suddibindu.in
ಹೊನ್ನಾವರ: ಕರ್ತವ್ಯದಲ್ಲಿರುವಾಗ ವ್ಯಕ್ತಿಯೋರ್ವರಿಂದ ಲಂಚ ಪಡೆಯುತ್ತಿರುವಾಗಲೇ ಇಲ್ಲಿನ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೋಕಾಯುಕ್ತರಿಂದ ಲಾಕ್ ಆಗಿದ್ದಾನೆ. ಈತನ ಲಂಚಬಾಕತನಕ್ಕೆ ವಿಜಯಾವತಾರ ನ ಕೈವಾಡ ಇರುವುದು ಬಹಿರಂಗವಾಗಿದ್ದು, ಬ್ರಷ್ಟಾಚಾರ ಪ್ರಕರಣ ಇದೀಗ ಇಡೀ ಜಿಲ್ಲಾದ್ಯಂತ ಸಂಚಲನ ಮೂಡಿಸಿದೆ.
ಈ ವಿಜಯಾವತಾರ ಬೇರೆ ಯಾರೂ ಅಲ್ಲ ಇದೆ ಪಟ್ಟಣ ಪಂಚಾಯತದಲ್ಲಿ ಹಾಲಿ ಸದಸ್ಯ ಕೂಡ ಇದ್ದಾನೆ ಎನ್ನುವುದು ಬ್ರಷ್ಟಾಚಾರ ತಾಂಡವವಾಡುತ್ತಿರುವುದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ಜನಪ್ರತಿನಿಧಿಯಾದ ಈ ಮಹಾಶಯ ಇಲ್ಲಿ ನಡೆಯುವ ಪ್ರತಿಯೊಂದು ಅವ್ಯವಹಾರದ ಬಗ್ಗೆ ಕಾವಲುಗಾರನಾಗಿ ಇರಬೇಕಾಗಿರುವುದನ್ನ ಬಿಟ್ಟು ಈತನೇ ಮುಂದೆ ನಿಂತು ಅಧಿಕಾರಿ ಲಂಚಬಾಕತನಕ್ಕೆ ಸಹಕಾರಿ ಆಗಿದ್ದ, ಅಂದರೆ ಜನ ಆಯ್ಕೆ ಮಾಡಿದಕ್ಕೆ ಈತ ಜನರ ಕಷ್ಟಗಳಿಗೆ ಸ್ಪಂದಿಸುವುದನ್ನ ಬಿಟ್ಟು ಲಂಚಕ್ಕಾಗಿ ಜನರ ರಕ್ತವನ್ನೆ ಹೀರುತ್ತಿದ್ದ ಎನ್ನುವುದು ಇದೀಗ ಲೋಕಾಯುಕ್ತ ದಾಳಿಯ ಬಳಿಕ ಪಟ್ಟಣದ ಗಲ್ಲಿ-ಗಲ್ಲಿಯಲ್ಲಿ ಗುಜುಗುಜು ಸದ್ದಿನ ಮೂಲಕ ಈತನ ವಿಜಯಾವತಾರ ಪಟ್ಟಣದಲ್ಲಿ ಈಗ ತೆರೆದುಕೊಂಡಿದೆ.
ಇದನ್ನೂ ಓದಿ
- Police/ಪೊಲೀಸರ ಬಲೆಗೆ ಬಿದ್ದ ಕೋಟ್ಯಾಂತರ ರೂಪಾಯಿ ನಕಲಿ ನೋಟಿನ ಆರೋಪಿ
- ಕರಾವಳಿ ಭಾಗದಲ್ಲಿ ಅಪರಾಧ ಮಾಡಿ ಶಿರಸಿ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದ ಆರೋಪಿಗಳು.!
- ಕುಮಟಾ ಪೊಲೀಸರ ಭರ್ಜರಿ ಕಾರ್ಯಚರಣೆ : ಗೋವು ಕಳ್ಳರ ಬಂಧನ
ಈತ ಬಿಜೆಪಿಯ ಮುಖಂಡ ಬೇರೆ. ದಿನ ನಿತ್ಯವೂ ಪರರ ಮಕ್ಕಳಿಗೆ ನೀತಿ, ನಿಯತ್ತು, ದೇಶ ಭಕ್ತಿ ತೋರಬೇಕಾದವನು, ಇದೀಗ ಲೋಕಾ ಬಲೆಯಲ್ಲಿ ಸಿಕ್ಕಿ ಬಿದ್ದಿರುವ ಪ್ರವೀಣ್‍ಕುಮಾರನಿಗೆ ಲಂಚ ಹೇಗೆ ಪಡೆಯಬೇಕು ಎನ್ನುವ ಪಾಠ ಹೇಳುತ್ತಿರುವುದು ಈಗ ಬಹಿರಂಗವಾಗಿದೆ. ಮೊದಲು ಈತ ಹಿಂದೂ ಜಾಗರಣ ವೇದಿಕೆ, ಸಂಘ ಪರಿವಾರದಲ್ಲಿ ಕೆಲಸ ಮಾಡಿಕೊಂಡಿದ್ದ, ಆದರೆ ಈ ಲಂಚ ಪೀಕುವ ಪಾಠ ಅದು ಹೇಗೆ ಬಂದತೋ ಆ ರಾಮನೆ ಬಲ್ಲ,
ಹಣ ಪೀಕ ಬೇಡ ಅಂದಿದ್ದ ಕೆಲ ಅಧಿಕಾರಿಗಳು.!
ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಳಿ ಸಿಕ್ಕಿ ಬಿದ್ದಿರುವ ಹೊನ್ನಾವರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲಂಚ ಪಡೆಯುತ್ತಿರುವುದು ಇದೆ ಮೊದಲೇನು ಅಲ್ಲವಂತೆ. ಜನನ ದಾಖಲೆ ಮಾಡಬೇಕು ಅಂದರೂ ಈತ ಹಣ ಕೇಳುತ್ತಿದ್ದ ಎನ್ನುವ ಆರೋಪ ಕೂಡ ಇತ್ತು. ಈತನ ಲಂಚಬಾಕತನ ನೋಡಿದ ಅಕ್ಕ-ಪಕ್ಕದ ತಾಲೂಕಿನ ಕೆಲ ಅಧಿಕಾರಿಗಳು ಅನೇಕ ಬಾರಿ ಈ ಪ್ರವೀಣನಿಗೆ ಪ್ರಾಮಾಣಿಕವಾಗಿ ಸರಕಾರದ ಸಂಬಳದಲ್ಲಿ ಬದುಕು ಅಂತಾ ಹೇಳಿ ಬುದ್ದಿ ಮಾತು ಹೇಳಿದ್ದು ಉಂಟಂತೆ, ಆದರೆ ಈತ ಹಳೆ ಚಾಳಿ ಮಾತ್ರ ಬಿಟ್ಟಿರಲಿಲ್ಲ. ಈತ ಚಂದ್ರಹಾಸ ಎಂಬುವವರ ಬಳಿ 2.5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು ಮುಂಗಡವಾಗಿ 60 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಬಳಿ ಲಾಕ್ ಆಗಿಬಿಟ್ಟಿದ್ದಾನೆ.
ಹೊನ್ನಾವರ ಜನತೆಗೆ ಸಂತಸದ ದಿನ
ಪಟ್ಟಣ ಪಂಚಾಯತಕ್ಕೆ ಯಾರೆ ಸಣ್ಣ-ಪುಟ್ಟ ಕೆಲಸಕ್ಕೆ ಹೋದರೂ ಈತನ ಬಾಯಿಂದ ಲಂಚದ ನುಡಿಮುತ್ತುಗಳೆ ಕೇಳಿ ಬರುತ್ತಿತ್ತು ಎನ್ನಲಾಗಿದೆ. ಈತ ಇಲ್ಲಿಗೆ ಬಂದಾಗಿನಿಂದ ಪ್ರತಿಯೊಂದು ಕೆಲಸಕ್ಕೆ ಜನ ಲಂಚಕೊಟ್ಟು ಕೊಟ್ಟು ಸುಸ್ತಾಗಿ ಹೋಗಿದ್ದಾರೆಂದು ಪ್ರತಿಯೊಬ್ಬರು ಆಡಿಕೊಳ್ಳುತ್ತಿದ್ದಾರೆ. ಲಂಚವಿಲ್ಲದೆ ಯಾವ ಒಂದು ಪತ್ರಕ್ಕೂ ಮುದ್ರೆ ಒತ್ತುತ್ತಿರಲ್ಲಿಲ್ಲ ಎನ್ನುವ ಆರೋಪ ಮೊದಲಿನಿಂದಲ್ಲೂ ಕೇಳಿ ಬರುತ್ತಿದೆ. ಈತನ ಲಂಚಾವತಾರಕ್ಕೆ ಬೆಂಗಾವಲಾಗಿ ನಿಂತವನೆ ಈ ವಿಜಯಾವತಾರ ಎಂಬ ವ್ಯಕ್ತಿ ಎನ್ನುವುದು ಹೊನ್ನಾವರ ಜನತೆಗೆ ಅರ್ಥವಾಗಿದೆ.