ಸುದ್ದಿಬಿಂದು ಬ್ಯೂರೋ
ಹೊನ್ನಾವರ: ಕಠಿಣ ಪರಿಶ್ರಮವಿದ್ದರೆ ಸಾಧನೆ ಮಾಡಬಹುದು ಎನ್ನುವುದಕ್ಕೆ ಹೊನ್ನಾವರದ ಯಶವಂತ ಎನ್ನುವ ವಿದ್ಯಾರ್ಥಿಯ ಸಾಧನೆಯೆ ಸಾಕ್ಷಿಯಾಗಿದೆ. ಇತ್ತೀಚಿನ ವರ್ಷದಲ್ಲಿ ಕಂಪ್ಯೂಟರ್ ಜ್ಞಾನ ಎಲ್ಲರಿಗೂ ತಿಳಿದಿದೆ.ಆ ವಿಷಯದಲ್ಲಿ ಹಲವು ಸಾಧನೆಯು ಮಾಡುತ್ತಿದ್ದಾರೆ.
ಆದರೆ, ಈ ಯುವಕ 15. ಸೆಕೆಂಡ್‌ನಲ್ಲಿ 121 ಶಬ್ದಗಳನ್ನು ಟೈಪಿಂಗ್ ಮಾಡುತ್ತಾ ಇಂಡಿಯಾ ಬುಕ್ ಆಪ್ ರೆಕಾರ್ಡ್ ಗಿಟ್ಟಿಸಿಕೊಂಡಿದ್ದಾನೆ. ಪಟ್ಟಣದ ಮಾರ್ಥೋಮಾ ಶಾಲೆಯಲ್ಲಿ ಎಸ್ಎಸ್ಎಲ್‌ಸಿ ಅಧ್ಯಯನ ಮಾಡುತ್ತಿರುವ ಯಶವಂತ ಈ ಸಾಧನೆ ಮಾಡಿದವನಾಗಿದ್ದಾನೆ. 15 ಸೆಂಕೆಡನಲ್ಲಿ 121 ಶಬ್ದಗಳನ್ನು ಟೈಪಿಂಗ್ ಮಾಡುವ ಈ ಯುವಕ ಯಾವುದೇ ಕಂಪ್ಯೂಟರ್ ಕ್ಲಾಸ್‌ಗೆ ಹೊಗದೇ ಸಾಧನೆ ಮಾಡಿರುವುದು ವಿಶೇಷವಾಗಿದೆ.
5ಭಾಷೆಯಲ್ಲಿ ಕಂಪ್ಯೂಟರ್ ಟೈಪಿಂಗ್ ಮಾಡುವ ಇವನು ಯಾವುದೇ ಕಂಪ್ಯೂಟರ್ ಜ್ಞಾನದ ಸರ್ಟಿಫಿಕೇಟ್ ಪಡೆಯದೇ ಇದ್ದರೂ, ದೇಶವೇ ತನ್ನತ್ತ ತಿರುಗಿ ನೋಡುವ ರೀತಿ ಸಾಧನೆ ಮಾಡಿದ್ದಾನೆ. ಇವನು ರಜೆಯ ಅವಧಿಯಲ್ಲಿ ಎನಿಮೆಶನ್ ಮೂಲಕವು ಹಣವನ್ನುಗಳಿಸಿ ತನ್ನ ವಿದ್ಯಾಭ್ಯಾಸಕ್ಕೆ ಅನೂಕೂಲ ಮಾಡಿಕೊಳ್ಳುತ್ತಾ ಹೆತ್ತವರಿಗೂ ಸಹಾಯ ಮಾಡುತ್ತಿದ್ದಾನೆ. ಇದೀಗ ಇಂಡಿಯನ್ ಬುಕ್ ಆಪ್ ರೆಕಾರ್ಡ್‌ಲ್ಲಿ ಕಂಪ್ಯೂಟರ್ ಟೈಪಿಂಗ್ ವೇಗವಾಗಿ ಮಾಡಿದ ಕಾರಣಕ್ಕಾಗಿಯೇ ಅವಾರ್ಡ್ ಗಿಟ್ಟಿಸಿಕೊಂಡಿದ್ದಾನೆ.
ತಂದೆ ಉದ್ದಿಮೆದಾರರಾದ ಸಿಮನ್ ಡೈವಟ್ ತಾಯಿ ತಾಲೂಕ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಮಂಗಲ ನಾಯ್ಕ ಇವರ ಪುತ್ರನಾಗಿದ್ದಾರೆ. ಭವಿಷ್ಯದಲ್ಲಿ ನಾಸಾ ವಿಜ್ಞಾನಿಯಾಗುವ ಕನಸು ಹೊತ್ತಿರುವ ಯುವಕನ ಸಾಧನೆ ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಮ್ಮೆ ಎನಿಸುತ್ತಿದೆ.
ಇದನ್ನೂ ಓದಿ