ಯಲ್ಲಾಪುರ : ಕ್ಷೇತ್ರದಲ್ಲಿ ಅಷ್ಟೊಂದು ಪ್ರಭಲವಾಗಿಲ್ಲದ ಜೆಡಿಎಸ್ ನಲ್ಲಿ ಟಿಕೇಟ್ ಗಾಗಿ ಇಬ್ಬರ ನಡುವೆ ತೀವ್ರವಾದ ಪೈಪೋಟಿ ನಡೆದಿದ್ದು, ಸದ್ಯದ ರಾಜಕೀಯ ಬೆಳವಣಿಗೆಯಲ್ಲಿ ಇಬ್ಬರಲ್ಲಿ ಓರ್ವ ಆಕಾಂಕ್ಷಿ ಎಕ್ಟಿವ್ ಆಗಿ ಪಕ್ಷ ಸಂಘಟನೆಯಲ್ಲಿ ತೋಡಗಿರುವಂತೆ ಕಾಣುತ್ತಿದೆ.
ಯಲ್ಲಾಪುರ-ಮುಂಡಗೋಡ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಟಿಕೇಟ್ ಗಾಗಿ ನಾಗೇಶ ನಾಯ್ಕ ಕಾಗಲ್ ಹಾಗೂ ಸಂತೋಷ ರಾಯ್ಕರ್ ತೀವ್ರ ಪೋಪೋಟಿ ನಡೆಸುತ್ತಿದ್ದಾರೆ.
ಆದರೆ ಕ್ಷೇತ್ರದಲ್ಲಿ ಇತ್ತೀಚಿನ ಬೆಳವಣಿಗೆ ನೋಡಿದ್ದರೆ. ನಾಗೇಶ ನಾಯ್ಕ ಕಾಗಲ ಅವರು ಕ್ಷೇತ್ರದ ತುಂಬಾ ಸಂಚರಿಸಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೋಡಗಿಕೊಂಡಿದ್ದಾರೆ.
ಇನ್ನೂ ಸಂತೋಷ ರಾಯ್ಕರ್ ಅವರು ಈ ಹಿಂದೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಅವರು ಯಲ್ಲಾಪುರಕ್ಕೆ ಭೇಟಿ ನೀಡಿದ ಸಮಯದಲ್ಲಿ ಕಾಣಿಸಿಕೊಂಡಿದ್ದು, ನಂತರದ ದಿನದಲ್ಲಿ ಅವರು ಅಷ್ಟಾಗಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಎನ್ನುವ ಮಾತು ಕ್ದೇತ್ರದ ಜನತೆಯಿಂದ ಕೇಳಿ ಬರತ್ತಾ ಇದೆ.
ಈ ಎಲ್ಲಾ ಬೆಳವಣಿಗೆಯನ್ನ ಸೂಕ್ಷ್ಮವಾಗಿ ಗಮನಿಸಿದ್ದರೆ. ಸಂತೋಷ ರಾಯ್ಕರ್ ಅವರು ಈ ಭಾರಿಯ ಚುನಾವಣಾ ಕಣದಿಂದಲ್ಲೆ ಹಿಂದಕ್ಕೆ ಸರಿಯಲ್ಲಿದ್ದಾರ ಎನ್ನುವ ಮಾತು ಸಹ ಜೆಡಿಎಸ್ ಕಾರ್ಯಕರ್ತರಿಂದ ಕೇಳಿ ಬರಲಾರಂಬಿಸಿದೆ.