ಸುದ್ದಿಬಿಂದು ಬ್ಯೂರೋ
ಕುಮಟ : ಈಗಾಗಲೆ ಸೇವಾ ಸಹಕಾರಿ ಸಂಘದ ಚುನಾವಣೆ ಘೋಷಣೆಯಾಗಿದ್ದು, ಈ ಚುನಾವಣೆಗೆ ಕೆಲ ಸಹಕಾರಿ ಸಂಘದಲ್ಲಿ ತಮ್ಮಗೆ ಬೇಕಾದಂತೆ ಶೇರುದಾರರನ್ನ ಉಳಿಸಿಕೊಂಡು ಹಲವರನ್ನ ಕೈ ಬಿಡಲಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ.
ಹೊಸ ನಿಯಮಾವಳಿ ಪ್ರಕಾರ ಸೇವಾ ಸಹಕಾರಿ ಸಂಘಧ ಶೇರುದಾರರಾಗಿದ್ದವರು, ನಿರಂತರ ಐದು ವಾರ್ಷಿಕ ಸಭೆಯಲ್ಲಿ ಮೂರು ಸಭೆಗೆ ಗೈರಾಗಿದ್ದರೆ ಅಂತಹವರ ಶೇರು ಸದಸ್ಯತ್ವವನ್ನ ಹಕ್ಕನ್ನು ಮೊಟಕುಗೊಳಿಸುವಂತೆ ನಿಮಾವಳಿ ಇದೆ.ಆದರೆ ಕೆಲಸೇವಾ ಸಹಕಾರಿ ಸಂಘದ ವ್ಯವಸ್ಥಾಪಕರು ಹಾಗೂ ಹಾಲಿ ಇರುವ ಕೆಲ ನಿರ್ದೇಶಕರು ತಮ್ಮಗೆ ಅನುಕೂಲಕರವಾಗುವಂತ ಸದಸ್ಯರ ಯಾದಿಯನ್ನ ತಯಾರಿಸಿ ಅನೇಕರಿಗೆ ಅನ್ಯಾಯ ಮಾಡಿದ್ದಾರೆ ಎನ್ನುವ ಬಗ್ಗೆ ಆರೋಪ ಕೇಳಿ ಬರುತ್ತಿದೆ.
ಕೆಲ ಸೇವಾ ಸಹಕಾರಿ ಸಂಘದಲ್ಲಿ ನಿರಂತರವಾಗಿ ಐದು ವರ್ಷದಿಂದ ಸಭೆಗೆ ಹಾಜರಾಗದೆ ಇದ್ದವರಿಗೂ ಮತದಾನದ ಹಕ್ಕು ನೀಡಿರುವ ಬಗ್ಗೆ ಸುದ್ದಿ ಬಿಂದು ವೆಬ್ ಸೈಟ್ ಗೆ ಮಾಹಿತಿ ಲಭ್ಯವಾಗಿದೆ. ಸಹಕಾರಿ ಸಂಘದ ಚುನಾವಣೆಗಾಗಿ ಅಕ್ರಮವಾಗಿ ಮತದಾರರ ಹೆಸರನ್ನ ಸೇರಿಸಿರುವುದು ಒಂದೊಂದಾಗಿ ಹೊರ ಬರುತ್ತಿದೆ. ಐದು ವರ್ಷವೂ ಸಭೆ ಬಾರದೆ ಇರುವ ಶೇರುದಾರರಿಗೆ ಪಡಿತರ ಅಕ್ಕಿ ಖರೀದೆ ಬಂದಾಗ ಅವರ ಬಳಿಯಿಂದ ವಾರ್ಷಿಕ ಸಭೆಯ ಠರಾವು ಪುಸ್ತಕಕ್ಕೆ ಸಹಿ ಪಡೆದು ಅವರುಗಳ ಸದಸ್ಯತ್ವವನ್ಮ ಉಳಿಸಿಕೊಳ್ಳಲಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ.
ಇನ್ನೊಂದು ವಿಶೇಷ ಅಂದರೆ ಸೇವಾ ಸಹಕಾರಿ ಸಂಘದಲ್ಲಿ ಲಕ್ಷ ಲಕ್ಷ ಸಾಲ ಪಡೆದವರಿಗೂ ತಮ್ಮ ಪರವಾಗಿಲ್ಲ ಎಂದು ಗೋತ್ತಾದರೆ ಅಂತಹವರಿಗೂ ಸಂಘದ ಚುನಾವಣೆಯಲ್ಲಿ ಮತದಾನದ ಹಕ್ಕುಕಸಿದು ಕೊಳ್ಳಲಾಗಿದೆ. ಒಂದು ಲಕ್ಷ ಪಡೆದವರಿಗೆ ನೂರು ರೂಪಾಯಿ ಶೇರು ತುಂಬಿಲ್ಲ ಎಂಬ ಕಾರಣ ನೀಡಿ ಅವರ ಮತದಾನ ತಡೆಹಿಡಿಯಲಾಗಿದೆ ಎನ್ನುವ ಆರೋಪ ಇದೆ. ಲಕ್ಷ ಲಕ್ಷ ಸಾಲ ಪಡೆದುಕೊಳ್ಳುವವರು ಸಹಕಾರಿ ಸಂಘದ ಕಾಯ್ದೆಯಲ್ಲಿ ನೂರು ರೂಪಾಯಿ ಶೇರು ತುಂಬಿಸಿಕೊಳ್ಳದೆ ಲಕ್ಷಗಟ್ಟಲೇ ಸಾಲ ನೀಡಲು ಹೇಗೆ ಸಾಧ್ಯ ಎನ್ನುವ ಚರ್ಚೆಗಳು ಸಹ ನಡೆಯುತ್ತಿದೆ.
ವಾರ್ಷಿಕ ಸಭೆಗೆ ಹೋಗದೆ ಇರುವ 60 ವರ್ಷದ ಮೇಲ್ಪಟ್ಟವ ನಕಲಿ ಸಹಿಯನ್ನ ಪಡೆದು ಮತದಾನದ ಹಕ್ಕನ್ನ ಉಳಿಸಿಕೊಂಡಿದ್ದಾರೆ ಎನ್ನುವ ಆರೋಪ ಸಹ ಇದೆ. ಈ ಬಗ್ಗೆ ಕೆಲವರು ತಮ್ಮಗೆ ವಯಸ್ಸಾಗಿರುವ ಕಾರಣ ಸೇವಾ ಸಹಕಾರಿ ಸಂಘದ ಸಭೆಗೆ ಹೋಗಿಲ್ಲ ಆದರೂ ಈ ವರ್ಷವೂ ನಮ್ಮಮತದಾನ ಮಾಡಲು ಅವಕಾಶ ಸಿಕ್ಕಿದೆ ಎನ್ನುತ್ತಿದ್ದಾರೆ. ಐದಾರೂ ವರ್ಷ ಹೋಗದೆ ಇದ್ದವರಿಗೂ ಮತನಾಕ್ಕೆ ಅವಕಾಶ ನೀಡಲಾಗಿದೆ ಎಂದೆ ಇದರ ಹಿಂದಿನ ಅಕ್ರಮದ ಬಗ್ಗೆ ತನಿಖೆ ನಡಿಸಬೇಕಿರುವುದು ಅವಶ್ಯಕವಾಗಿದ್ದು, ಒಂದು ವೇಳೆ ಸರಿಯಾದ ಮಾರ್ಗದಲ್ಲಿ ತನಿಖೆ ಆಗಿದ್ದೆ ಆದರೆ ಜಿಲ್ಲೆಯಲ್ಲಿರು ವ ಅನೇಕ ಸೇವಾ ಸಹಕಾರಿ ಸಂಘದ ವ್ಯವಸ್ಥಾಪಕರು ಹಾಗೂ ಸದಸ್ಯರು ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳುವುದು ಕಷ್ಟವಾಗಲಿದೆ.