ಸುದ್ದಿಬಿಂದು ಬ್ಯೂರೋ
ಕುಮಟ : ಉತ್ತರಕನ್ನಡ ಜಿಲ್ಲೆಯ ಶಿರಸಿ-ಕುಮಟ ಹೆದ್ದಾರಿಯ ದೇವಿಮನೆ ಘಟ್ಟದಲ್ಲಿ ಅಪರಿಚಿತ ವ್ಯಕ್ತಿ ಓರ್ವನ ಶವ ಪತ್ತೆಯಾಗಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.
ಮೃತ ವ್ಯಕ್ತಿಗೆ 35-ರಿಂದ 40 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ.ಸಾವನ್ನಪ್ಪಿರುವ ವ್ಯಕ್ತಿಯ ತಲೆ ಹಿಂಬದಿಯಲ್ಲಿ ಗಾಯ ಇದೆ ಎನ್ನಲಾಗಿದ್ದು, ಯಾರೋ ಕೊಲೆ ಮಾಡಿ ಎಸೆದು ಹೋಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.ಮೃತ ವ್ಯಕ್ತಿ ಬಿಳಿ ಶರ್ಟ ಹಾಗೂ ಲುಂಗಿ ಹಾಕಿದ್ದು, ಶರ್ಟನಲ್ಲಿ ಬಸ್ ಟಿಕೆಟ್ ಸಹ ಪತ್ತೆಯಾಗಿದೆ.
ಇನ್ನೂ ಈತ 28ಗುರುವಾರದಂದು ಮುಶಿಗೇರಿ ಯಿಂದ ಗಂಜೇಂದ್ರಗಡಕ್ಕೆ ಪ್ರಯಾಣಿಸಿರುವ ಟಿಕೆಟ್ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಈಗಾಗಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನಾ ಸ್ಥಳದಲ್ಲಿ ಕುಮಟ ಪಿಎಸ್ ಐ ನವೀನ್ ನಾಯ್ಕ ಹಾಗೂ ಪೊಲೀಸ್ ಸಿಬ್ಬಂದಿಗಳು ಪರಿಶೀಲನೆ ಮುಂದುವರೆಸಿದ್ದಾರೆ.