ಸುದ್ದಿಬಿಂದು ಬ್ಯೂರೋ
ಹಳಿಯಾಳ : ರಾಜ್ಯದಲ್ಲಿ ಕಾಂಗ್ರೆಸ್ ಪೂರ್ಣ ಪ್ರಮಾಣದ ಶಾಸಕರನ್ನ ಹೊಂದುವ ಮೂಲಕ ಅಧಿಕಾರಿಕ್ಕೆ ಏರಿದ್ದರೂ, ಆಪರೇಷನ್ ಹಸ್ತವನ್ನ ಮಾಡುವ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನವನ್ನ ಗೆಲ್ಲಬೇಕು ಎನ್ನುವ ಗುರಿ ಇಟ್ಟುಕೊಂಡ ಕೈ ನಾಯಕರು ಅಪರೇಶ ಹಸ್ತಕ್ಕೆ ಮುಂದಾಗಿದ್ದಾರೆ‌.ಇದೀಗ ಉತ್ತರಕನ್ನಡ ಜಿಲ್ಲೆಯಲ್ಲಿ ಸಹ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರನ್ನ ಸೆಳೆಯಲು ಕಾಂಗ್ರೆಸ್ ಮುಂದಾಗಿದ್ದು, ಇದೀಗ ಎಸ್ ಎಲ್ ಘೋಟ್ನೇಕರ್ ಅವರನ್ನ ಕಾಂಗ್ರೆಸ್ ಗೆ ಸೇರಿಸಿಕೊಳ್ಳುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆದಿದೆ ಎನ್ನಲಾಗಿದೆ.

ಈ ಹಿಂದೆ ಕಾಂಗ್ರೆಸ್ ನಲ್ಲಿಯೇ ಇದ್ದ ಆರ್ ವಿ ದೇಶಪಾಂಡೆ ಶಿಷ್ಯ ಎಸ್ ಎಲ್ ಘೋಟ್ನೇಕರ್ ವಿಧಾನಸಭಾ ಚುನಾವಣೆಯಲ್ಲ ಹಳಿಯಾಳ ಕ್ಷೇತ್ರದಿಂದ ಕಾಂಗ್ರೆಸ್ ಟಿಕೇಟ್ ಬಯಸಿದ್ದರು. ಆದರೆ ಅಲ್ಲಿ ಹಿರಿಯ ಹಾಗೂ ಪ್ರಭಾವಿ ರಾಜಕಾರಣಿ ಆರ್ ವಿ ದೇಶಪಾಂಡೆ ಅವರಿಗೆ ಟಿಕೆಟ್ ತಪ್ಪಿಸಿ ಘೋಟ್ನೇಕರ್ ಅವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ನಾಯಕರು ಸಿದ್ದರಿರಲ್ಲ. ಹೀಗಾಗಿ ಅಸಮಧಾನಗೊಂಡ ಘೋಟ್ನೇಕರ್ ಗುರುವಿನ ವಿರುದ್ದ ಮುನಿಸಿಕೊಂಡು ಜೆಡಿಎಸ್ ನಿಂದ ಸ್ಪರ್ಧೆ ಮಾಡಿ ತನ್ನ ಗುರುವನ್ನೆ ಸೋಲಿಸಲು ಮುಂದಾಗಿದ್ದರು. ಆದರೆ ದೇಶಪಾಂಡೆ ಅವರ ಎದುರು ಘೋಟ್ನೇಕರ್ ಆಟ ನಡೆಯಲಿಲ್ಲ.ಮೂರನೆ ಸ್ಥಾನಕ್ಕೆ ತೃಪ್ತಿ ಪಡೆದುಕೊಳ್ಳಬೇಕಾಯತ್ತು.

ಜೆಡಿಎಸ್ ನಲ್ಲಿಯೂ ಸೋತು ಸುಣ್ಣವಾಗಿರುವ ಘೋಟ್ನೇಕರ್ ವಾಪಸ್ ಕೈ ಸೇರಲು ಮುಂದಾಗಿದ್ದಾರೆ. ಎನ್ನುವ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.ಈಗಾಗಲೇ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.ಅದು ಅಲ್ಲದೆ ತಮ್ಮ ಆಪ್ತರಾಗಿರುವ ಯಲ್ಲಾಪುರ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಅವರು ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಚರ್ಚೆಗಳು ಜೋರಾಗಿದ್ದು, ಹೀಗಾಗಿ ಹೆಬ್ಬಾರ್ ಅವರು ಕಾಂಗ್ರೆಸ್ ಸೇರೋದು ಪಕ್ಕಾ ಆದರೆ ಅವರ ಜೊತೆಯಲ ತಾನು ‘ತೆನೆ’ ಇಳಿಸಿ ‘ಕೈ’ ಹಿಡಿ ಬೇಕು ಎನ್ನುವ ವಿಚಾರದಲ್ಲಿ ಇದ್ದಾರಂತೆ ಎಸ್ ಎಲ್ ಘೋಟ್ನೇಕರ್ ಅವರು.

ಅವರು ಕಾಂಗ್ರೆಸ್ ಸೇರಲು ಒಂದಿಷ್ಟು ಕಾರಣಗಳು ಇದೆ‌ ಎನ್ನುವ ಮಾತು ಸಹ ಇದೆ. ಈಗಾಗಲೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಗದೆ ಇರುವ ಕಾರಣ ಆರ್ ವಿ ದೇಶಪಾಂಡೆ ಅವರು ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡಿರುವುದು ಎಲ್ಲರಿಗೂ ತಿಳಿದ ವಿಚಾರ.ಹೀಗಾಗಿ ಲೋಕಸಭಾ ಚುನಾವಣೆ ಹೊತ್ತಲ್ಲಿ ಆರ್ ವಿ ದೇಶಪಾಂಡೆ ಬಿಜೆಪಿಗೆ ಸೇರಿ ತಮ್ಮ ಮಗನಿಗೆ ಬಿಜೆಪಿಯಿಂದ ಲೋಕಸಭಾ ಟಿಕೆಟ್ ಕೇಳಲಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ದೇಶಪಾಂಡೆ ಅವರು ತಮ್ಮ ಮಗನ ರಾಜಕೀಯ ಭವಿಷ್ಯಕ್ಕಾಗಿ ಬಿಜೆಪಿ ಸೇರಿದ್ದರೆ‌. ಹಳಿಯಾಳ ಕ್ಷೇತ್ರದಲ್ಲಿ ಸುಲಭವಾಗಿ ತಾವೆ ಅಧಿಪತಿಯಾಗಬಹುದು ಎನ್ನುವುದು ಘೋಟ್ನೇಕರ್ ಅವರ ರಾಜಕೀಯ ಲೆಕ್ಕಾಚಾರ, ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗಲಿದೆ ಅನ್ನೊಂದನ್ನ ಕಾದು ನೋಡಬೇಕಿದೆ.