ಸುದ್ದಿಬಿಂದು ಬ್ಯೂರೋ
ಕುಮಟ : ಕಳೆದ ಒಂದು ವರ್ಷದ ಹಿಂದಷ್ಟೆ ನಡೆಲಾಗಿದ್ದ, ನೂರಾರು ಅಡಿಕೆ ಸಸಿಗಳನ್ನ ಯಾರೋ ಕಿಡಿಗೇಡಿಗಳು ರಾತ್ರಿ ಬೆಳಗ್ಗಾಗುವಷ್ಟರಲ್ಲಿ ಕಡಿದು ಹಾಕಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟ ತಾಲೂಕಿ‌ನ ಕೋಡ್ಕಣಿ ಗ್ರಾಮದಲ್ಲಿ ನಡೆದಿದೆ.

ಬಾಲಕೃಷ್ಣ ಶಾನಭಾಗ ಎಂಬುವವರು ಕೋಡ್ಕಣಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪದಲ್ಲಿ ಇದ್ದ ತಮ್ಮ ಜಮೀನಿನಲ್ಲಿ ಕಳೆದ ವರ್ಷ ಸುಮಾರು ಎರಡು ನೂರು ಅಡಿಕೆ ಗಿಡಗಳನ್ನ ನೆಟ್ಟಿದ್ದು,ಒಂದು ವರ್ಷದಿಂದ ಅವುಗಳ ಆರೈಕೆ ಮಾಡಿಕೊಂಡು ಬಂದಿದ್ದರು.

ಆದರೆ ಕಳೆದ ರಾತ್ರಿ(ರವಿವಾರ) ಯಾರೋ ಕಿಡಿಗೇಡಿಗಳು ಬಾಲಕೃಷ್ಣ ಅವರ ಅಡಿಕೆ ತೋಟಕ್ಕೆ ಅಕ್ರಮವಾಗಿ ನುಗ್ಗಿ ಶಾನಭಾಗ ಅವರ ಜಾಗದಲ್ಲ ಚಿಗುರೊಡೆಯುತ್ತಿದ್ದ ನೂರಾರು ಅಡಿಕೆ ಗಿಡಗಳಿಗೆ ಕೊಡಲಿ ಏಟು ಹಾಕಿ ಎಲ್ಲಾ ಗಿಡಗಳನ್ನ ನೆಲ್ಕುರುಳಿಸಿದ್ದಾರೆ‌. ಎಂದಿನಂತೆ ಬಾಲಕೃಷ್ಣ ಶಾನಭಾಗ ಬೆಳಿಗ್ಗೆ ಬಂದು ತೋಟ ನೋಡಿದಾಗ ಎಲ್ಲಾ ಅಡಿಕೆ ಗಿಡಿಗಳು ಕಡಿದಿರುವುದನ್ನ ಕಂಡು ಶಾಕ್ ಆಗಿದ್ದಾರೆ.

ಘಟನೆ ಕುರಿತಾಗಿ ಸ್ಥಳೀಯ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.