ಸುದ್ದಿಬಿಂದು ಬ್ಯೂರೋ
ಕಾರವಾರ (ಗೋವಾ)
: ಕರ್ನಾಟಕ ಹಾಗೂ ಗೋವಾ ಗಡಿ ಭಾಗವಾಗಿರುವ ದೂದ್ ಸಾಗರ ಜಲಪಾತ ಬಳಿಯ ಸುರಂಗ ಮಾರ್ಗಬಳಿ ಭೂಕುಸಿತವಾಗಿರುವ ಘಟನೆ ಇಂದು ಸೋಮವಾರ ಬೆಳಿಗ್ಗೆ ನಡೆದಿದೆ.

ದೂದ್ ಸಾಗರ ಜಲಪಾತ ಬಳಿ ರೈಲ್ವೆ ಹಳಿಯ ಸುರಂಗ ಮಾರ್ಗದ ಎದುರು ಈ ಘಟನೆ ಸಂಭವಿಸಿದ್ದು.ಸುರಂಗ ಮಾರ್ಗದ ಮೇಲ್ಭಾಗದಿಂದ ಬೃಹತ್ ಗಾತ್ರದ ಕಲ್ಲು, ಮಣ್ಣಿನ ರಾಶಿಗಳು ರೈಲ್ವೆ ಹಳಿಯ ಮೇಲೆ ಬಿದಿದ್ದೆ.

ಇನ್ನೂ ಸ್ಥಳದಲ್ಲೆ ಇದ್ದ ನೈರುತ್ಯ ರೈಲ್ವೆ ಸಿಬ್ಬಂದಿಗಳು ರೈಲ್ವೆ ಹಳಿಯ ಮೇಲೆ ಬಿದಿರುವ ಕಲ್ಲು,ಮಣ್ಣಿನ ರಾಶಿಯನ್ನ ತೆರವು ಮಾಡಿದ್ದು,ರೈಲ್ವೆ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ. ಮಾಡಿಕೊಟ್ಟಿರುವುದರಿಂದ ಯಾವುದೇ ಸಂಚಾರ ವ್ಯತ್ಯಯ ಆಗಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.