ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ :ಕಳೆದ ಎರಡು ತಿಂಗಳ ಹಿಂದೆ ಸುರಿದ ಮಹಾಮಳೆಯಿಂದಾಗಿ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಘಟನೆ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಾಗಿತ್ತು.ಆದರೆ ಅಂದಿನಿಂದ ಇಂದಿನ ತನಕ ಶಾಸಕ ಸತೀಶ ಸೈಲ್ ತನ್ನವರಿಗಾಗಿ ಶ್ರಮಿಸುತ್ತಿರುವುದಕ್ಕೆ ಕ್ಷೇತ್ರದ ಜನತೆಯಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಹೌದು ಶಿರೂರು ಗುಡ್ಡಕುಸಿತ ಉಂಟಾಗಿ ಎರಡು ತಿಂಗಳು ಕಳೆಯುತ್ತಾ ಬಂದಿದೆ. ಘಟನೆಯಲ್ಲಿ ಹನ್ನೊಂದು ಮಂದಿ ಜೀವ ಕಳೆದುಕೊಂಡು 8ಮಂದಿಯ ಶವ ಮಾತ್ರ ಪತ್ತೆಯಾಗಿದೆ. ಜಿಲ್ಲೆಯ ಇಬ್ಬರೂ ಸೇರಿ ಕೇಳರ ಮೂಲದ ಲಾರಿ ಚಾಲಕನ ಶವ ಇನ್ನೂ ಪತ್ತೆಯಾಗಿಲ್ಲ. ಎಲ್ಲಾ ಆಯಾಮದಲ್ಲಿಯೂ ಪತ್ತೆ ನಡೆಸಲಾಗುತ್ತಿದ್ದರು ಸಹ ಇದುವರೆಗೆ ಕಣ್ಮರೆಯಾಗಿದ್ದವರ ಸಣ್ಣದೊಂದು ಕುರುಹು ಸಹ ಪತ್ತೆಯಾಗದೆ. ಆ ಕುಟುಂಬ ಇಂದಿಗೂ ಕಣ್ಣೀರಲ್ಲೆ ಕಾಲ ಕಳೆಯುವಂತಾಗಿದೆ.ಹೀಗಾಗಿ ಏನಾದರೂ ಮಾಡಿ ಕಣ್ಮರೆಯಾಗಿರುವವರ ಪತ್ತೆ ಹಚ್ಚಲೇ ಬೇಕು ಅಂತಾ ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಇವರ ಈ ಪ್ರಯತ್ನಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮಂಕಾಳ್ ವೈದ್ಯ, ಹಾಗೂ ಶಾಸಕರಾಗಿರುವ ಭೀಮಣ್ಣ ನಾಯ್ಕ, ಸಹ ಸಹಾಯಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.

ಎಲ್ಲರ ಸಹಕಾರದೊಂದಿಗೆ ಶಾಸಕ ಸೈಲ್ ಅವರು ಶಿರೂರು ಕಾರ್ಯಚರಣೆಯನ್ನ ಯಶ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅಂದು ಘಟನೆ ದಿನ ವಿಧಾನಸಭಾ ಅಧಿವೇಶನದಲ್ಲಿದ್ದ ಶಾಸಕ ಸೈಲ್ ಹಾಗೂ ಸಚಿವ ಮಂಕಾಳ್ ವೈದ್ಯ ಇಬ್ಬರೂ ಕೂಡ ಅಂದಿನ ಅಧಿವೇಶನವನ್ನ ಬಿಟ್ಟು ದಿಢೀರ್ ಘಟನಾ ಕ್ಷೇತ್ರದತ್ತ ಬಂದು ನಿಲ್ಲುತ್ತಾರೆ. ಅಂದಿನಿಂದ ಆರಂಭವಾದ ಶಾಸಕ‌ ಸತೀಶ ಸೈಲ್ ಅವರ ಕಾರ್ಯ ಇಂದಿಗೂ ಸಹ ಅದೆ ರೀತಿಯಲ್ಲಿ ಮುಂದುವರೆದಿದೆ. ಒಂದಿಷ್ಟು ದಿನ ಕಾರ್ಯಚರಣೆ ನಡೆಸಿದ ಬಳಿಕ ಕಾರ್ಯಚರಣೆಯೇ ನಿಂತು ಹೋಗುತ್ತದೆ ಎಂದು ಅಂದೂ ಕೊಂಡಿರುವಾಗ ಯಾವುದಕ್ಕೂ ಮುಂದೆ ಇಟ್ಟ ಹೆಜ್ಜೆಯನ್ನ ಹಿಂದೆ‌ ಇಡದ ಶಾಸಕ ಸೈಲ್ ಸರಕಾರದ ಮೇಲೆ ಒಡತ್ತಡ ಹಾಕುವ ಮೂಲಕ ಕಾರ್ಯಚರಣೆಗೆ ಇಳಿದಿರುವುದಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಕಾರ್ಯಚರಣೆಗೆ ಸಹಕಾರ ಆಗಯವಂತೆ ಯಾವೆಲ್ಲಾ ಸಹಾಯ ಸಹಕಾರ ಬೇಕು ಎಲ್ಲವನ್ನೂ ಕೂಡ ಒದಗಿಸುವ ಕೆಲಸ‌ ಮಾಡುತ್ತಲೆ ಇದ್ದಾರೆ. ಈ ಕಾರ್ಯಚರಣೆ ವೈಯಕ್ತಿಕವಾಗಿ ಶಾಸಕ ಸತೀಶ ಸೈಲ್ ಅವರು ಲಕ್ಷಾಂತರ ರೂಪಾಯಿ ಹಣವನ್ನ ಖರ್ಚು ಮಾಡಿದ್ದಾರೆ.ಅಂದು ಬೂಮ್ ಹಿಟಾಚಿ ತರುವುದರಿಂದ ಹಿಡಿದು ಇಂದು ಗೋವಾದ ಪಣಜಿಯಿಂದ ಡ್ರೇಜಿಂಗ್ ಯಂತ್ರವನ್ನ ತರುವಲ್ಲಿಯೂ ಸಹ ಶಾಸಕ ಸೈಲ್ ಪ್ರಯತ್ನವನ್ನ ಯಾರು ಮರೆಯುವಂತಿಲ್ಲ‌.ಆ ರೀತಿಯಲ್ಲಿ ಕಾರ್ಯಚರಣೆಗೆ ನೆರವಾಗುತ್ತಿದ್ದಾರೆ. ಅಂದು ಮಳೆಯಲ್ಲಿ ನಡೆದ ಕಾರ್ಯಚರಣೆಲ್ಲಿಯೂ ಮಳೆಯನ್ನೂ ಲೆಕ್ಕಿಸದೆ ಓರ್ವ ಶಾಸಕ‌ ಜನಸಾಮಾನ್ಯರಂತೆ ದಿನವಿಡಿ ಕಾರ್ಯಚರಣೆ ಸ್ಥಳದಲ್ಲಿದ್ದು, ಸಲಹೆ ಸೂಚನೆ ನೀಡಿದ್ದಾರೆ. ಹೀಗಾಗಿ ಶಿರೂರು ಗುಡ್ಡಕುಸಿತದ ಘಟನೆಯಲ್ಲಿ ಶಾಸಕ ಸೈಲ್ ಅವರ ಕಾರ್ಯಕ್ಕೆ ಜನತೆಯಿಂದ ಉತ್ತಮ ರೀತಿಯಲ್ಲಿ ಮೆಚ್ಚುಗೆ ‌ವ್ಯಕ್ತವಾಗಿರುವುದು ಮಾತ್ರ ಸುಳ್ಳಲ್ಲ. ಜನರ ಸಂಕಷ್ಟಕ್ಕೆ ಶಾಸಕ ಸತೀಶ್ ಸೈಲ್ ಸದಾ ಹೀಗೆ ಇರಲಿ ಎಂದು ಕ್ಷೇತ್ರದ ಜನ ಹಾರೈಸುತ್ತಿದ್ದಾರೆ.

ಗಮನಿಸಿ