ಸುದ್ದಿಬಿಂದು ಬ್ಯೂರೋ
ಕುಮಟಾ : ಕೂಜಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ (ಕುಮಟಾ ಮೀನು ಮಾರುಕಟ್ಟೆ ಸಮೀಪವಿರುವ) ಯಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿಧವೆ ಓರ್ವಳಿಗೆ ಅದೆ ಶಾಲೆಯ ವಾರ್ಡನ್ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ಮಹಿಳೆ‌ ಆರೋಪಿಸಿದ್ದಾಳೆ. ಮಹಿಳೆ‌ಯ ರಕ್ಷಣೆಗೆ ನಿಲ್ಲಬೇಕಾದ ಹಿರಿಯ ಅಧಿಕಾರಿಗಳು ಇದೀಗ ಆಕೆಯನ್ನೇ ಕೆಲಸದಿಂದ‌ ತೆಗೆದು ಲೈಂಗಿಕ ಕಿರುಕುಳ ನೀಡಿದ ಸಿಬ್ಬಂದಿ ರಕ್ಷಣೆಗೆ ನಿಂತಿರುವುದು ಹಿರಿಯ ಅಧಿಕಾರಯೊಬ್ಬರ ನಡೆ ಸಾಕಷ್ಟು ಅನುಮಾನಕ್ಕೆ‌ ಕಾರಣವಾಗಿದೆ.

ಮಹಿಳೆ ಕಳೆದ ಸತತ ಏಳು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ವಸತಿ ಶಾಲೆಯೊಂದರಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾಳೆ.ಆ ಶಾಲೆಯ‌ ವಾರ್ಡನ್ ಆಗಿರುವ ಶಂಕರ ಎಸ್.ಪೊಳ್ ಎಂಬಾತ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ತನಗೆ ಸಹಕರಿಸದಿದ್ದರೆ ಕೆಲಸದಿಂದ ತೆಗೆಯುವುದಾಗಿ ಬೆದರಿಕೆ ಹಾಕಿರುವ ಬಗ್ಗೆ ಮಹಿಳೆ ಆರೋಪಿಸಿದ್ದಾಳೆ.

ಕಳೆದ ಮೂರು ವರ್ಷಗಳಿಂದ‌ ಅಲ್ಲಿನ ವಾರ್ಡನ್ ತನಗೆ ದೈಹಿಕವಾಗಿಯೂ ಮತ್ತು ಲೈಂಗಿಕವಾಗಿಯೂ ತೀವ್ರ ಕಿರುಕುಳ ನೀಡುತ್ತಾ ಬಂದಿದ್ದಾರೆ. ಈ ಬಗ್ಗೆ ಮಹಿಳಾ ಸಾಂತ್ವನ ಕೇಂದ್ರಕ್ಕೆ ಹಾಗೂ ಸ್ಥಳೀಯ ಶಾಸಕರಿಗೂ ವಾರ್ಡನ್ ವರ್ತನೆಯ ಬಗ್ಗೆ ಮಹಿಳೆ ದೂರಿದ್ದಾಳೆ.ಶಂಕರ ಎಸ್.ಪೊಳ್ ಅವರು ನನಗೆ ಲೈಂಗಿಕ ಕಿರುಕುಳ ನೀಡುತ್ತಾ ಬಂದಿದ್ದಾರೆ. ಈ ರೀತಿ ಮಾಡದಂತೆ ಮಹಿಳೆ ಅನೇಕ ಬಾರಿ ಆತನ‌ ಬಳಿ‌ ಕೈ ಮುಗಿದು ಬೇಡಿಕೊಂಡಿದ್ದೇನೆ ಆದರೂ ಬಿಡುತ್ತಿಲ್ಲ ಮೈ‌ಮೇಲೆ ಕೈ ಹಾಕುವುದು ಹೀಗೆ ಅಸಭ್ಯವಾಗಿ‌ ನಡೆದುಕೊಳ್ಳುತ್ತಿದ್ದಾರೆಂದು ಮಹಿಳೆ ಆರೋಪಿಸಿದ್ದಾಳೆ.

ಮಕ್ಕಳ ಬಳಿ ಸ್ವಚ್ಛತಾ ಕೆಲಸ ಮಾಡಿಸುತ್ತೇನೆ ಎಂದು ಮಕ್ಕಳಿಂದ ಸುಳ್ಳು ಪತ್ರವನ್ನು ಬರೆಯಿಸಿಕೊಂಡಿದ್ದಾರೆ. ನನಗೆ ಸಹಕರಿಸದಿದ್ದರೆ ಕೆಲಸದಿಂದ ತೆಗೆದು ಹಾಕುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ಬೇಸತ್ತಿರುವುದಾಗಿ ನೊಂದ ಮಹಿಳೆ‌ ಕಣ್ಣೀರು ಹಾಕುತ್ತಿದ್ದಾಳೆ. ವಸತಿ ನಿಲಯದ ಪ್ರಾಂಶುಪಾಲ ಜಾಗರಾಜ ಹೆದ್ದಾರಿ ಅವರಿಗೆ, ಮಹಿಳಾ ಸಾಂತ್ವನ ಕೇಂದ್ರ ಕುಮಟಾ ಹಾಗು ಉಪನಿರ್ದೇಶಕರು ಸಮಾಜಕಲ್ಯಾಣ ಇಲಾಖೆ ಕಾರವಾರ ಅವರಿಗೂ ದೂರು ನೀಡಿದ್ದೇನೆ. ಆದರೆ ಈವರೆಗೂ ಅವರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ.

ನಿತ್ಯವೂ ನನ್ನ‌ ಮೇಲೆ ಲೈಂಗಿಕ ಕಿರುಕುಳ ಜಾಸ್ತಿಯಾಗುತ್ತಿದೆ, ಒಂದು ಕಡೆ ಪತಿಯನ್ನ‌‌ ಕಳೆದುಕೊಂಡ ನೋವಿನಲ್ಲಿ ಕಾಲ ಕಳೆಯುತ್ತಿದ್ದೇನೆ. ಇವತ್ತು ಸರಿ ಹೋಗಬಹುದು ನಾಳೆ ಸರಿ‌ಹೋಗಬಹುದು ಎಂದು ಇಷ್ಟು ದಿನ ಹೇಗೋ ಸುಮ್ಮನಾಗಿದ್ದೆ. ಆದರೆ ದಿನ ಹೋದಂತೆ ಕಿರುಕುಳ ಜಾಸ್ತಿ ಆಗತ್ತಾನೆ ಇದೆ. ರಾತ್ರಿ ಪಾಳೆಯದಲ್ಲಿ ಇರುವಾಗ ತನ್ನ ರೂಂ ಗೆ ಬರುವಂತೆ ಕರೆಯುತ್ತಾರೆ. ಹೀಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆಂದು ಮಹಿಳೆ ಆರೋಪಿದ್ದಾರೆ.

ಉಮೇಶ ವೈ ಕೆ ಹೀಗೆ .?
ವಾರ್ಡನ್‌ ವಿರುದ್ಧ ಮಹಿಳೆ ಲೈಂಗಿಕ ಕಿರುಕಿಳ‌ ಆರೋಪ ಮಾಡುತ್ತಿದ್ದಂತೆ ಸ್ಥಳಕ್ಕೆ ಬಂದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಉಮೇಶ ವೈ ಕೆ ಅವರು ಮಹಿಳೆಗೆ ಕಿರುಕುಳ ನೀಡಿದ ವಾರ್ಡ್ ವಿರುದ್ದ ಕ್ರಮ ಕೈಗೊಳ್ಳುವುದನ್ನ ಬಿಟ್ಟು ವಾರ್ಡನ್‌ನಿಂದ ನಿರಂತರವಾಗಿ ಲೈಂಗಿಕ ಕಿರುಕಿಳಕ್ಕೆ ಒಳಗಾಗಿರುವ ನೊಂದ ಮಹಿಳೆಯನ್ನೆ ಕೆಲಸದಿಂದ ತೆಗೆಯಲು ಮುಂದಾಗಿದ್ದಾರೆ. ಮಹಿಳೆ ಆಗಿರುವ ಕಿರುಕುಳವನ್ನ ಕೇಳಿಸಿಕೊಳ್ಳಲು ಸಹ ಮುಂದಾಗದ ಈ ಉಪನಿರ್ದೇಶಕರು ಏಕಾಏಕಿ ಆ ಮಹಿಳೆಗೆ ಈ‌ ತಕ್ಷಣದಿಂದ ಕೆಲಸ ಬಿಟ್ಟು ಮನೆಗೆ ಹೋಗುವಂತೆ ಬೆದರಿಕೆ ಹಾಕಿದ್ದಾರಂತೆ. ಯಾಕೆ ನಾನು ಕೆಲಸ ಬಿಡಬೇಕು ಅಂತಾ ಮಹಿಳೆ ಉಪನಿರ್ದೇಶಕರನ್ನ‌ ಪ್ರಶ್ನೆ ಮಾಡಿದ್ದಾರಂತೆ ಅದಕ್ಕೆ ಉಪನಿರ್ದೇಶಕರು‌ ನಾನು ಹೇಳಿದಷ್ಟು ಮಾಡು ಅಂತಾ ಮಹಿಳೆಗೆ ಬೆದರಿಸಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ