ಸುದ್ದಿಬಿಂದು ಬ್ಯೂರೋ
ಕಾರವಾರ : ಉತ್ತರಕನ್ನಡ ಜಿಲ್ಲೆಯ ಶಿರಸಿ(sirsi) ತಾಲೂಕಿನ ಬನವಾಸಿಯಲ್ಲಿ(Banavasi) ಇಂದು ಜಿಲ್ಲಾಧಿಕಾರಿಗಳ ಜನತಾ ದರ್ಶನ ಕಾರ್ಯಕ್ರಮ ಆಯೋಜನೆಯಾಗಿದ್ದು, ಈ ಕಾರ್ಯಕ್ರಮಕ್ಕೆ ತೆರಳಬೇಕಾದ ಜಿಲ್ಲಾಧಿಕಾರಿಗಳು ಸೇರಿ ಜಿಲ್ಲಾಮಟ್ಟದ ಎಲ್ಲಾ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಸರಿಕಾರಿ ವಾಹನಗಳನ್ನ (Government Vehicle,)ಬದಿಗಿಟ್ಟು ಸರಕಾರಿ ಬಸ್ ನಲ್ಲೆ ಪ್ರಯಾಣಿಸಿದ್ದು, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರು ಟಿಕೆಟ್ ತೆಗೆದುಕೊಂಡೆ ಪ್ರಯಾಣಿಸಿರುವುದು ವಿಶೇಷ.

ಬನವಾಸಿಯ ಜಯಂತಿ ಪ್ರೌಢಶಾಲೆಯಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.ಸರ್ಕಾರದ ಬೊಕ್ಕಸಕ್ಕೆ ಜನತಾ ದರ್ಶನದಿಂದ ಹೆಚ್ಚುವರಿ ನಷ್ಟ ತಪ್ಪಿಸಲು ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸಿದರು.

ಜಿಲ್ಲಾಕೇಂದ್ರವಾಗಿರುವ ಕಾರವಾರದಿಂದ ಬನವಾಸಿ 150 ಕಿಲೊಮೀಟರ್ ದೂರುವಿದ್ದು ಒಟ್ಟು 300 ಕಿಲೋಮೀಟರ್ ಪ್ರಯಾಣಿಸಬೇಕಿದ್ದು ಎಲ್ಲಾ ಅಧಿಕಾರಿಗಳು ಕೂಡ ತಮ್ಮಗೆ ನೀಡಿರುವ ಸರಕಾರಿ ವಾಹನದಲ್ಲೆ ಪ್ರಯಾಣ ಮಾಡಿದ್ದರೆ‌ ಲಕ್ಷಾಂತರ ರುಪಾಯಿ ಖರ್ಚಾಗುತ್ತದೆ.

ಹೀಗಾಗಿ ಸರ್ಕಾರದ ಬೊಕ್ಕಸಕ್ಕೆ ಕರ್ಚಾಗುವ ಹಣ ಉಳಿಸಲು ಪ್ರಯಾಣಕ್ಕೆ ಸರ್ಕಾರಿ ಬಸ್ ನನ್ನು ಆಯ್ಕೆ ಮಾಡಿಕೊಂಡು ತಮ್ಮ ಸಿಬ್ಬಂದಿಗಳೊಂದಿಗೆ ಸಹ ಪ್ರಯಾಣ ಮಾಡಿ ಮಾದರಿಯಾಗಿದ್ದಾರೆ.