ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡಕುಸಿತ ಉಂಟಾಗಿ ಎರಡು ತಿಂಗಳು ಕಳೆದಿದ್ದು, ಇದೀಗ ಮೂರನೇ ಹಂತದ ಕಾರ್ಯಚರಣೆ ಆರಂಭವಾಗಿದ್ದು,ಇಂದು ನಡೆದ ಕಾರ್ಯಾಚರಣೆ ಗಂಗಾವಳಿ ನದಿಯಲ್ಲಿ ಲಾರಿ ಪತ್ತೆಯಾಗಿದೆ ಎಂದು ಹೇಳಲಾಗಿತ್ತು.‌ಆದರೆ ಮೇಲಕ್ಕೆತ್ತಿದ ಬಳಿಕ ಅದು ಟ್ಯಾಂಕರ್ ಟೈಯರ್ ಎನ್ನುವುದು ಖಚಿತವಾಗಿದೆ.

ಶಿರುರು ಗುಡ್ಡಕುಸಿತದಿಂದ ಹನ್ನೊಂದು ಮಂದಿ ನಾಪತ್ತೆಯಾಗಿದ್ದು, ಅದರಲ್ಲಿ ಎಂಟು ಮಂದಿಯ ಶವ ಪತ್ತೆಯಾಗಿತ್ತು. ಇದರ ಜೊತೆಯಲ್ಲಿ ಕೇರಳ ಮೂಲದ ಭಾರತ್ ಬೆಂಜ್ ಲಾರಿ ಹಾಗೂ ಗ್ಯಾಸ್ ಟ್ಯಾಂಕರ್ ಮಣ್ಣಿನ ಅಡಿಯಲ್ಲಿ ಸಿಲುಕಿಕೊಂಡಿತ್ತು.ಇದರಲ್ಲಿ ಟ್ಯಾಂಕರ್‌‌ ಟ್ಯಾಂಕರ್ ಗಂಗಾವಳಿ ನದಿಯಲ್ಲಿ ತೇಲಿಹೋಗಿ ಸ್ವಲ್ಪ ದೂರಲ್ಲಿ ಪತ್ತೆಯಾಗಿತ್ತು. ಆದರೆ ಅದರ ಮುಂಭಾಗ ನದಿಯಲ್ಲಿ ಮುಳುಗಡೆಯಾಗಿತ್ತು. ಹೀಗಾಗಿ ನಾಪತ್ತೆಯಾಗಿರುವ ಮೂವರ ಜೊತೆ ಭಾರತ್ ಬೆಂಜ್ ಲಾರಿ ಹಾಗೂ ಗ್ಯಾಸ್ ಟ್ಯಾಂಕರ್‌ನ ಮುಂಭಾಗದ ಪತ್ತೆಗಾಗಿ ಮೂರನೇ ಹಂತದಲ್ಲಿ ಕಾರ್ಯಚರಣೆ ನಡೆಸಲಾಗುತ್ತಿದೆ.

ಇಂದು ಬೆಳಿಗ್ಗೆ ಮುಳುಗು ತಜ್ಞ ಈಶ್ವರ ಮಲ್ಪೆ ಅವರ ಕಾರ್ಯಚರಣೆ ನಡೆಸಿದ್ದು, ಈ ವೇಳೆ ಬೆಂಜ್ ಲಾರಿಯಲ್ಲಿದ್ದ ಮರದ ದಿಮ್ಮಿಯೊಂದು ಪತ್ತೆಯಾಗಿತ್ತು.ಅದು ತಮ್ಮ‌ಲಾರಿಯಲ್ಲೇ ಸಾಗಿಸಲಾಗುತ್ತಿದ್ದ ಮರದಿಮ್ಮಿ ಎನ್ನುವುದನ್ನ ಬೆಂಜ್ ಲಾರಿ ಮಾಲೀಕ ಮುನಫ್ ಅವರು ಖಚಿತ ಪಡಿಸಿದ್ಧರು. ಇನ್ನೂ ಕಾರ್ಯಚರಣೆ ಮುಂದುವರೆಸಿದ ಈಶ್ವರ ಮಲ್ಪೆ ಮಧ್ಯಾಹ್ನ ಹೊತ್ತಲ್ಲಿ ನದಿಯಲ್ಲಿ ಲಾರಿಯ ನಾಲ್ಕು ಚಕ್ರಗಳು ಮೇಲಾಗಿ ಬಿದ್ದಿರುವಂತೆ ಕಂಡುಬರುತ್ತಿದೆ. ಎಂದು ಹೇಳಿದಾಗ ಇದಕ್ಕೆ ಬೆಂಜ್ ಲಾರಿ ಮಾಲೀಕ ಮುನಾಫ್ ಸಹ ನದಿಯಲ್ಲಿ ಲಾರಿ ಇದೆ ಅಂತಾ ಮಾಧ್ಯಮಗಳಿಗೆ ಹೇಳಿಕೆಯನ್ನ ನೀಡಿದ್ದರು. ಹೀಗಾಗಿ ಎಲ್ಲಾ ಮಾಧ್ಯಮಗಳು ಕೂಡ ಲಾರಿ ಮಾಲೀಕರ ಹೇಳಿಕೆ ಆಧರಿಸಿ ನದಿಯಲ್ಲಿ ಬೆಂಜ್ ಲಾರಿಯೇ ಪತ್ತೆಯಾಗಿದೆ ಅಂತಾ ಸುದ್ದಿ‌ ಬಿತ್ತರವಾಗುವಂತಾಯತ್ತು.

ನಂತರದಲ್ಲಿ ನದಿಯಾಳದಲ್ಲಿ ಪತ್ತೆಯಾಗಿರುವ ಲಾರಿಯ ಬಿಡಿಭಾಗವನ್ನ‌ ಕ್ರೇನ್ ಮೂಲಕ ಮೇಲಕ್ಕೆ ಎತ್ತಿದ್ದಾಗ ಅದು ಗ್ಯಾಸ್ ಟ್ಯಾಂಕರ್‌ನ ಟೈಯರ್ ಎನ್ನುವುದು ಖಚಿತವಾಗಿದೆ. ಅದಾದ ನಂತದರಲ್ಲಿ ಗ್ಯಾಸ್ ಟ್ಯಾಂಕರ್‌ನ ಕ್ಯಾಬಿನ್ ಸಹ ಪತ್ತೆಯಾಗಿದೆ.ಇವೆಲ್ಲವನ್ನೂ ಈಗಾಗಲೇ ನದಿಯಿಂದ ಮೇಲಕ್ಕೆ ಎತ್ತಲಾಗಿದೆ.‌ ನಾಳೆ ಸಹ ಕಾರ್ಯಚರಣೆ ಮುಂದುವರೆಯಲಿದೆ.

ಗಮನಿಸಿ