suddibindu.in
ಭಟ್ಕಳ: ಬಿಜೆಪಿಯ(BJP) ಎಷ್ಟೋ ಜನ ನಮ್ಮದೇ ಕ್ಷೇತ್ರದಲ್ಲಿ ಬಂದು ತಮಗೇ ಟಿಕೆಟ್ ಸಿಕ್ಕಿದೆ ಎಂದು ಓಡಾಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲೇ ಇನ್ನೂ ಕನ್ಫೂಷನ್‌ನಲ್ಲಿದ್ದಾರೆ, ಬಿಜೆಪಿಯಲ್ಲಿ ಎಲ್ರೂ ಟಿಕೆಟ್ ಜೇಬಿನಲ್ಲೇ ಇಟ್ಕೊಂಡು ಓಡಾಡ್ತಿದಾರೆಂದು ಫೈರ್‌ಬ್ರ್ಯಾಂಡ್ (firebrand) ಅನಂತ‌ಕುಮಾರ ಹೆಗಡೆ (Anantakumar Hegde,) ಸ್ವ-ಪಕ್ಷದವರಿಗೆ ಟಾಂಗ್ ನೀಡಿದ್ದಾರೆ.

ಅವರು ಭಟ್ಕಳದ (Bhatkala ) ಮಾವಳ್ಳಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಂಸದ ಅನಂತಕುಮಾರ ಹೆಗಡೆ, ನೋಡಪ್ಪಾ ನನ್ ಕೈಯಲ್ಲಂತೂ ಟಿಕೆಟ್ ಇಲ್ಲ, ಕ್ಯಾಂಡಿಡೇಟ್ ಯಾರಂತಾ ಡಿಸೈಡ್ ಮಾಡ್ತಾರೋ ಅವರನ್ನ ಗೆಲ್ಲಿಸೋಣ.ನಾನ್ ಕ್ಯಾಂಡಿಡೇಟ್ ಅಂತಾ ಇಲ್ಲಿಗೆ ಬಂದಿಲ್ಲ, ನನ್ಹತ್ರ ಅಂತೂ ಇವತ್ತು ಟಿಕೆಟ್ ಇಲ್ಲ. ಬಿಜೆಪಿ ಯಾರನ್ನ ಕ್ಯಾಂಡಿಡೇಟ್ ಅಂತಾ ನಿಲ್ಸತ್ತೆ ಅಂತವರನ್ನೇ ಗೆಲ್ಲಿಸಬೇಕು. ನನ್ನನ್ನು ಆರು ಸಲ ಈ‌ ಕ್ಷೇತ್ರದಿಂದ ಗೆಲ್ಲಿಸಿದ್ದೀರಿ, ಇದಕ್ಕಿಂತ ಜಾಸ್ತಿ ಮತ್ತೇನು ಬೇಕು.ಆಸೆ ಪಡ್ಲಿಕ್ಕೂ ಒಂದು ಮಿತಿಯಿರತ್ತೆ, ಅದಕ್ಕಿಂತ ಜಾಸ್ತಿ ಆಸೆ ಪಡಬಾರದು, ಭಗವಂತ ಮೆಚ್ಚುವುದಿಲ್ಲ. ಅನಾರೋಗ್ಯದ ಕಾರಣದಿಂದ ರಾಜಕೀಯಕ್ಕೆ ಬರಲು ಆಗುವುದಿಲ್ಲ ಎಂದು ದೂರವಾಗಿದ್ದೆ.ಆದರೂ ಕ್ಷೇತ್ರದ ವಿವಿಧೆಡೆಯಿಂದ ಕಾರ್ಯಕರ್ತರು ಬರುವಂತೆ ಒತ್ತಾಯಿಸುತ್ತಿದ್ದಾರೆ.ಹೀಗಾಗಿ ಬರಬೇಕಾಯತ್ತು ಎನ್ನುವ ಮೂಲಕ ಟಿಕೆಟ್ ಆಕಾಂಕ್ಷಿಗಳಿಗೆ ಟಾಂಗ್ ಕೊಟ್ಟರು.

ಇದನ್ನೂ ಓದಿ:-

ಎಲ್ಲೆಲ್ಲಿ ನಮ್ಮ ಸಮಾಜದ ಮೇಲೆ ಅಪಮಾನವಾಗಿದೆ, ಇತಿಹಾಸದಲ್ಲಿ ಅವಹೇಳನ ಮಾಡಲಾಗಿದೆ ಅದೆಲ್ಲದಕ್ಕೂ ಪರಿಮಾರ್ಜನೆ ಆಗಲೇಬೇಕು.‌ಭಟ್ಕಳದ ಚಿನ್ನದಪಳ್ಳಿ ಮಸೀದಿ ಕೆಳದಿಯ ಅಘೋರೇಶ್ವರ ದೇವಸ್ಥಾನದ ಶಿಖರ ಅದು ಶಿರಸಿಯ ಸಿಪಿ ಬಜಾರ್ ಮಸೀದಿ ಸಹ ನಮ್ಮದೇನೆ, ನ್ಯಾಯಾಲಯದಲ್ಲಿ ಪ್ರಕರಣ ನಡೀತಿದೆ.‌ ಒಂದು ಚುನಾವಣೆಯಲ್ಲ, ಶತಮಾನಗಳ ಕಾಲ ಬಿಜೆಪಿ ಗೆಲ್ಲುತ್ತಲೇ ಇರಬೇಕು. ನಾವಿರ್ತೀವೋ ಬಿಡ್ತಿವೋ ಗೊತ್ತಿಲ್ಲ ಸದಾ ಗೆಲುವು ಬಿಜೆಪಿಗಾಗಿರಬೇಕು ಎಂದರು.