ಕುಮಟಾ : ಜೆಡಿಎಸ್ ಅಭ್ಯರ್ಥಿ ಹೆಸರನ್ನ ಕೆಡಿಸಬೇಕು ಎನ್ನುವ ಉದ್ದೇಶದಿಂದ ಯುವಕನೋರ್ವ ಕಾಂಗ್ರೆಸ್ ಪ್ರಚಾರದ ವಾಹನದ ಚಾಲಕನಿಗೆ ನಾನು ಸೂರಜ್ ನಾಯ್ಕ ಅವರ ಕಡೆಯವನು ಎಂದು ಹೇಳಿ ಚಾಲಕನ ಮೇಲೆ ಹಲ್ಲೆ ನಡೆಸಿದ ಹೊನ್ನಾವರದ ಯುವಕನನ್ನ ಹಿಡಿದು, ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

ಕುಮಟಾ-ಹೊನ್ನಾವರ ಕ್ಷೇತ್ರದಲ್ಲಿ ಜರೊಟ್ಟಿಗೆ ಇದ್ದು ಜನರ ಕಷ್ಟಗಳಿಗೆ ಧ್ವನಿಯಾಗಿಯಾಗುವ ಮೂಲ ಎಲ್ಲರ ಮನೆ ಮಗನಂತಿರುವ ಸೂರಜ್ ನಾಯ್ಕ ಸೋನಿ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ ಸೋನಿ ಪರ ಅನುಕಂಪದ ಅಲೆ ಇರುವುದರಿಂದ ಈ ಬಾರಿ ಸೋನಿಗೊಂದು ಅವಕಾಶ ನೀಡಬೇಕು ಎಂಬ ಭಾವನೆ ಕ್ಷೇತ್ರದಲ್ಲಿ ಮೂಡುವಂತಾಗಿದೆ. ಈ ಭಾವನೆಯನ್ನು ಕೆಡಿಸುವ ದುರುದ್ದೇಶದಿಂದಲೇ ಕೆಲ ಕಿಡಿಗೇಡಿಗಳು ಸೋನಿ ವಿರುದ್ಧ ಅಪಪ್ರಚಾರ ಶುರು ಮಾಡಿದ್ದಾರೆ.

ಅದರ ಭಾಗವಾಗಿ ಏ. 30ರ ರಾತ್ರಿ ಕುಮಟಾ ಪಟ್ಟಣದ ಬಸ್ ನಿಲ್ದಾಣದ ಎದುರು ಪ್ರಚಾರ ನಡೆಸುತ್ತಿದ್ದ ಕಾಂಗ್ರೆಸ್ ವಾಹನ ತಡೆದ ಯುವಕನು, ಕಾಂಗ್ರೆಸ್ ಪ್ರಚಾರಕನಾದ ಚಾಲಕನ ಮೇಲೆ ಹಲ್ಲೆ ಮಾಡಿರುವುದಲ್ಲದೇ ಈ ಕ್ಷೇತ್ರ ಸೋನಿ ಅವರದ್ದು, ಹೊರಗಿನಿಂದ ಬಂದಂತಹ ವ್ಯಕ್ತಿಪರ ಪ್ರಚಾರ ಯಾಕೆ ಮಾಡುತ್ತಿದ್ದೀಯಾ ಎಂದು ಬೆದರಿಸಿದ್ದಾನೆ. ಇದನ್ನು ಗಮನಿಸಿದ ಕೆಲ ಸ್ಥಳೀಯರು ಸೋನಿ ಅವರಿಗೆ ಮಾಹಿತಿ ನೀಡಿದ್ದರು. ನಿಮ್ಮ ಹೆಸರಿನಲ್ಲಿ ಕೆಲವರು ಷಡ್ಯಂತ್ರ ರೂಪಿಸುವ ಮೂಲಕ ನಿಮ್ಮ ಹೆಸರನ್ನು ಕ್ಷೇತ್ರದಲ್ಲಿ ಹಾಳುಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದರು. ಹಾಗಾಗಿ ಸೋನಿ ಅವರ ಗೆಳೆಯರ ಬಳಗದವರು ಹಲ್ಲೆ ಮಾಡಿದ ವ್ಯಕ್ತಿಯನ್ನು ಹುಡುಕುತ್ತಿದ್ದರು.ಈತ ಕುಮಟಾದ ಹೊಸ ಬಸ್ ನಿಲ್ದಾಣ ಎದುರಲ್ಲಿ ಆ ವ್ಯಕ್ತಿಯನ್ನು ಗುರುತು ಮಾಡಿದ ಸೋನಿ ಗೆಳೆಯರ ಬಳಗದವರು ತಕ್ಷಣ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆತ ಹೊನ್ನಾವರ ಹಾರೋಡಿಯ ರಾಘು ಶೇಟ್ ಎಂದು ತಿಳಿದುಬಂದಿದೆ. ಈ ಬಗ್ಗೆ ಕುಮಟಾ ಠಾಣೆ ಪೊಲೀಸರು ವಿಚಾರಣೆ ನಡೆಸಿದಾಗ, ತನ್ನಿಂದ ತಪ್ಪಾಗಿದೆ ಎಂದು ತಪ್ಪೊಪ್ಪಿಕೊಂಡ ರಾಘು ಶೇಟ್ ಇನ್ಮುಂದೆ ಇಂತಹ ಕೆಲಸ ಮಾಡುವುದಿಲ್ಲ ಎಂದು ಕ್ಷಮೆ ಯಾಚಿಸಿದ್ದಾನೆ. ಹೊನ್ನಾರವರದ ಬಿಜೆಪಿಯ ಶಂಕರ್ ಹೆಗಡೆ ರಾಘು ಶೇಟ್ ಗೆ ಬುದ್ದಿ ಹೇಳಿದ್ದು, ನೀನು ಮಾಡಿದ್ದು ತಪ್ಪಾಗಿದೆ. ಮೊದಲು ಹೋಗಿ ಸೂರಜ್ ನಾಯ್ಕ ಅವರ ಬಳಿ ಕ್ಷಮೆ ಕೇಳಬೇಕು ಎಂದು ರಾಘು ಶೇಟ್ ಗೆ ಹೇಳಿದ್ದು, ರಾಘು ಶೇಟ್ ಸೂರಜ್ ನಾಯ್ಕ ಅವರ ಬಳಿ ನಾನು ನಿಮ್ಮ ಹೆಸರು ಹೇಳಿ ಹಲ್ಲೆ ಮಾಡಲು ಮುಂದಾಗಿದ್ದು, ತಪ್ಪಾಯತ್ತು.. ಎಂದು ಕೈ ಮುಗಿದಿದ್ದಾರೆ.ಇದಕ್ಕೆ ಸೂರಜ್ ನಾಯ್ಕ ,ಇರಲಿ ರಾಘು ನಿಮ್ಮಂತಹ ಯುವಕರು ದಾರಿ ತಪ್ಪಬಾರದು. ಒಳ್ಳೆ ಮಾರ್ಗದಲ್ಲಿ ನಡಿಬೇಕು. ಯಾರೋ ಹೇಳತ್ತಾರೆ ಅಂತಾ ಕೇಳ ಕೊಂಡು ನಿಮ್ಮ ಭವಿಷ್ಯ ಹಾಳು ಮಾಡಕೊಳ್ಳಬೇಡಿ. ಎಂದು ತನ್ನ ಹೆಸರನ್ನ ಹಾಳು ಮಾಡಲು ಹೋಗಿದ್ದ ರಾಘು ಶೇಟ್ ಗೆ ಸೂರಜ್ ನಾಯ್ಕ ಅವರು ಬುದ್ದಿ ಮಾತನ್ನ ಹೇಳುವ ಮೂಲಕ ಯುವಕನ ಮನಸ್ಥಿತಿ ಬದಲಿಸಿದ್ದಾರೆ.

ಹೀಗಾಗಿ ರಾಘು ಅವರ ಮೇಲೆ ಯಾವುದೇ ಪ್ರಕರಣ ದಾಖಲಾಗದಿದ್ದರೂ ಪೊಲೀಸರು ತಪ್ಪೊಪ್ಪಿಗೆ ಪತ್ರ ಬರೆಯಿಸಿಕೊಂಡು ರಾಘುನನ್ನು ಬಿಡುಗಡೆಗೊಳಿಸಿದ್ದಾರೆ.