ಸುದ್ದಿಬಿಂದು ಬ್ಯೂರೋ
ಕುಮಟಾ
: ನೀರಿನ ಸಮಸ್ಯೆ ಎದುರಾಗಿರುವುದರಿಂದ ಸರಕಾರಿ ಶಾಲೆಗಳಲ್ಲಿ ಬಿಸಿಯೂಟ ತಯಾರಿಸಲು ಕಷ್ಟವಾಗಲಿದೆ.ಈ ಕಾರಣಕ್ಕೆ ಶಾಲಾ ಪ್ರಾರಂಭೋತ್ಸವನ್ನ ಒಂದು ವಾರಗಳ ಕಾಲ ಮುಂದುಡಬೇಕು. ಇಲ್ಲವೆ ಒಂದು ವಾರಗಳ ಕಾಲ ಶಾಲಾ ಸಮಯವನ್ನ ಅರ್ಧ ದಿನಕ್ಕೆ ನಿಗದಿ ಮಾಡಬೇಕು ಎಂದು ಶಾಸಕ ದಿನಕರ ಶೆಟ್ಟಿ ಮನವಿ ಮಾಡಿದ್ದಾರೆ.

ಇಂದಿನಿಂದ ಸರಕಾರಿ ಶಾಲೆಗಳು ಪ್ರಾರಂಭವಾಗುತ್ತಿದೆ. ಈ ವರ್ಷ ಅತೀ ಹೆಚ್ಚು ನೀರಿನ ಸಮಸ್ಯೆ ಎದುರಾಗಿದೆ. ಗ್ರಾಮೀಣ ಪ್ರದೇಶ ಸೇರಿದಂತೆ ಪಟ್ಟಣ ವ್ಯಾಪ್ತಿಯಲ್ಲಿಯೂ ಕೂಡ ನೀರಿನ ಅಭಾವ ಉಂಟಾಗಿದೆ. ನೀರು ಸಿಕ್ಕರೂ ಸಹ ಅದು ಕಲುಷಿತವಾಗಿದೆ.ಇದನ್ನ ಉಪಯೋಗಿಸಿದಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬಿಳುವ ಸಾಧ್ಯತೆ ಇದೆ.

ಇನ್ನೂ ತಾಪಮಾನ ಸಹ ಏರಿಕೆ ಆಗುತ್ತಿದ್ದು,ಇದು ಸಹ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.‌ ಹೀಗಾಗಿ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಶಾಲಾ ಪ್ರಾರಂಭೋತ್ಸವ ಮುಂದುಡಬೇಕು. ಇಲ್ಲ ನೀರಿನ ಸಮಸ್ಯೆ ಬಗೆಹರಿಯುವ ತನಕ ಅರ್ಧ ದಿನ ಶಾಲೆ ನಡೆಸುವಂತಾಗಬೇಕು ಎಂದು ದಿನಕರ ಶೆಟ್ಟಿ ಆಗ್ರಹಿಸಿದ್ದಾರೆ.