾಧ್ಯಮಕ್ಕೆ ಸ್ಪಷ್ಟನೆ‌ ನೀಡಿದ್ದಾರೆ.

ಈ ವಿಚಾರವನ್ನ ಗೋವಿಂದ ಪೂಜಾರಿ ‌ಅವರು ದೂರು ನೀಡುವ ಮೊದಲೆ‌ ಹೇಳಿದ್ದರು. ಸಿ ಟಿ ರವಿ ಅವರ ಗಮನಕ್ಕೂ ತಂದಿದ್ದೆ ಎಂದಿದ್ದಾರೆ ಚಕ್ರವರ್ತಿ ಸೂಲೆ‌ಬೆಲೆ‌ ಅವರು ವಂಚನೆ ಪ್ರಕರಣದ ಬಗ್ಗೆ ವಜ್ರದೇಹಿ ಮಠದ ರಾಜಶೇಖರಾನಂದ ಶ್ರೀಗಳು ಚಕ್ರವರ್ತಿ ಸೂಲಿಬೆಲೆ (Chakravarti Sulibele) ಅವರ ಹೆಸರು ಪ್ರಸ್ತಾಪಿಸಿದ್ದರು. ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬಂದ ಹಿನ್ನೆಲೆ ಚಕ್ರವರ್ತಿ ಸೂಲಿಬೆಲೆ ಸ್ಪಷ್ಟನೆ ನೀಡಿದ್ದಾರೆ.

ಉದ್ಯಮಿ ಗೋವಿಂದ ಬಾಬು ಪೂಜಾರಿಯವರು ಹಾಗೂ ನಾನು ಬಹಳ ಆತ್ಮೀಯರು. ದೂರು ಕೊಡುವ ಮೊದಲೇ ಗೋವಿಂದ ಬಾಬು ಪೋನ್ ನಲ್ಲಿ ಈ ಬಗ್ಗೆ ಮಾತನಾಡಿದ್ದರು. ಬಿಜೆಪಿಯಲ್ಲಿ ಇದ್ದೇಲ್ಲ ನಡೆಯಲ್ಲ ಅಂತಾ ಹೇಳಿದ್ದೆ, ವಿಚಾರ ತಿಳಿದ ಮೇಲೆ‌ ನನ್ನಗೂ ತುಂಬಾ ಬೇಸರವಾಯತ್ತು.
ಇದೆ ವಿಚಾರಕ್ಕೆ ವಜ್ರದೇಹಿ ಶ್ರೀಗಳು ಪೋನ್ ಕರೆ ಮಾಡಿ ಕೇಳಿದ್ದರು ಈ ವಂಚನೆ ಕೇಸ್​ ಗೊತ್ತಿದೆ ಎಂದು ಸ್ವಾಮೀಜಿ ಅವರಿಗೆ ಹೇಳಿದೆ. ಇವರ ಇತಂಹ ಕೆಲಸದಿಂದ‌‌ ಸಮಾಜಕ್ಕೆ ಕೆಟ್ಟ ಸಂದೇಶ ಹೋಗತ್ತದೆ. ಏನಾದ್ರೂ ಮಾಡಬೇಕು ಎಂದು ಸ್ವಾಮೀಜಿ ಅವರು ಹೇಳಿದ್ದರು, ನಂತರದಲ್ಲಿ ಕೆಲ‌ ಪ್ರಮುಖರ ಗಮನಕ್ಕೆ ತರಲಾಗಿತ್ತು. ಎಂದು ಹೇಳಿದ ಸೂಲಿಬೆಲೆ ಅವರು ಹೇಳಿದ್ದಾರೆ.

ನನಗೆ ಚೈತ್ರಾ ಕುಂದಾಪುರ ಪರಿಚಯವಿಲ್ಲ
ಚೈತ್ರಾ ಕುಂದಾಪುರ ನನಗೆ ಪರಿಚಯವಿಲ್ಲ. ಒಮ್ಮೆ ಮಾತ್ರ ಅವರನ್ನ ಭೇಟಿಯಾಗಿದ್ದೆ. ಅವರು ಸ್ಪಂಧನ ಟಿವಿಯಲ್ಲಿ ಸಂದರ್ಶನ ‌ಮಾಡಿದ್ದರು, ಅದಾದ ಬಳಿ. ಸಂಪರ್ಕವಿಲ್ಲ.ಈಗ ಅವರು ಏನಾದ್ರೂ ಹೇಳಬಹುದು, ಚೈತ್ರಾ ಕೇಸ್ ನಲ್ಲಿ ನನ್ನ ಮೇಲೆ ಆರೋಪಗಳಿದ್ದರೆ ತನಿಖೆ ಆಗಲಿ, ಪ್ರಕರಣದಲ್ಲಿ ನನ್ನ ಹೆಸರು ನೇರವಾಗಿ ಬಂದಿಲ್ಲ. ಆದರೆ ಸ್ವಾಮೀಜಿ ಈ ವಿಚಾರವನ್ನು ನನ್ನ ಬಳಿ ಪ್ರಸ್ತಾಪ ಮಾಡಿದ್ದೇನೆ ಎಂದಿದ್ದಾರೆ.ಆದರೆ ನನ್ನ ತಪ್ಪಿದ್ದರೆ ತನಿಖೆ ಆಗಲಿ” ಎಂದು ಸೂಲಿಬೆಲೆ ಹೇಳಿದ್ದಾರೆ.