ಸುದ್ದಿಬಿಂದು ಬ್ಯೂರೋ
ಕುಮಟ : ಹೆದ್ದಾರಿಯಲ್ಲಿ ಅಪಘಾತಕ್ಕೆ ಒಳಗಾಗಿ ಬಿದ್ದಿದ್ದ ಜಾನುವಾರು ಒಂದಕ್ಕೆ ಕಾರ ಡಿಕ್ಕಿ ಹೊಡೆದು ಕಾರ ಜಖಂ ಗೊಂಡು ಕಾರನಲ್ಲಿದ್ದವರು ಗಾಯಗೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟ ತಾಲೂಕಿನ ಮಿರ್ಜಾನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಮಿರ್ಜಾನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಾತ್ರಿ ವೇಳೆ ಅಪರಿಚಿತ ವಾಹನವೊಂದು ಹೆದ್ದಾರಿಯಲ್ಲಿದ್ದ ಜಾನುವಾರು ಒಂದಕ್ಕೆ ಡಿಕ್ಕಿ ಹೊಡೆದು ಜಾನುವಾರು ಹೆದ್ದಾರಿಯಲ್ಲಿ ಮೃತಪಟ್ಟಿ ಬಿದ್ದಿತ್ತು.

ನಂತರದಲ್ಲಿ ಅಂಕೋಲಾ‌ಕಡೆಯಿಂದ ಕುಮಟ ಕಡೆ ಚಲಿಸುತ್ತಿದ್ದ ಕಾರ ಚಾಲಕ ಹೆದ್ದಾರಿ ಮೃತಪಟ್ಟು ಬಿದಿದ್ದ ಜಾನುವಾರುವನ್ನ ಗಮನಿಸದೆ ಆ ಜಾನುವಾರಿಗೆ ಡಿಕ್ಕಿ ಹೊಡೆದಿದ್ದಾನೆ‌. ಇದರಿಂದಾಗಿ ಕಾರ ಜಖಂಗೊಂಡು ಕಾರನಲ್ಲಿದ್ದ ಓರ್ವನಿಗೆ ಗಾಯವಾಗಿದ್ದು,‌ಕಾರ ಸಂಪೂರ್ಣವಾಗಿ ಜಖಂಗೊಂಡಿದೆ.

ತಕ್ಷಣ ಗಾಯಗೊಂಡಿದ್ದ ವ್ಯಕ್ತಿಗೆ 108 ವಾಹನದ ಮೂಲಕ ಕುಮಟ ಸರಕಾರಿ ಆಸ್ಪತ್ರೆಗೆ ‌ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕುಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ