ಸುದ್ದಿಬಿಂದು ಬ್ಯೂರೋ
ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಸಚಿವರ ನೇಮಕ ಮಾಡಿ ಖಾತೆ ಹಂಚಿಕೆ ಮಾಡಿದ್ದರು ಸಹ ಇದುವರೆಗೆ ಜಿಲ್ಲಾ ಉಸ್ತುವಾರಿಕೆಯ ಹೊಣೆಗಾರಿಕೆ ನೀಡಿರಲಿಲ್ಲ. ಇದೀಗ ಸಚಿವರಾಗಿ ನೇಮಕಗೊಂಡವರಿಗೆ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ನೀಡಲಾಗಿದೆ.ಯಾವ ಜಿಲ್ಲೆಗೆ ಯಾರು ಉಸ್ತುವಾರಿ ಆಗಿದ್ದಾರೆ ಎನ್ನುವ ಪುಲ್ ಡಿಟೇಲ್ಸ್ ಇಲ್ಲಿದೆ.


ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾರೂ ಸಚಿವರು ಇಲ್ಲದ ಹಿನ್ನೆಲೆಯಲ್ಲಿ ಎರಡೂ ಜಿಲ್ಲೆಗಳಿಗೂ ಹೊರ ಜಿಲ್ಲೆಯರಿಗೆ ಈ ಬಾರಿ ಉಸ್ತುವಾರಿಯ ಹೊಣೆ ನೀಡಲಾಹಿದೆ. ಉಡುಪಿ ಜಿಲ್ಲೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಉಸ್ತುವಾರಿ ಸಚಿವರಾಗಿದ್ರೆ, ದಕ್ಷಿಣ ಕನ್ನಡ ಜಿಲ್ಲೆಗೆ ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವರಾಗಿದ್ದಾರೆ. ಇನ್ನು ಭಟ್ಕಳ ಶಾಸಕರಾಗಿದ್ದ ಮಂಕಾಳ್ ವೈದ್ಯ ಅವರು ಇದೇ ಮೊದಲ ಬಾರಿ ಸಚಿವರಾಗಿದ್ದು, ಇದೀಗ ತಮ್ಮ ಜಿಲ್ಲೆಯ ಉಸ್ತುವಾರಿ ಹೊಣೆವಹಿಸಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಉಸ್ತುವಾರಿಯ ಮೇಲೆ ಕಣ್ಣಿಟ್ಟಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ನಿರಾಸೆಯಾಗಿದ್ರೆ, ಸತೀಶ್ ಜಾರಕಿಹೊಳಿ ಅವರು ಬೆಳಗಾವಿ ಉಸ್ತುವಾರಿ ಸಚಿವರಾಗಿದ್ದಾರೆ.