ಸುದ್ದಿಬಿಂದು ಬ್ಯೂರೋ
ಕಾರವಾರ : ವರ್ಷಕ್ಕೆ ಒಮ್ಮೆ ಬಾಗಿಲು ತೆರೆದು ಭಕ್ತರಿಗೆ ದರ್ಶನ ನೀಡುವ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಣಕೋಣದಲ್ಲಿ ನೆಲೆಸಿರುವ ಶಕ್ತಿ ದೇವತೆ ಸಾತೇರಿ ದೇಗುಲಕ್ಕೆ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ಸಾತೇರಿ ದೇವಿಯ ಬಗ್ಗೆ ಅಪಾರ ಶ್ರಾದ್ದಾ ಭಕ್ತಿಯನ್ನು ಹೊಂದಿರುವ ಶಾಸಕ ಸತೀಶ್ ಸೈಲ್ ಕುಟುಂಬ ಸಾತೇರಿ ದೇವಿಯ ಆರಾಧಕರಾಗಿದ್ದಾರೆ. ಸೈಲ್ ಕುಟುಂಬಸ್ಥರು ಮೊದಲಿನಿಂದಲ್ಲೂ ಕೂಡ ದೇವಿಯ ಆರಾಧ್ಯ ಭಕ್ತರಾಗಿದ್ದಾರೆ. ಪ್ರತಿ ವರ್ಷ ಕೂಡ ಇವರು ದೇವಾಲಯದ ಉತ್ಸವ ವೇಳೆ ದೇಗುಲಕ್ಕೆ ಹೋಗಿ ಕುಟುಂಬ ಸಮೇತರಾಗಿ ಹರಕೆ ಸಲ್ಲಿಸುತ್ತಲೆ ಬಂದಿದ್ದಾರೆ. ಇನ್ನೂ ಶಾಸಕರು ದೇವಸ್ಥಾನಕ್ಕೆ ಭೇಟಿ ನೀಡಿದ ಈ ಸಮಯದಲ್ಲಿ ದೇವಸ್ಥಾನ ಆಡಳಿ ಮಂಡಳಿಯಿಂದ ಶಾಸಕ ಸೈಲ್ ಮತ್ತು ಅವರ ಪತ್ನಿ ಕಲ್ಪನಾ ಸೈಲ್ ರವರನ್ನು ಸನ್ಮಾನಿಸಿ ಗೌರವಿಸಿದರು. ಹಣಕೋಣದ ಆಡಳಿತ ಮಂಡಳಿ ಮತ್ತು ಪುರೋಹಿತರು ಇವರನ್ನು ಸನ್ಮಾನಿಸಿ ಆಶೀರ್ವದಿಸಿ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಇನ್ನಷ್ಟು ಉನ್ನತ ಸ್ಥಾನಮಾನ ಸಿಗುವಂತಾಗಲಿ ಅಂತಾ ಹಾರೈಸಿದರು .
ಗೌರವ ಸ್ವೀಕರಿಸಿ ಮಾತನಾಡಿದ ಶಾಸಕ ಸತೀಶ್ ಸೈಲ್ ಅವರು ದೇವರ ಆಶೀರ್ವಾದವಿಲ್ಲದೆ ಈ ಜಗತ್ತಿನಲ್ಲಿ ಒಂದು ಹುಲು ಕಡ್ಡಿಯೂ ಅಲ್ಲಾಡಲಾರದು. ಕಲಿಯುಗದ ಅಧಿದೇವತೆಯಾಗಿ ನಂಬಿ ಬಂದ ಭಕ್ತರ ಕಷ್ಟಗಳನ್ನು ಪರಿಹರಿಸಿ ಇಷ್ಟಾರ್ಥಗಳನ್ನು ಸಿದ್ದಿಗೊಳಿಸುವ ಸಾತೇರಿ ದೇವಿ ಈ ನಾಡಿನ ಭಕ್ತರ ಆರಾಧ್ಯ ದೇವತೆ. ಶ್ರೀ ದೇವರ ಆಶೀರ್ವಾದದಿಂದ ನನ್ನ ಕ್ಷೇತ್ರದಲ್ಲಿ ಪ್ರತಿಯೊಬ್ಬ ನಾಗರಿಕರ ಕಷ್ಟ ದೂರವಾಗಲಿ.ಲೋಕಕಲ್ಯಾಣವಾಗಲಿ ಎಂದರು.
ಈ ಸಂದರ್ಭದಲ್ಲಿ ಸಾತೇರಿ ದೇವಿ ಆಡಳಿತ ಮಂಡಳಿ ಸದಸ್ಯರು ಮತ್ತು ಪುರೋಹಿತರು, ಪ್ರಮುಖರಾದ ಛಾಯಾ, ಸವಿತಾ, ಸೇರಿದಂತೆ ಮೊದಲಾವರು ಉಪಸಿತರಿದ್ದರು.
ಕೊಲ್ಲೂರು ಮೂಕಾಂಬಿಕೆ ದರ್ಶನ
ಬೆಳಿಗ್ಗೆಯೇ ಸಾತೇರಿ ದೇವಿಯ ದರ್ಶನ ಪಡೆದ ಶಾಸಕ ಸತೀಶ್ ಸೈಲ್ ಕುಟುಂಬಸಮೇತರಾಗಿ ನೇರವಾಗಿ ಕೊಲ್ಲೂರು ಮೂಕಾಂಬಿಕೆ ಹಾಗೂ ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ಸಹ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಶಾಸಕ ಸೈಲ್ ಅವರು ಜನತೆಯ ಒಳಿತಿಗಾಗಿ ದೇವರಲ್ಲಿ ಕೈ ಮುಗಿದು ಪ್ರಾರ್ಥಿಸಿಕೊಂಡರು..