ಸುದ್ದಿಬಿಂದು ಬ್ಯೂರೋ
ಕಾರವಾರ
: ನನ್ನ ಕ್ಷೇತ್ರ ಸದಾ ಅಭಿವೃದ್ಧಿ ಪಥದಲ್ಲಿ ಸಾಗಬೇಕು, ಈ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಯಾವ ಸಮಯದಲ್ಲೂ ಕೈ ಜೋಡಿಸಲು ಸಿದ್ದ, ಗುತ್ತಿಗೆದಾರರೇಲ್ಲರೂ ನನ್ನ ಸಹೋದರು ಎಂದು ಕಾರವಾರ-ಅಂಕೋಲಾ ಕ್ಷೇತ್ರದ ನೂತನ ಶಾಸಕ ಸತೀಶ ಸೈಲ್ ಅಭಿಪ್ರಾಯ ಪಟ್ಟಿದ್ದಾರೆ.

ಅವರು ಇಂದು ಕಾರವಾರ ನಗರದ ಅಜ್ವಿ ಹೊಟೇಲ್ ಸಭಾಭವದಲ್ಲಿ ಏರ್ಪಡಿಸಲಾದ ಸಿವಿಲ್ ಗುತ್ತಿಗೆದಾರರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸಾಕಷ್ಟು ಗುತ್ತಿಗೆದಾರರು ಇಂದಿಗೂ ಸಮಸ್ಯೆಯಲ್ಲಿದ್ದಾರೆ ಎನ್ನುವುದು ಗೋತ್ತಿದೆ. ಈ ಹಿಂದೆ ಮಾಡಿರುವ ಅದೆಷ್ಟೋ ಕಾಮಗಾರಿಯ ಬಿಲ್ ಬಾಕಿ ಇದೆ ಎನ್ನುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರ ಜೊತೆ ಚರ್ಚೆ ಮಾಡಲಿದ್ದೇನೆ.ಈ ಬಗ್ಗೆ ನಿಯೋಗವನ್ನ ಬೇಕಾದ್ದರೂ ತೆಗೆದುಕೊಂಡು ಸಿ ಎಂ ಬಳಿ ಹೋಗಿ ಚರ್ಚೆ ಮಾಡೋಣ ಎಂದು ಸೈಲ್ ಹೇಳಿದರು.

ಇನ್ನೂ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಧವ ನಾಯ್ಕ, ನಮ್ಮಗೆ ಸಮಸ್ಯೆ ಇದೆ ಎನ್ನುವ ಬಗ್ಗೆ ಶಾಸಕ ಬಳಿ ನೇರವಾಗಿ ಹೋಗಿ ಹಕ್ಕಿನಿಂದ ನಮ್ಮ ಕೆಲಸ ಕೆಳಬಹುದಾಗಿದೆ. ನಾವು ಐದು ವರ್ಷದಲ್ಲಿ ಅನೇಕ ಸಮಸ್ಯೆಗಳನ್ನ ಎದುರಿಸಿದ್ದೇವೆ. ನನ್ನ ಮೇಲೆ ಮಾನಷ್ಟದ ಪ್ರಕಣ ದಾಖಲಾಗಿದೆ. ಯಾವ ಮಾನಷ್ಟ ಪ್ರಕರಣಕ್ಕೂ ಹೆದರುವುದಿಲ್ಲ‌‌. ಪ್ರಮಾಣಿಕತೆ ಇದ್ದರೆ ಎದುರಿಗೆ ಬಂದು ಮಾತನಾಡಲಿ.ಪ್ರತಿಯೊಬ್ಬ ಸ್ಥಳೀಯ ಗುತ್ತಿಗೆದಾರರಿಗೆ ಅನ್ಯಾಯವಾಗಿದೆ‌. ಲಕ್ಷ್ಮಿ ಪೂಜೆ  ಆದರೆ ಮಾತ್ರ ಗುದ್ದಲಿ ಪೂಜೆ ಮಾಡುವ ಸಂಸ್ಕೃತಿ ನಿರ್ಮಾಣವಾಗಿತ್ತು ಎಂದರು.