ಹುಬ್ಬಳ್ಳಿ: ಗಣೇಶ ವಿಸರ್ಜನೆ ವೇಳೆ ವಿನಾಯಕನಿಗೆ ಬೆಂಕಿ ತಗುಲಿದ್ದು, ಅದೃಷ್ಟವಶಾತ್ ದೊಡ್ಡ ದುರಂತ ತಪ್ಪಿದೆ‌.ಶಿವಾಜಿ ವೃತ್ತದ ಬಳಿ ಮರಾಠಗಲ್ಲಿ ಸಾರ್ವಜನಿಕ ಬೃಹತ್ ಗಣೇಶ ಮೂರ್ತಿ ಬಟ್ಟೆಗೆ ಬೆಂಕಿ ತಗುಲಿ, ಕೆಲಹೊತ್ತು ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

25 ಅಡಿ ಎತ್ತರದ ಗಣೇಶ ಮೂರ್ತಿಗೆ ತೊಡಿಸಿದ್ದ ರೇಷ್ಮೆಬಟ್ಟೆಗೆ ಸಿಡಿಮದ್ದಿನ ಕಿಡಿ ತಾಕಿ ಬೆಂಕಿ ಹೊತ್ತಿಕೊಂಡಿತ್ತು. ತಕ್ಷಣ ಎಚ್ಚೆತ್ತ ಸಮಿತಿ ಸದಸ್ಯರು ನೀರು ಹಾಕಿ ಬೆಂಕಿ ನಂದಿಸುವಲ್ಲಿ ಸಫಲರಾದರು.

ರೇಷ್ಮೆ ಬಟ್ಟೆ ಬದಲು ಬಿಳಿಬಟ್ಟೆ ತೊಡಿಸಿ ಮೆರವಣಿಗೆ‌ಯನ್ನ ತದನಂತರ ನಡೆಸಲಾಯಿತು. ಈ ವೇಳೆ ಮೆರವಣಿಗೆಯಲ್ಲಿ ಸಾವಿರಾರೂ ಜನರು ಪಾಲ್ಗೊಂಡಿದ್ದರು. ಇನ್ನೂ ಮುಂದಿನ ದಿನಗಳಲ್ಲಿ ಗಣೇಶ ವಿಸರ್ಜನೆ ವೇಳೆ ಸಂಘಟಕರು ಮತ್ತಷ್ಟು ಜಾಗೃತರಾಗಿ ಇರಬೇಕಿರುವುದು ಅವಶ್ಯಕವಾಗಿದೆ