suddibindu.in
ಹೊನ್ನಾವರ : ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಪಟ್ಟಣ ಪಂಚಾಯತ ಅಧಿಕಾರಿ ಹಾಗೂ ಸದಸ್ಯ ನೋರ್ವನಿಗೆ ಕರೆದೊಯ್ಯುತ್ತಿದ್ದ ವೇಳೆ ಸಾರ್ವಜನಿಕರು ಧಿಕ್ಕಾರ ಕೂಗಿ ಗೂಸಾ ನೀಡಿರುವ ಘಟನೆ ಪಟ್ಟಣ ಪಂಚಾಯತ್ ಎದುರೆ ನಡೆದಿದೆ.

ನಿನ್ನೆ ಬುಧವಾರ ಹೊನ್ನಾವರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಪ್ರವೀಣಕುಮಾರ ಹಾಗೂ ಪಟ್ಟಣ ಪಂಚಾಯತ್‌ನ ಬಿಜೆಪಿ ಸದಸ್ಯ ವಿಜಯ ಕಾಮತ್ ಅಲಿಯಾಸ್ ವಿಜು ಕಾಮತ್ ಎಂಬುವವರ ಮೂಲಕ ಖಾತಾ ಬದಲಾವಣೆಗೆ ಸಂಬಂಧಿಸಿ ಮುಖ್ಯಾಧಿಕಾರಿ ಚಂದ್ರಹಾಸ ಎಂಬುವವರ ಬಳಿ ಎರಡುವರೆ ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಚಂದ್ರಹಾಸ್ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ದಾಖಲಿಸಿದ್ದು, ದೂರಿನ ಆಧಾರದ ಮೇಲೆ ಕಾರವಾರ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಿಗ್ಗೆ ದಾಳಿ ನಡೆಸಿದ್ದಾರೆ. ಈ ವೇಳೆ ವಿಜು ಕಾಮತ್ ಚಂದ್ರಹಾಸ್ ಅವರಿಂದ ಲಂಚದ ಹಣ 60 ಸಾವಿರ ರೂಪಾಯಿ ಪಡೆದುಕೊಂಡು ಅದನ್ನ ಪಟ್ಟಣ ಪಂಚಾಯತ್ ಅಧಿಕಾರಿ ಪ್ರವೀಣಕುಮಾರ ಬಳಿ ನೀಡುತ್ತಿದ್ದ ವೇಳೆ ದಾಳಿ ನಡೆಸಿದ್ದು, ಈ ವೇಳೆ ಪ.ಪಂ ಅಧಿಕಾರಿ ಹಾಗೂ ಸದಸ್ಯ ಇಬ್ಬರೂ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆದಿದ್ದಾರೆ.

ಇದನ್ನೂ ಓದಿ

ವಿಚಾರಣೆ ವೇಳೆಯಲ್ಲಿ ಪಟ್ಟಣ ಪಂಚಾಯತ ಅಧಿಕಾರಿ ಬಳಿ ಇನ್ನೂ ನಲವತ್ತು ಸಾವಿರ ಹಣ ಪತ್ತೆಯಾಗಿದೆ. ಆದರೆ ಅದು ಯಾವ ಹಣ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ ಎನ್ನಲಾಗಿದ್ದು, ಆ ಬಗ್ಹೆ ಸಹ ತನಿಖೆ ನಡೆಸಲಾಗುತ್ತಿದೆ. ಇನ್ನೂ ರಾತ್ರಿ ವೇಳೆ ಈ ಇಬ್ಬರೂ ಲಂಚಬಾಕರನ್ನ ಕಾರವಾರಕ್ಕೆ ನ್ಯಾಯಾಧೀಶರ ಎದರು ಹಾಜರು ಪಡಿಸಲು ಪಟ್ಟಣ ಪಂಚಾಯತ್‌ದಿಂದ ಕರೆದೊಯ್ಯುವ ವೇಳೆ ಸಾವಿರಾರೂ ಸಂಖ್ಯೆಯಲ್ಲಿ ಸೇರಿದ ಸಾರ್ವಜನಿಕರು ಪಟ್ಟಣ ಪಂಚಾಯತ ಸದಸ್ಯ ಹಾಗೂ ಅಧಿಕಾರಿ ಇಬ್ಬರಿಗೂ ಧಿಕ್ಕಾರ ಕೂಗಿದ್ದಾರೆ. ಇನ್ನೂ ಪ್ರವೀಣಕುಮಾರ ಅವರನ್ನ ಕರೆತರುವಾಗ ತಳ್ಳಾಟ ನುಕ್ಕಾಟ ನಡೆಸಿ ಆತನಿಗೆ ಗೂಸಾ ಹಾಕಿದ್ದಾರೆ. ಇದರಿಂದಾಗಿ ಕೆಲ ಸಮಯ ಸಾರ್ವಜನಿಕರನ್ನ ಚದುರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.