ಕುಮಟಾ : ವಿಧಾನಸಭಾ ಚುನಾವಣೆಗೆ ಇನ್ನೂ ಕೆಲ ದಿನಗಳಿರುವಾಗಲೆ ಕಾಂಗ್ರೆಸ್ ತನ್ನ ಪಕ್ಷದ ಅಭ್ಯರ್ಥಿಗಳ ಹೆಸರನ್ನ ಘೋಷಣೆ ಮಾಡಲಿದ್ದು, ಇದರ ಬೆನ್ನಲ್ಲೆ ಕುಮಟ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಜೋರಾಗಿದ್ದು, ಸದ್ಯದ ರಾಜಕೀಯ ಬೆಳವಣಿಗೆಯಲ್ಲಿ ಅಚ್ಚರಿ ಎಂಬಂತೆ ನಿವೇದಿತ್ ಆಳ್ವ ಇಂದು ಎಲ್ಲಾ ಟಿಕೇಟ್ ಆಕಾಂಕ್ಷಿಗಳ ಮನೆಗೆ ವೈಯಕ್ತಿಕವಾಗಿ ಭೇಟಿ ನೀಡಿ ಬೆಂಬಲ ಕೇಳುತ್ತಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದ್ದು, ಕೆಲವು ಬೆಂಬಲ ನೀಡುಬ ಭರವಸೆ ನೀಡಿದ್ದಾರೆನ್ನಲಾಗುತ್ತಿದೆ.

ಈ ಬಾರಿಯ ಚುನಾವಣೆಯಲ್ಲಿ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧೆ ಬಯಸಿ ಮಾಜಿ ಶಾಸಕಿ ಶಾರದಾ ಶೆಟ್ಟಿ ಸೇರಿ 10ಕ್ಕೂ ಹೆಚ್ಚು ಆಕಾಂಕ್ಷಿಗಳು ಟಿಕೇಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ನಡುವೆ ಇದೀಗ ಮಾಜಿ ಸಂಸದೆ ಮಾರ್ಗರೇಟ್‌ ಆಳ್ವ ಪುತ್ರ ನಿವೇದಿತ್ ಆಳ್ವ ಕ್ಷೇತ್ರದಲ್ಲಿ ಸಂಚರಿಸುತ್ತಿರುವುದು ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ.

ಇದರ ನಡುವೆಯೇ ನಿವೇದಿತ್ ಆಳ್ವ ಇಂದು ಎಲ್ಲಾ ಆಕಾಂಕ್ಷಿಗಳ ಮನೆಗೆ ಭೇಟಿ ನಡೆಸಿದ್ದು, ಅದರಲ್ಲಿ ಈಗಗಾಲೆ ಕೆಲವರನ್ನ ಭೇಟಿ ಮಾಡಿ ಬಹುತೇಕ ಟಿಕೇಟ್ ತನ್ನಗೆ ಪೈನಲ್ ಆಗಿದೆ ಎನ್ನುವ ರೀತಿಯಲ್ಲಿ ಬೆಂಬಲ ಕೇಳುತ್ತಿದ್ದಾರೆ ಎನ್ನಲಾಗಿದೆ. ಅವರ ಜೊತೆ ಅವರ ಸಹೋದರ ಕೂಡ ಇದ್ದಾರೆ ಎನ್ನುವ ಬಗ್ಗೆ ತಿಳಿದುಬಂದಿದೆ. ಆಳ್ವಾ ಅವರ ಈ ಎಲ್ಲಾ ನಡೆಗಳನ್ನ ನೋಡಿದರೆ ಹೈಕಮಾಂಡಗೆ ಆಪ್ತರಾಗಿರುವ ಮಾರ್ಗರೇಟ್ ಅವರ ಪುತ್ರ ನಿವೇದಿತ್ ಅವರಿಗೆ ಕುಮಟಾ ಕ್ಷೇತ್ರದಿಂದ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದೆಯಾ ಎನ್ನುವ ಚರ್ಚೆ ಜೋರಾಗಿದೆ.

ಆದರೆ ಅಧಿಕೃತವಾಗಿ ಘೋಷಣೆ ಆಗದೆ ಹೊರತು ಕುಮಟಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೇಟ್ ಯಾರಿಗೆ ಅಂತಾ ಈಗಲೆ ಸ್ಪಷ್ಟವಾಗಿ ಹೇಳೋದಕ್ಕೆ ಸಾಧ್ಯವಿಲ್ಲ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನಿವೇದಿತ್ ಆಳ್ವ ಅವರ ನಡೆಯನ್ನ ಸೂಕ್ಣ್ಮವಾಗಿ ಗಮನಿಸಿದ್ದರೆ ಹೈಕಮಾಂಡ ಗ್ರಿನ್ ಸಿಗ್ನಲ್ ನೀಡಿರುವಂತೆ ಕಂಡು ಬರುತ್ತಿರುವುದು ಮಾತ್ರ ಸತ್ಯ