ಸುದ್ದಿಬಿಂದು ಬ್ಯೂರೋ
ಕಾರವಾರ : ಇಸ್ರೇಲ್ ದೇಶದ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು,ಇಸ್ರೇಲ್ ದೇಶಗಳಲ್ಲಿ ವ್ಯಾಪಾರ, ಶಿಕ್ಷಣ,ಉದ್ಯೋಗ ಹಾಗೂ ಇತರ ಉದ್ದೇಶಗಳಿಗೆ ಹೋಗಿರುವ ಮತ್ತು ವಾಸವಾಗಿರುವ.
ಉತ್ತರಕನ್ನಡ ಜಿಲ್ಲೆಗೆ ಸಂಬಂಧಪಟ್ಟ ಭಾರತದ ಪ್ರಜೆಗಳಿದ್ದಲ್ಲಿ ಅವರ ಬಗ್ಗೆ ಮಾಹಿತಿಯನ್ನು ಜಿಲ್ಲಾಧಿಕಾರಿಯವರ ಕಚೇರಿ ಉತ್ತರಕನ್ನಡದಲ್ಲಿ(Uttarkannada)ತೆರೆದಿರುವ ಕಂಟ್ರೋಲ್ ರೂಂ, ಸಂಖ್ಯೆ: 1077/ 08382-229857/ ಮೊ ನಂ. 9483511015ಕ್ಕೆ ಕರೆಮಾಡಿ ಕೂಡಲೇ ನೀಡುವಂತೆ ಕೋರಲಾಗಿದೆ ಅಥವಾ ರಾಜ್ಯ ಸರ್ಕಾರದ ತುರ್ತು ಸಂಖ್ಯೆ: 080- 22340676, 080-22253707 ಕ್ಕೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.