ಸುದ್ದಿಬಿಂದು ಬ್ಯೂರೋ
ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ನಿನ್ನೆಯವರೆಗೆ ವ್ಯಾಪಕವಾಗಿ ಮಳೆ ಸುರಿದಿದ್ದು, ಇಂದು ಬಳಿಕ ಮಳೆ ಪ್ರಮಾಣ ಇಳಿಮುಖವಾಗಿದೆ. ಹೀಗಾಗಿ ನಾಳೆ ಎಂದಿನಂತೆ ಶಾಲಾ- ಕಾಲೇಜು (school-college,) ಆರಂಭವಾಗಲಿದೆ ಎಂದು ಜಿಲ್ಲಾಡಳಿತದಿಂದ ಸುದ್ದಿಬಿಂದು ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ.
ಜಿಲ್ಲೆಯ ಕರಾವಳಿಯ ಐದು ತಾಲೂಕಿನಲ್ಲಿ ರೆಡ್ ಅಲರ್ಟ್(red alert ) ಘೋಷಣೆ ಇರುವ ಕಾರಣಕ್ಕ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಕಾರವಾರ, ಅಂಕೋಲಾ ,ಕುಮಟ, ಹೊನ್ನಾವರ ಹಾಗೂ ಭಟ್ಕಳ ತಾಲೂಕಿನ ಎಲ್ಲಾ ಶಾಲಾ- ಕಾಲೇಜಿಗೆ ರಜೆ ನೀಡಲಾಗಿತ್ತು. ಆದರೆ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆ ಆಗಿರುವ ಹಿನ್ನಲೆಯಲ್ಲಿ ಶಾಲಾ-ಕಾಲೇಜಿಗೆ ರಜೆ ಘೋಷಣೆ ಮಾಡಿಲ್ಲ.