ಸುದ್ದಿಬಿಂದು ಬ್ಯೂರೋ
ಕಾರವಾರ : ಸತೀಶ್ ಸೈಲ್ ನಾನು ಡಬಲ್ ಇಂಜಿನ್ ಇದ್ದಂತೆ..ಸೈಲ್ ಕೆಲಸ ಮಾಡದೆ ಇದ್ದರೆ ನಾನೆ ಅವರನ್ನ ಹಿಡಿದು ಮಾಡಿಸುತ್ತೆನೆ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ , ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಪರ ಪ್ರಚಾರದ ವೇಳೆ ಹೇಳಿದ್ದಾರೆ‌.

ಕಾರವಾರ ಅಂಕೋಲಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಪರ ಆನಂದ ಅಸ್ನೋಟಿಕರ್, ಕಾರವಾರ ಹಾಗೂ ಅಂಕೋಲಾ ಭಾಗದಲ್ಲಿ ಸೈಲ್ ಪರ ಪ್ರಚಾರ ನಡೆಸುವ ವೇಳೆ ಮಾತನಾಡಿರ ಆನಂದ ಅಸ್ನೋಟಿಕರ್, ರಾಜ್ಯ ಹಾಗೂ ಕೇಂದ್ರ ಎರಡು ಕಡೆ ಬಿಜೆಪಿ ಆಡಳಿತದಲ್ಲಿ ಇದ್ದು, ಬಿಜೆಪಿಗರು ನಮ್ಮದು ಡಬಲ್ ಇಂಜಿನ್ ಸರಕಾರ ಎಂದು ಹೇಳತ್ತಿದ್ದಾರೆ‌. ಅಲ್ಲಿ ಅವರು ಡಬಲ್ ಇಂಜಿನ್ ಆಗಿದ್ದರೆ‌ ಕಾರವಾರ – ಅಂಕೋಲಾ ಕ್ಷೇತ್ರದಲ್ಲಿ ನಾನು ಹಾಗೂ ಸತೀಶ್ ಸೈಲ್ ಇಬ್ಬರೂ ಡಬಲ್ ಇಂಜಿನ್ ಇದ್ದಂತೆ.ಈ ಬಾರಿ ಎಲ್ಲರೂ ಸತೀಶ ಸೈಲ್ ಅವರನ್ನ ಬೆಂಬಲಿಸಬೇಕು. ಸತೀಶ್ ಗೆದ್ದು ಬಂದರೆ ನಾನು ಗೆದ್ದ ಹಾಗೆ..ಎಲ್ಲರೂ ಈ ಬಾರಿ ಸೈಲ್ ಅವರನ್ನ ಬೆಂಬಲಿಸುತ್ತಿರಿ ಎಂಬ ನಂಬಿಕೆ ಇದೆ.

ನಾನು ಕೂಡ ಸ್ಪರ್ಧೆ ಮಾಡಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಸ್ಪರ್ಧೆ ಮಾಡಿಲ್ಲ. ಅವೆಲ್ಲವೂ ತಮ್ಮಗೆ ಗೋತ್ತಿದೆ ಅಂತಾ ತಿಳಕೊಂಡಿದ್ದೆನೆ. ನಾನು ಸ್ಪರ್ಧೆ ಮಾಡದೆ ಇರುವ ಕಾರಣ ಸತೀಶ್ ಸೈಲ್ ಅವರನ್ನ ಬೆಂಬಲಿಸುತ್ರಿದ್ದೆನೆ ಎಂದಿದ್ದಾರೆ.