ಕುಮಟಾ :ವಿವಿಧ ಯೋಜನೆಗಳ ಶಂಕು ಸ್ಥಾಪನೆ ಹಾಗೂ ವಿವಿಧ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಇಂದು ಶುಕ್ರವಾರ ಕುಮಟಾಕ್ಕೆ ಆಗಮಿಸಬೇಕಿದ್ದ ಸಿ ಎಂ ಬಸವರಾಜ್ ಬೊಮ್ಮಾಯಿ ಅವರ ಭೇಟಿ ಇದೀಗ ದಿಢೀರ್ ರದ್ದಾಗಿದೆ.

ಸಿ ಎಂ ಬಸವರಾಜ್ ಬೊಮ್ಮಾಯಿ ಅವರು ಇಂದು ಶುಕ್ರವಾರ ಕುಮಟಾ ವಿಧಾನಸಭಾ ಕ್ಷೇತ್ರಕ್ಕೆ ಆಗಮಿ.ಸೂಫರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅಡಿಗಲ್ಲು, ಮೀನಿ ವಿಧಾನಸೌಧ ಉದ್ಘಾಟನೆ ಸೇರಿದಂತೆ ಹಲವು ಯೋಜನೆಗೆಗಳಿಗೆ ಚಾಲನೆ ನೀಡ ಬೇಕಿತ್ತು. ಜೊತೆಗೆ ಹಲವು ಹೊಸ ಕಾಮಗಾರಿಗಳಿಗೆ ಚಾಲನೆ ನೀಡ ಬೇಕಿತ್ತು.

ಆದರೆ ತಡ ರಾತ್ರಿಯವರೆಗೂ ಸಹ ಸಿ ಎಂ ಅವರು ಕುಮಟಾಕ್ಕೆ ಆಗಮಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಎಲ್ಲಾ ಸಿದ್ದತೆಗಳನ್ನ ಸಹ ಮಾಡಿಕೊಂಡಿತು. ಆದರೆ ಇದೀಗ ಸಿ ಎಂ ಅವರು ಕುಮಟಾ ಭೇಟಿ ದಿಢೀರ್ ರದ್ದಾಗಿದೆ. ಸಿ ಎಂ ಮಾರ್ಚ್ ಕೊನೆ ವಾರದಲ್ಲಿ ಬರುವ ಸಾಧ್ಯತೆ ಇದೆ.

ಇಂದು ಸಿ ಎಂ ಅವರು ಆಗಮಿಸಿದ್ದರೆ ವಸತಿ ಯೋಜನೆ ಸೇರಿದಂತೆ ಅನೇಕ ಸರಕಾರಿ ಕಾರ್ಯಕ್ರಮಗಳಿಗೆ ಸಿ ಎಂ ಅವರೆ ಚಾಲನೆ ಚಾಲನೆ ನೀಡುವವರಿದ್ದರು. ಆದರೆ ಕೊನೆಗಳಿಗೆಯಲ್ಲಿ ಸಿ ಎಂ ಕುಮಟಾ ಭೇಟಿ ರದ್ದಾಗಿದೆ..

ಇನ್ನೂ ಸಿ ಎಂ ಬಸವರಾಜ್ ಬೊಮ್ಮಾಯಿ ಇಂದು ಕುಮಟಾಕ್ಕೆ ಆಗಮಿಸಲಿರುವ ಹಿನ್ನಲೆಯಲ್ಲಿ ಜಿಲ್ಲೆಯ ಪ್ರತಿ ತಾಲೂಕುಗಳಿಂದ ಹತ್ತಾರು ಬಸ್ ಗಳ ಮೂಲಕ ಸಾವಿರಾರು ಜನರನ್ನ ಕರೆತರಲು ತಯಾರಿ ಮಾಡಿಕೊಳ್ಳಲಾಗಿತ್ತು. ಆದರೆ ಇದೀಗ ದಿಢೀರ್ ಸಿ ಎಂ ಕುಮಟಾ ಭೇಟಿ ರದ್ದಾಗಿರುವುದು ಫಲಾನುಭವಿಗಳಿಗೆ ಹಾಗೂ ಬಿಜೆಪಿ ಕಾರ್ಯಕರ್ತರಲ್ಲಿ ಬೇಸರ ಉಂಟುಮಾಡಿದೆ.