ಭಟ್ಕಳ : ಇದುವರಗೆ ಭಟ್ಕಳ ವಿಧಾನಸಭಾ‌ ಕ್ಷೇತ್ರದ ಜೆಡಿಎಸ್ ಟಿಕೇಟ್ ಇನಾಯತ್ ಉಲ್ಲಾ ಶಾಂಬದ್ರಿ ಅವರಿಗೆ ಫೈನಲ್‌ ಎಂದು ಹೇಳಲಾಗುತ್ತಿತ್ತು. ಆದರೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಇನಾಯತ್ ಉಲ್ಲಾ ಶಾಬಂದ್ರಿ ಅವರನ್ನ ಕೈ ಬಿಟ್ಟು ಪ್ರಭಲ ಸಮುದಾಯಕ್ಕೆ ಸೇರಿದ ವ್ಯಕ್ತಿ ಒಬ್ಬರಿಗೆ ಟಿಕೇಟ್ ನೀಡಲಾಗುತ್ತದೆ ಎನ್ನುವ ಮಾತು ಕೇಳಿ ಬರುತ್ತಿದೆ.

ಕಳೆದ ಕೆಲ ದಿನಗಳ ಹಿಂದಷ್ಟೆ ಕುಮಟಾ ಹಾಗೂ ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಪಂಚರತ್ನ ರಥ ಯಾತ್ರೆ ನಡೆಸಿದ ಮಾಜಿ ಸಿ ಎಂ ಕುಮಾರ ಸ್ವಾಮಿ ಅವರು ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಸೂರಜ್ ನಾಯ್ಕ ಸೋನಿ ಹಾಗೂ ಭಟ್ಕಳ ಕ್ಷೇತ್ರದಲ್ಲಿ ಇಕಾಯತತ ಉಲ್ಲಾ ಶಾಬಂದ್ರಿ ಅವರಿಗೆ ಜೆಡಿಎಸ್ ಟಿಕೇಟ್ ಫೈನಲ್ ಎಂದು ಘೋಷಣೆ ಮಾಡಿದ್ದರು.

ಆದರೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಇದೀಗ ಭಟ್ಕಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಲ್ಲಿ ಬದಲಾವಣೆ ಆಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ.ಪುಣೆಯಲ್ಲಿ ವಿಜ್ಞಾನಿಯಾಗಿರುವ ಪ್ರ ಪುಲ್ ನಾಯ್ಕ ಎಂಬುವವರಿಗೆ ಜೆಡಿಎಸ್ ಟಿಕೇಟ್ ನೀಡಲಾಗುತ್ತದೆ ಎನ್ನುವ ಮಾತು ಕೇಳಿ ಬರುತ್ತಿದೆ.

ಪ್ರ ಪುಲ್ ನಾಯ್ಕ ಮೂಲತಃ ಬಳ್ಕೂರ್ ಗ್ರಾಮದ ನಿವಾಸಿ ಎಂದು ಹೇಳಲಾಗುತ್ತಿದ್ದು,ಸದ್ಯ ಹೊನ್ನಾವರದ ಪ್ರಭಾತ ನಗರದಲ್ಲಿ ವಾಸ್ತವ್ಯ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ..