.ಸುದ್ದಿಬಿಂದು ಬ್ಯೂರೋ
ಅಂಕೋಲಾ : ಬಟ್ಟೆತೊಟ್ಟು ಎದುರಿಗೆ ಓಡಾಡುವವರನ್ನ ಬೆತ್ತಲೆಯಾಗಿ ನೋಡುವ ತೆವಲಿಗೆ ಬಿದ್ದ ವೈದ್ಯನೊರ್ವ ಒನಲೈನ್‌ನಲ್ಲಿ ಕನ್ನಡಕ ಖರೀದಿಸಲು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಗ್ರಾಮೀಣ‌ ಭಾಗದ ವೈದ್ಯನಿಂದ ನಡೆದಿದೆ ಎನ್ನಲಾಗಿದೆ.

ಈ ವೈಧ್ಯ 50 ರ ಪ್ರಾಯದ ರಸಿಕ ರಾಜ ಇತನಿಗೆ ತನ್ನಷ್ಟಕ್ಕೆ ಎತ್ತರಕ್ಕೆ ಬೆಳೆದು ನಿಂತ ಮಕ್ಕಳಿದ್ದರೂ ಸಹ, ಇತರೆ ಹೆಣ್ಮಕ್ಕಳನ್ನು ಬೆತ್ತಲೆಯಾಗಿ ನೋಡಬೇಕೆಂಬ ಚಟಗಾರ. ಈತನ ಈ ಚಟವೆ ಇಂದು ಆತ ಬರೋಬ್ಬರಿ 1 ಲಕ್ಷ 87 ಸಾವಿರ ರೂ ಹಣವನ್ನು ಆನಲೈನ್‌ನಲ್ಲಿ ಕಳೆದುಕೊಳ್ಳುವಂತೆ ಮಾಡಿದೆ. ಆನ್‌ಲೈನ್‌ನ ಮೋಸದ ಜಾಲಕ್ಕೆ ಬಿದ್ದ ಈತನಿಗೆ, ಇತ್ತ ಬೆತ್ತಲೆ ಕಾಣುವ ಕನ್ನಡಕವು ಇಲ್ಲದೆ, ಅತ್ತ ತಾನು ಆನಲೈನ್ ಪೇಮೆಂಟ್ ಮಾಡಿದ ಹಣ ಬಾರದೆ ಈತನೆ ಬೆತ್ತಲಾಗಿದ್ದಾನೆ.

ಈ ವೈದ್ಯ ಮಹಾಶಯ ತನಗೆ ಇಷ್ಟ ಬಂದವರನ್ನು ಬೆತ್ತಲೆಯಾಗಿ ನೋಡಬೇಕೆಂದು ಕನ್ನಡಕದ ಶೋಧನೆಗಾಗಿ ಆನಲೈನ್‌ನಲ್ಲಿ ತಡಕಾಡಿದ್ದಾನೆ. ಆನಲೈನ್‌ನಲ್ಲಿ ಈ ಕನ್ನಡಕ ಬಳಸಿದರೆ ಸಂಪೂರ್ಣವಾಗಿ ಬೆತ್ತಲೆಯಾಗಿ ನೋಡಬಹುದು ಎಂದು ಜಾಹೀರಾತು ಈತನ ಕಾಮದ‌ ಕಣ್ಣಿಗ ಬಿದ್ದಿದೆ. ಕನ್ನಡಕ್ಕೆ 7 ಲಕ್ಷ ರೂ ಬೆಲೆ ಇರುವದಾಗಿ, 10 ನಿಮಿಷದೊಳಗೆ ಬುಕ್ಕಿಂಗ್ ಮಾಡಿದರೆ 70 ಶೇ ರಿಯಾಯತಿಯಾಗಿ ಕನ್ನಡಕ್ಕೆ ಕೇವಲ 2 ಲಕ್ಷದ 10 ಸಾವಿರ ಆಗುತ್ತದೆ ಎಂದು ಉಲ್ಲೇಖಿಸಲಾಗಿತ್ತು.

ತಕ್ಷಣ ಬುಕ್ಕಿಂಗ್ ಹಣವಾಗಿ 83 ಸಾವಿರ ಹಣವನ್ನು ಪೋನ್‌ಪೆ ಮುಖಾಂತರ ಪಾವತಿ ಮಾಡುವಂತೆ ತಿಳಿಸಲಾಗಿತ್ತು. ಇದನ್ನು ನಂಬಿದ ವೈದ್ಯ ತಕ್ಷಣ 83 ಸಾವಿರ ರೂ ಹಣವನ್ನು ಸಂದಾಯ ಮಾಡಿದ್ದಾನೆ. ಸಂದಾಯ ಮಾಡಿದ 15 ನಿಮಿಷದಲ್ಲಿ 23 ಸಾವಿರ ವಾಪಸ್ ವೈದ್ಯನ ಖಾತೆಗೆ ಮರು ಜಮಾವಣೆ ಆಗಿ, ನಿಮಗೆ ಶುಭಾಷಯಗಳು, ಲಕ್ಕಿ ಡ್ರಾನಿಂದ ನಿಮಗೆ 23 ಸಾವಿರ ಹಣ ಲಭ್ಯವಾಗಿದೆ. ಉಳಿದ ಹಣವನ್ನು ಕೂಡಲೆ ಜಮಾ ಮಾಡಿ ಕನ್ನಡವನ್ನು ಪಡೆಯಿರಿ ಎಂದು ಪೋನ್ ಮುಖಾಂತರ ತಿಳಿಸಲಾಗಿತ್ತು. ತನ್ನ ಖಾತೆಗೆ 23 ಸಾವಿರ ಹಣ ಮರು ಪಾವತಿಯಾದನ್ನು ಕಂಡು ಹರ್ಷಿತನಾದ ವೈದ್ಯ, ಬಾಕಿ ಭರಣ ಮಾಡಬೇಕಾಗಿದ್ದ 1 ಲಕ್ಷದ 27 ಸಾವಿರ ರೂ ಹಣವನ್ನ ಹಿಂದೆ ಮುಂದೆ ಯೋಚನೆ ಮಾಡದೆ ಅವರ ಖಾತೆಗೆ ಜಮಾ ಮಾಡಿದ್ದಾನೆ. ಕನ್ನಡಕ್ಕಾಗಿ ನಿದ್ದೆ ಬಿಟ್ಟು 4 ದಿನ ಕಾದು ಕುಳಿತಿದ್ದಾನೆ.

ಆದರೆ ಕನ್ನಡಕ ಬಾರದೆ ಇರುವದನ್ನ ಕಂಡ ಈತ ಮತ್ತೆ ಪೋನ್ ಮಾಡಿದ್ದಾನೆ. ಆ ಮೋಬೈಲ ಸಂಖ್ಯೆ ವ್ಯಾಪ್ತಿ ಪ್ರದೇಶದ ಹೊರಗಿದೆ ಎಂಬ ಸಂದೇಶ ಬರುತ್ತಿತ್ತು. ಅಂತೂ ಇಂಗೂ ತಿಂದ ಮಂಗನಂತಾದ ಈತ ಕನ್ನಡ ಹಾಕಿಕೊಂಡು ತೆವಲು ತೀರಿಸಿಕೊಳ್ಳಬೇಕೆಂಬ ಹಂಬಲದಲ್ಲಿದ್ದರಿಂದ ಹಣ ಕಳೆದುಕೊಂಡು, ಮರ್ಯಾದೆಗೆ ಅಂಜಿ ಅತ್ತ ಪೊಲೀಸ್ ಠಾಣೆಗೂ ದೂರು ನೀಡಲಾಗದೆ, ಇತ್ತ ನೆಮ್ಮದಿಯಿಂದ ನಿದ್ರಿಸಲು ಆಗದೆ ನಗ್ನ ಲೋಕದ ಮಾಯಾಜಾಲ ಕನ್ನಡಕವು ಕನಸಿನಲ್ಲಿಯೆ ಕಮರುವಂತಾಗಿದೆ.

ದೂರು ದಾಖಲಿಸಿದ್ರೆ ಕ್ರಮ
ಒನಲೈನ್ ಮೋಸದ ಜಾಲಕ್ಕೆ ಬಿದ್ದು ಸುಶಿಕ್ಷಿತರೆ ಹಣ ಹಾಗೂ ಮರ್ಯಾದೆ ಕಳೆದು ಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿದೆ. ಬೆತ್ತಲೆಯಾಗಿ ನೋಡುವ ಕನ್ನಡಕದಾಸೆಗೆ ಮರುಳಾಗಿ ಲಕ್ಷಾಂತರ ಹಣ ಕಳೆದುಕೊಂಡ ಬಗ್ಗೆ ದೂರು ದಾಖಲಾಗಿಲ್ಲ. ದೂರು ನೀಡಿದಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗುವದು.

ಆನಂದಮೂರ್ತಿ, ಪೊಲೀಸ್ ಇನ್ಸ್ಪೆಕ್ಟರ್. ಸೆನ್ ಪೊಲೀಸ್ ಠಾಣೆ. ಕಾರವಾರ.