ಸುದ್ದಿಬಿಂದು ಬ್ಯೂರೋ
ಗೋವಾ:ಅಪಾರ್ಟ್ಮೆಂಟ್ ಒಂದರಲ್ಲಿ ತನ್ನ ನಾಲ್ಕು ವರ್ಷದ ಮಗುವನ್ನು ಕೊಂದು ಬ್ಯಾಗ್ ನಲ್ಲಿ ತುಂಬಿಕೊಂಡು ಕಾರನಲ್ಲಿ ಪ್ರಯಾಣಿಸುತ್ತಿದ್ದ ಕೊಲೆಗಾರ್ತಿ ತಾಯಿಯನ್ನ ಗೋವಾ ಪೊಲೀಸರು ಚಿತ್ರದುರ್ಗದಲ್ಲಿ ಬಂಧಿಸಿದ್ದಾರೆ.

ಬೆಂಗಳೂರಿನ ಮ್ಯಾನ್ ಸ್ಟಾರ್ಟ್ ಅಪ್ ಸಂಸ್ಥಾಪಕೆ ಹಾಗೂ ಸಿಇಓ ಆಗಿದ್ದ ಸುಚನಾ ಸೇಠ್(Suchana Seth was the founder and CEO of Man Startup)ಎಂಬಾಕೆ ಕಳೆದ ಎರಡು ದಿನಗಳ ಹಿಂದೆ ಗೋವಾದ ಅಪರ್ಟಮೆಂಟ್ ಒಂದರಲ್ಲಿ ವಾಸವಾಗಿತ್ತು. ಈ ವೇಳೆ ತನ್ನ ನಾಲ್ಕು ವರ್ಷದ ಮಗುವನ್ನ ತಾನೆ ಕೊಲೆ ಮಾಡಿ ಬ್ಯಾಗ್ ನಲ್ಲಿ ಮಗುವಿನ ಶವವನ್ನ ತುಂಬಿಕೊಂಡು ಕರ್ನಾಟಕಕ್ಕೆ ತರುವಾಗ ಚಿತ್ರದುರ್ಗ ಪೊಲೀಸರ ಸಹಾಯದಿಂದ ಗೋವಾ ಪೊಲೀಸರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಎಂಬಲ್ಲಿ ಬಂಧಿಸಿದ್ದಾರೆ‌.

ಈಕೆ ಅಪಾರ್ಟ್ಮೆಂಟ್ ಖಾಲಿ ಮಾಡಿ ಹೋದ ಬಳಿಕ ಅಪಾರ್ಟಮೆಂಟ್ ಸ್ವಚ್ಛಗೊಳಿಸುವ ವೇಳೆ ಭದ್ರತಾ ಸಿಬ್ಬಂದಿಯಿಂದ ಘಟನೆ ಬಹಿರಂಗವಾಗಿದೆ. ರಕ್ತದ ಕಲೆ‌ ಇರುವುವುದು ಪತ್ತೆಯಾಗಿದೆ.ತಕ್ಷಣ ಎಚ್ಚತ್ತ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಮೇರೆಗೆ ಮಹಿಳೆಯನ್ನು ಬಂಧಿಸಿದ ಐಮಂಗಲ ಪೊಲೀಸರು ತಡರಾತ್ರಿ ಆರೋಪಿ ಸುಚನಾ ಸೇಠ್ ರನ್ನು ಗೋವಾ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ‌. ಇದುವರಗೆ ಮಗುವಿನ ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.