ಸುದ್ದಿಬಿಂದು ಬ್ಯೂರೋ
ಶಿರಸಿ :
ಹೆಣವನ್ನು ತಕ್ಷಣ ಕೊಂಡೊಯ್ಯಿರೆಂಬ ಮಂಗಳೂರಿನ ಆಸ್ಪತ್ರೆಯ ಒತ್ತಾಯದಿಂದ ದಿಕ್ಕೆಟ್ಟು ಹೋಗಿದ್ದ ಅಮ್ಮಚ್ಚಿಯ ಬಡ ಕುಟುಂಬಕ್ಕೆ ಶಾಸಕ ಭೀಮಣ್ಣ ನಾಯ್ಕ್ ನೆರವಾಗಿದ್ದಾರೆ.

ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಶಿರಸಿ ತಾಲೂಕಿನ ಗೋಳಿಯ ಸಮೀಪದ ಅಮ್ಮಚ್ಚಿಯ ಗಣೇಶ್ ಗಣಪ ಗೌಡ 20ವರ್ಷದ ಯುವಕ ಕಳೆದ ವಾರ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಯುವಕ‌ನ ದಿಢೀರ್ ಸಾವಿನಿಂದ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಸಹ ಬಿಕ್ಕಿ ಬಿಕ್ಕಿ ಅಳುತ್ತಿರುವಾಗ, ಆಸ್ಪತ್ರೆಯವರು ಶವವನ್ನು ತಕ್ಷಣ ಕೊಂಡೊಯ್ಯಿರೆಂದು ಒತ್ತಾಯಿಸಲಾರಂಬಿಸಿದರು. ಆಗಲೆ ಯುವಕ ಚಿಕಿತ್ಸೆಗಾಗಿ ಕಂಡ ಕಂಡವರ ಬಳಿ ಮತ್ತು ಬ್ಯಾಂಕನಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಜೀವನದಲ್ಲಿ ಎಲ್ಲವನ್ನೂ ಕೆಳೆದುಕೊಂಡಿದ್ದರು, ಆಸ್ಪತ್ರೆಯಲ್ಲಿ ಮೃತ ಪಟ್ಟ ಯುವಕ ಶವವನ್ನ ಊರಿಗೆ ತರಲು ಆ ಕುಟುಂಬಸ್ಥರ ಬಳಿ ಒಂದು ರೂಪಾಯಿ ಸಹ ಉಳಿದುಕೊಂಡಿರಲಿಲ್ಲ.

ದೂರದ ಮಂಗಳೂರಿನಿಂದ ಶಿರಸಿಗೆ ಯುವಕ ಶವ ತರಬೇಕು ಅಂದರೆ ಅಂಬುಲೆನ್ಸ್ ಬಾಡಿಯೇ 12ಸಾವಿರ ಕೊಡಬೇಕು, ಹೀಗಿರುವಾಗ ಅವರ ಬಳಿ 12ರೂಪಾಯಿ ಸಹ ಇಲ್ಲದೆ ಇರುವಾಗ ಅಷ್ಟೊಂದು ಹಣವನ್ನ ಅಂಬುಲೆನ್ಸ್ ಬಾಡಿಗೆ ಕೊಟ್ಟು ತರಲು ಹೇಗೆ ಸಾಧ್ಯ ಹೇಳಿ. ಪದೆ‌ ಪದೆ ಆಸ್ಪತ್ರೆಯವರು ಶವ ತೆಗೆದುಕೊಂಡು ಹೋಗಿ ಎಂದು ಒತ್ತಾಯಿಸುತ್ತಲೆ ಇದ್ದರು. ಇನ್ನೂ ಸ್ವಲ್ಪ ಸಮಯ ಕಳೆದರೆ ಆಸ್ಪತ್ರೆಯಲ್ಲಿದ್ದ ಆ ಯುವಕ ಶವವನ್ನ ಫುಟ್ಪಾತ್ ಮೇಲೆ ಇಟ್ಟು ಹೋಗುತ್ತಿದ್ದರೆನೋ ಎನ್ನುತ್ತಾರೆ ಯುವಕ ಕುಟುಂಬಸ್ಥರು.

ಈ ಬಡ ಕುಟುಂಬಕ್ಕೆ ಆಸ್ಪತ್ರೆಯಲ್ಲಿ ಇದ್ದ ಶವವನ್ನ ತರಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದ ಶಾಸಕ ಭೀಮಣ್ಣ ನಾಯ್ಕ ಅವರು ತಕ್ಷಣ ಅವರ ಆಪ್ತ ಕಾಯದರ್ಶಿ ಅವರಿಗೆ ಆ ಕುಟುಂಬದ ಸಮಸ್ಯೆ ತಿಳಿದುಕೊಂಡು ತಮ್ಮಗೆ ವರದಿ ಒಪ್ಪಿಸುವಂತೆ ಶಾಸಕರು ತಿಳಿಸಿದ್ದು, ತಕ್ಷಣ ಈ ಬಗ್ಗೆ ಮಾಹಿತಿ ಪಡೆದ ಶಾಸಕರ ಕಾರ್ಯದರ್ಶಿ ವಿಷಯವನ್ನ ಭೀಮಣ್ಣ ನಾಯ್ಕ ಅವರ ಗಮನಕ್ಕೆ ತಂದಿದ್ದು, ಆ ಬಡ ಕುಟುಂಬಸ್ಥರ ದೂರವಾಣಿ ಮೂಲಕ ಸಂಪರ್ಕಿಸಿದ ಶಾಸಕ ಭೀಮಣ್ಣ ನಾಯ್ಕ, ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಲ್ಲೆ ಅರ್ಧ ಗಂಟೆಯಲ್ಲಿ ಆಸ್ಪತ್ರೆಗೆ ಅಂಬುಲೆನ್ಸ್ ಕಳುಹಿಸಿ, ಮೃತ ಯುಕನ ಶವ ಹಾಗೂ ಆಸ್ಪತ್ರೆಯಲ್ಲಿ ಉಳಿದುಕೊಂಡ ಎಲ್ಲರನ್ನ ಊರಿಗೆ ಕರೆತರುವ ಮೂಲಕ ಮಾನವೀಯತೆ ಮೆರೆದಿದ್ದಾರೆ.