ಕಾರವಾರ : ಚುನಾವಣೆ ಹತ್ತಿರವಾಗತ್ತಾ ಇರುವಂತೆ ಎಲ್ಲಾ ಪಕ್ಷದಲ್ಲಿಯೂ ಸಹ ಟಿಕೇಟ್ ಆಕಾಂಕ್ಷಿಗಳು ಹೆಚ್ಚಾಗೋದು ಸಾಮಾನ್ಯ, ಆದರೆ ಇದೀಗ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಕೋಮಾರಪಂಥ ಸಮಾಜದ ಕುಮಾರ ನಾಯ್ಕ ಹಳಗಾ,ಎಂಬುವವರಿಗೆ ಬಿಜೆಪಿ ಟಿಕೇಟ್ ನೀಡಬೇಕೆಂದು ಅವರ ಅಭಿಮಾನಿಗಳು ಒತ್ತಾಯಿಸಿದ್ದಾರೆ.

ಕಾರವಾರದ ಜಿಲ್ಲಾ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ಕರೆದ ಕುಮಾರ ನಾಯ್ಕ ಅಭಿಮಾನಿಗಳು. ಕುಮಾರ ನಾಯ್ಕ ಕಳೆದ ಅನೇಕ ವರ್ಷಗಳಿಂದ ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡು ಬಂದಿದ್ದಾರೆ ಹಾಗೂ ಅವರು ಯುವಕರಾಗಿದ್ದು, ಅವರ ಜೊತೆ ದೊಡ್ಡ ಸಂಖ್ಯೆಯಲ್ಲಿ ಯುವಕ ಪಡೆ ಇದೆ.

ಹೀಗಾಗಿ ಈ ಭಾರಿಯ ವಿಧಾನಸಭಾ ಚುನಾವಣೆಯಲ್ಲಿ ಕುಮಾರ ನಾಯ್ಕ ಅವರಿಗೆ ಬಿಜೆಪಿಯಿಂದ ಸ್ಪರ್ಧೆಗೆ ಅವಕಾಶ ನೀಡಬೇಕು ಎಂದು ಅವರ ಅಭಿಮಾನಿಗಳು ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಮಯದಲ್ಲಿ ಕುಮಾರ ನಾಯ್ಕ ಅವರ ನೂರಾರು ಅಭಿಮಾನಿಗಳು ಹಾಜರಿದ್ದರು