ಸುದ್ದಿಬಿಂದು ಬ್ಯೂರೋ
ಶಿರಸಿ : ರಾಷ್ಟ್ರ ಧ್ವಜಕ್ಕೆ ಮಸ್ಲಿಂ ಧರ್ಮದ ಮದೀನಾ ಗುಂಬಸ್ ಅಂಟಿಸಿ ಮನೆಯ‌ ಮೇಲೆ ರಾಷ್ಟ್ರ ಧ್ವಜ ಹಾರಿಸಿದ ವ್ಯಕ್ತಿಯನ್ನ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಬಂಧನ ಮಾಡಲಾಗಿದೆ.

ಶಿರಸಿ ನಗರದ ನಿವಾಸಿಯಾಗಿರುವ ಉಮರ್ ಫಾರೂಕ್ ಅಬ್ದುಲ್ ಖಾದರ ಶೇಖ ಎಂಬಾತನೆ ಬಂಧಿತ ವ್ಯಕ್ತಿಯಾಗಿದ್ದಾನೆ.

ಈತ ಮನೆಯ ಮೇಲೆ ರಾಷ್ಟ್ರ ಧ್ವಜವನ್ನ ಹಾರಿಸಿದ್ದಾನೆ. ಹಾರಿಸಿರುವ ರಾಷ್ಟ್ರ ಧ್ವಜಕ್ಕೆ ಮುಸ್ಲಿಂ ಧರ್ಮದ ಮದೀನಾ ಗುಂಬಸ್ ಚಿತ್ರವನ್ನ ಅಂಟಿಸಿ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ್ದ,

ಈತ ಮನೆಯ ಹಂಚಿನ ಮೇಲ್ದಾವಣಿಯ ಮೇಲ್ದಾಗದಲ್ಲ ಒಂದು ಕಂಬಕ್ಕೆ ಈತ ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆಯಲ್ಲ ರಾಷ್ಟ್ರಧ್ವಜವನ್ನು ಮಾಡಿ ಅದರ ಮಧ್ಯದಲ್ಲಿ ಅಶೋಕ ಚಕ್ರ ಇರುವ ಜಾಗದಲ್ಲಿ ಮುಸ್ಲಿಂ ಧರ್ಮದ ಮದಿನಾ ಗುಂಬಸಿನ ಚಿತ್ರ ಹಾಕಿ ಮುಸ್ಲಿಂದ ಧರ್ಮದ ಘೋಷಣೆ ಬರೆದ ಚಿತ್ರ ಇದುದ್ದನ್ನು ಎಲ್ಲರಿಗೂ ಕಾಣುವಂತೆ ಹಾರಿಸಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದ,

ಈ ಪೊಟೋ ಸಾಮಾಜಿಕ‌ ಜಾಲ ತಾಣದಲ್ಲಿ ಹರಿದಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಶಿರಸಿ ಪೊಲೀಸರು ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿರುವ ಉಮರ್ ಫಾರೂಕ್ ಅಬ್ದುಲ್ ಖಾದರ ಶೇಖ ಎಂಬಾತನನ್ನ ಬಂಧಿಸಿದ್ದಾರೆ.

ಈ ಕುರಿತಾಗಿ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಲಾಗಿದೆ.