ಕಾರವಾರ: ತಾಲ್ಲೂಕಿನ ಗೋವಾ ಗಡಿಯಲ್ಲಿರುವ ಗೋಟೆಗಾಳಿ ಸಮೀಪದ ಲಾಂಡೆ, ಬಾಳ್ನಿ, ಹಾಗೂ ಗೋಯರ್ ಸೇರಿದಂತೆ ವಿವಿಧೆಡೆ ಜನರಿಗೆ ಅವಶ್ಯಕವಾದ ಕೆಲಸಗಳನ್ನು ಮಾಡಿದ್ದು, ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಲು ಆಶೀರ್ವಾದ ಮಾಡುವಂತೆ ಶಾಸಕಿ ರೂಪಾಲಿ ಎಸ್. ನಾಯ್ಕ ವಿನಂತಿಸಿದರು.

ತಾಲ್ಲೂಕಿನ ಗೋಟಗಾಳಿ ಭಾಗದಲ್ಲಿ ಪ್ರಚಾರ ನಡೆಸಿ ಅವರು ಮಾತನಾಡಿದರು.ಗಡಿ ಪ್ರದೇಶದಲ್ಲಿರುವ ಲಾಂಡೆ ಗ್ರಾಮದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಿಮ್ಮೆಲ್ಲರ ಮತದಿಂದ ನಾನು ಮತ್ತೊಮ್ಮೆ ಆಯ್ಕೆಯಾಗಿ ಆ ಎಲ್ಲಾ ಯೋಜನೆಗಳನ್ನು ಪೂರೈಸುತ್ತೇನೆ ಎಂದು ಭರವಸೆ ನೀಡಿದರು.
ಸಾರ್ವಜನಿಕರು ಮಾತನಾಡಿ ಯಾವುದೇ ಶಾಸಕರು ಮಾಡದ ಅಭಿವೃದ್ಧಿ ಕೆಲಸವನ್ನು ರೂಪಾಲಿ ಎಸ್. ನಾಯ್ಕ ಅವರು ಮಾಡಿದ್ದಾರೆ.

ಹಿಂದೆ ಯಾವ ಶಾಸಕರೂ ಸಹ ನಮ್ಮ ಕಷ್ಟಗಳಿಗೆ ಸ್ಪಂದಿಸಲಿಲ್ಲ ಆದರೆ ಮಾತೃಹೃದಯಿ ರೂಪಾಲಿ ನಾಯ್ಕರವರು ನಮ್ಮ ಕಷ್ಟಗಳಿಗೆ ಸ್ಪಂದಿಸಿದರು. ಹಿಂದೆಂದೂ ಬಸ್ ನ್ನೇ ಕಾಣದ ನಮ್ಮ‌ಊರು ಈಗ ಬಸ್ ಸೌಕರ್ಯವನ್ನು ಹೊಂದಿದೆ. ನೀರಿನ ಸಮಸ್ಯೆಯಿಂದ ವರ್ಷಾನುಗಟ್ಟಲೆ ಹಿಂದಿನ ಜನ ಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾರೊಬ್ಬರೂ ಸ್ಪಂದಿಸಲಿಲ್ಲ ಆದರೆ ರೂಪಾಲಿ ನಾಯ್ಕ‌ ಶಾಸಕಿಯಾದ ಕಡಿಮೆ ಅವಧಿಯಲ್ಲಿ ನಮ್ಮೆಲ್ಲರ ಸಮಸ್ಯೆಗೆ ಪರಿಹಾರ ಒದಗಿಸಿದ್ದಾರೆ ಮುಂದೆಯೂ ಅನೇಕ ಕಾಮಗಾರಿಗಳು ಅಭಿವೃದ್ಧಿ ಕಾರ್ಯಗಳನ್ನು ಅವರೇ ಮಾಡಲಿದ್ದಾರೆ ಹಾಗೆಯೇ ಅವೆಲ್ಲ ಉದ್ಘಾಟನೆಯೂ ಅವರ ಕೈ ಇಂದಲೇ ಆಗಬೇಕು. ನಮ್ಮ ಕಷ್ಟದ ಸಮಯದಲ್ಲಿ ಸ್ಪಂದಿಸಿದ ರೂಪಾಲಿ ನಾಯ್ಕರವರನ್ನೇ ನಾವು ಬೆಂಬಲಿಸಲಿದ್ದೇವೆ ಈ ಬಾರಿ ನಾವು ಬಿಜೆಪಿ ಸರಕಾರವನ್ನೇ ಬೆಂಬಲಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ, ನಗರಸಭೆ ಉಪಾಧ್ಯಕ್ಷರಾದ ಪಿ.ಪಿ. ನಾಯ್ಕ ಹಾಗೂ ಪ್ರಮುಖರಾದ ಬಾಬು ನಾಯ್ಕ, ಸುಧಾಕರ, ಅನಿಲ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.