ಸುದ್ದಿಬಿಂದು ಬ್ಯೂರೋ
Goa,ಗೋವಾ : ಅದೆಷ್ಟೊ ಮಂದಿ ಮಕ್ಕಳಿಲ್ಲ ಎಂದು ಕೊರಗುತ್ತಲೆ ಇದ್ದಾರೆ.ಆದರೆ ಇಲ್ಲೊಬ್ಬಳು ಪಾಪಿ((Mother)ತಾಯಿ ಗಂಡನ ಮೇಲಿನ ಸಿಟ್ಟಿನಿಂದಾಗಿ ತನ್ನ ‌ನಾಲ್ಕು ವರ್ಷದ ಮಗುವನ್ನೆ ಕೊಲೆ(4 Year Boy Murder) ಮಾಡಿರುವ ಘಟನೆ ರಾಜ್ಯವೆ ಬೆಚ್ಚಿ ಬಿಳುವಂತೆ ಮಾಡಿದೆ.

ಬೆಂಗಳೂರಿನ ಸ್ಟಾರ್ಟಪ್ ಕಂಪನಿಯೊಂದರ ಸಿಇಒ ಮಹಿಳೆ ತನ್ನ ನಾಲ್ಕು ವರ್ಷದ ಮಗುವನ್ನು ಕೊಂದು ಹೆಣವನ್ನು ಕಾರಿನಲ್ಲಿ ಸಾಗಿಸಿದ ಭಯಾನಕ ಘಟನೆ ನಮ್ಮ‌ ಪಕ್ಕದ ಗೋವಾ ರಾಜ್ಯದಲ್ಲಿ ನಡೆದಿದೆ‌. ಇನ್ನೂ ಆಕೆ ತನ್ನ ಹೆತ್ತ ಮಗುವನ್ನ ಕೊಂದ ಭಯಾನಕ ಕಥೆ ಆಕೆ ಬಂಧನದ ಬಳಿಕ ಒಂದೊಂದಾಗಿ ಹೊರಬರಲಾರಂಭಿಸಿದೆ. ಬೆಂಗಳೂರಿನಿಂದ ಆಕೆ ತನ್ನ ಮಗನನ್ನು ಗೋವಾಗೆ ಕರೆದುಕೊಂಡು ಹೋಗಿ ಅಲ್ಲಿನ ಅಪಾರ್ಟ್‌ಮೆಂಟ್ ಒಂದರಲ್ಲಿ ಮಗುವನ್ನು ಕೊಂದು ಖಾಸಗಿ ಟ್ಯಾಕ್ಸಿಯಲ್ಲಿ ಶವವನ್ನು ಹಿಡಿದುಕೊಂಡು ಬರುವ ವೇಳೆ ಚಿತ್ರದುರ್ಗದಲ್ಲಿ ‌ಪೊಲೀಸರು ಬಂಧಿಸಿದ್ದಾರೆ.

ಇನ್ನಷ್ಟು ಸುದ್ದಿಗಾಗಿ:-ಮಗುವನ್ನ ಕೊಂದು ಬ್ಯಾಗ್ ನಲ್ಲಿ ಶವ ಸಾಗಿಸುತ್ತಿದ್ದ ಪಾಪಿ ತಾಯಿ

ಆಕೆಯನ್ನ ಗೋವಾ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು ಆಕೆ ತನ್ನ ಗಂಡನ ಮೇಲಿನ ಸಿಟ್ಟಿಗೆ ಮಗುವನ್ನು ಕೊಲೆ ಮಾಡಿದ್ದಾಳೆ ಎನ್ನುವ ಭಯಾನಕ ಸತ್ಯ ಹೊರ ಬರಲಾರಂಭಿಸಿದೆ.ಈ ಮಹಿಳೆ ಬೆಂಗಳೂರಿನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟಾರ್ಟ್‌ಅಪ್‌ ಮೈಂಡ್‌ಫುಲ್ ಎಐ ಲ್ಯಾಬ್‌ನ (Mindful Al Labs) ಸಹ-ಸ್ಥಾಪಕಿ ಹಾಗೂ ಸಿಇಒ ಆಗಿದ್ದ‌. ಸುಚನಾ ಸೇಠೆ ಎಂಬಾಕೆಯೆ ತಾನು ಹೆತ್ತ‌ ಕಂದಮ್ಮನ‌‌‌ ಕೊಲೆ‌ ಮಾಡಿರುವ ಪಾತಕಿಯಾಗಿದ್ದಳೆ.

ಈಕೆ‌ ತನ್ನ ಮಗನೊಂದಿಗೆ ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸೋಲ್ ಬನಿಯನ್ ಗ್ರಾಂಡೆ ನಲ್ಲಿ ವಾಸವಾಗಿದ್ದು, ‌ಅಲ್ಲಿಗೆ ಬರುವಾಗ ‌ಮಗುವಿನ ಜೊತೆಯಾಗಿ ಬಂದ ಕೊಲೆ ಪಾತಕಿ ಸುಷನಾ ಸೇಠ್ ಕೊಠಡಿಯಿಂದ ಒಬ್ಬಂಟಿಯಾಗಿ ಹೋಗಿರುವುದು ಹಲವ ಅನುಮಾಕ್ಕೆ‌ ಕಾರಣವಾಗಿತ್ತು. ತಾನು ವಾಪಸ್‌ ಬೆಂಗಳೂರಿಗೆ ಹೋಗಲು ಟ್ಯಾಕ್ಸಿ ಕಾಯ್ದಿರಿಸುವಂತೆ ಹೋಟೆಲ್ ಸಿಬ್ಬಂದಿಗೆ ಕೇಳಿದ್ದಳು.

ಅಲ್ಲಿಂದ ಹೊರಡುವಾಗ ಜೊತಯಲ್ಲಿದ್ದ ಮಗು ಇರಲಿಲ್ಲ. ಕೈಯಲ್ಲಿ ಒಂದು ದೊಡ್ಡ ಬ್ಯಾಗ್ ಮಾತ್ರ ಇತ್ತು. ಟ್ಯಾಕ್ಸಿಯಲ್ಲಿ ಆಕೆ‌ ಒಬ್ಬಳೆ ಹೊರಟಿರುವ ಬಗ್ಗೆ ಅನುಮಾನ ಗೊಂಡ ಅಲ್ಲಿನ ಸಿಬ್ಬಂದಿಗಳು ಆಕೆ ಅದೇ ಕಾರಿನಲ್ಲಿ ತನ್ನ ನಾಲ್ಕು ವರ್ಷದ ಮಗನ ಶವವನ್ನ ಅನುಮಾನ ಬಾರದ ಹಾಗೆ ಸಾಗಿಸಿದ್ದಾಳೆ, ಇದರಿಂದ‌ ಮತ್ತಷ್ಟು ಸಂಶಕ್ಕೆ ಒಳಗಾಗದ ಅಪಾರ್ಟ್‌ಮೆಂಟ್‌ನ ಸಿಬ್ಬಂದಿ ಮಹಿಳೆ‌ ಹೊರಟು ಹೋದ ಕಾರಿನ ಚಾಲಕನ ಸಂಪರ್ಕ ಸಾಧಿಸಿ ಚಿತ್ರದುರ್ಗ ಠಾಣೆಗೆ ಮಾಹಿತಿ ನೀಡಿದ್ದು ಆಕೆಯನ್ನು ಪೊಲೀಸರು ವಶಕ್ಕೆ ಪಡೆದಾಗ ಕೊಲೆಯ ಭಯಾನಕ ಸ್ಟೋರಿ ಬಿಚ್ಚಿಕೊಂಡಿತ್ತು.

ಈಕೆ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ತಾನು ಕೈ ಕುಯ್ದುಕೊಂಡು ಆತ್ಮಹತ್ಯೆಗೂ ಪ್ರಯತ್ನಿಸಿದ್ದಳು ಎನ್ನಲಾಗಿದೆ.ಮಹಿಳೆ ಅಪಾರ್ಟ್ಮೆಂಟ್ ಖಾಲಿ ಮಾಡಿ ಹೋದ ಬಳಿಕ ಅಲ್ಲಿನ ಕ್ಲೀನಿಂಗ್ ಸಿಬ್ಬಂದಿ ಕೋಣೆಗೆ ಹೋಗಿ ನೋಡಿದಾಗ ಅಲ್ಲಿ ರಕ್ತದ ಕಲೆಗಳನ್ನು ಗಮನಿಸಿದ್ದಾರೆ ಎನ್ನಲಾಗಿದೆ. ಆಗ ಅಪಾರ್ಟ್‌ಮೆಂಟ್‌ನ ಸಿಬ್ಬಂದಿ, ಆಡಳಿತ ಮಂಡಳಿ ತಕ್ಷಣ ಗೋವಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬಳಿಕ ಗೋವಾ ಪೊಲೀಸರು ಟ್ಯಾಕ್ಸಿ ಚಾಲಕನಿಗೆ ಕರೆ ಮಾಡಿ ಸುಚನಾ ಸೇಠ್ ಅವರೊಂದಿಗೆ ಮಾತನಾಡಿ ಅಪಾರ್ಟ್ಮೆಂಟ್ ಗೆ ಬರುವಾಗ ಜೊತೆಯಲ್ಲಿ ಕರೆದುಕೊಂಡು ಬಂದ‌ ನಿಮ್ಮ‌ ಮಗು ಎಲ್ಲಿದ್ದಾಳೆ ಎಂದು ಪೋನ್ ನಲ್ಲಿಯೇ ವಿಚಾರಿಸಿದ್ದಾರೆ. ಆಗ ಆಕೆ ನಕಲಿ ವಿಳಾಸವನ್ನ ನೀಡಿದ್ದಾಳೆ. ಕಾರಿನಲ್ಲಿ ಸಾಗಿಸುತ್ತಿದ್ದ ಮಗುವಿನ ಶವವನ್ನು ಪೊಲೀಸರು ಬ್ಯಾಗ್‌ನಿಂದ ತೆಗೆದು ಹಿರಿಯೂರು ತಾಲೂಕಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದಾರೆ.

ಸುಚನಾ ಶೇರ್ ಅವರಿಗೆ 2010ರಲ್ಲಿ ವೆಂಕಟರಾಮನ್ ಎಂಬ ಟೆಕ್ಕಿ ಜೊತೆಯಲ್ಲಿ ಮದುವೆಯಾಗಿದ್ದು, ಇವರಿಗೆ 2019ರಲ್ಲಿ ಮಗುವೊಂದು ಹುಟ್ಟಿದೆ. ಇದಾದ ಬಳಿ ಇಬ್ಬರ‌‌ ಸಂಬಂಧ‌ ಚೆನ್ನಾಗಿ ಇರಲಿಲ್ಲ ಎನ್ನಲಾಗಿದ್ದು,ಬಳಿ ಆಕೆ ಡೈವೋರ್ಸ್ ಕೂಡ ನೀಡಿದ್ದರು. ಇದಕ್ಕೆ ಕೋರ್ಟ್ ‌ಸಹ ಸಮ್ಮತಿ ನೀಡಿತ್ತು ಎನ್ನಲಾಗಿದ್ದು,‌ನಂತರದಲ್ಲಿ ಮಗು ತಾಯಿ ಸುಚನಾ ಜೊತೆಯಲ್ಲೆ ವಾಸವಾಗಿದ್ದಳು, ಬಳಿಕ ಸುಚನಾ ಸೇಠ್ ಮೊದಲ‌ ಪತಿ ಆಗಾಗ ಬಂದು ಮಗುವನ್ನ‌ ನೋಡಿಕೊಂಡು ಹೋಗುತ್ತಿದ್ದ, ಇದು ಸುಚನಾಳಿಗೆ ಆಗಿ ಬರುತ್ತಿರಲ್ಲಿಲ್ಲ.

ಹೀಗಾಗಿ ಈ ಮಗು ತನ್ನ ಬಳಿ ಇದ್ದರೆ ಮಗು ನೋಡುವ ನೆಪದಲ್ಲಿ ಗಂಡ ಬರುತ್ತಾನೆ ಎಂದು ಹೇಳಿ. ಮಗುವನೆ ಸಾಗಿಸಿ ಬಿಟ್ಟರೆ ಗಂಡ ಬರುವುದೆ ತಪ್ಪುತ್ತದೆ ಎಂದು ಬಾವಿಸಿ ತನ್ನ ನಾಲ್ಕು ವರ್ಷದ ಪುಟ್ಟ ಕಂದಮ್ನನ ಕತ್ತು ಹಿಸುಕಿ ಪಾಯಿ ತಾಯಿ ಕೊಲೆ ಮಾಡಿದ್ದಾಳೆ ಎನ್ನುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಹೊರಬಿದ್ದಿದೆ