ಸುದ್ದಿಬಿಂದು ಬ್ಯೂರೋ
ಕಾರವಾರ :ಭಗವಾನ್ ಶಿವನ ಆತ್ಮಲಿಂಗ ಇರುವ ದಿವ್ಯ ಪುಣ್ಯಕ್ಷೇತ್ರ ಕಾಶಿ ಶ್ರೀಕ್ಷೇತ್ರ ಗೋಕರ್ಣದಲ್ಲಿ ಸೆ 27,28,29ರಂದು ಮೂರು ದಿನಗಳ ಕಾಲ ಅನಂತಮೂರ್ತಿ ಹೆಗಡೆ, ಬ್ಯಾಗದ್ದೆ ಶಿರಸಿ ಅವರು ಈ ಕಾರ್ಯಕ್ರಮ ನಡೆಸಲಿದ್ದಾರೆ.

ಕಾರವಾರದ ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿಯನ್ನ ಉದ್ದೇಶಿಸಿ ಮಾತ್ನಾಡಿದ ಅನಂತಮೂರ್ತಿ ಅವರು ಮೋದಿ ಅವರಿಗೆ ಭಗವಂತ ಹೆಚ್ಚಿನ ಆಯುಷ್ಯ, ಆರೋಗ್ಯ ಕೊಟ್ಟು 2024 ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮತ್ತೆ ಪ್ರಧಾನಿ ಆಗಲೆಂದು ಮಹಾರುದ್ರಯಾಗ ಮಾಡಿಸುತ್ತಿದ್ದೇನೆ.
ನೂರಾರು ವೈದಿಕರಿಂದ ಮೂರು ದಿನಗಳ ಕಾಲ ಪೂಜಾ ಕಾರ್ಯಾಕ್ರಮ ನಡೆಯಲಿದೆ. ಮೋದಿ ಅಭಿಮಾನಿಗಳು ಸಾರ್ವಜನಿಕರು ಆಗಮಿಸಿ ಮೋದಿ ಅವರಿಗಾಗಿ ಪ್ರಾರ್ಥಿಸುವಂತೆ ಮನವಿ ಮಾಡಿದ್ದಾರೆ.

ಶಿರಸಿಯ ಸಣ್ಣ ಹಳ್ಳಿಯಿಂದ ಬಂದಿದ್ದು. ಅನಂತಮೂರ್ತಿ ಚಾರಿಟೆಬಲ್ ಟ್ರಸ್ಟ್ ಮೂಲಕ ನಾನಾ ಸಮಾಜಸೇವಾ ಕಾರ್ಯ ಮಾಡುತ್ತಾ ಬಂದಿದ್ದೆನೆ. ಈ ಸೇವೆಯನ್ನ ಕೇವಲ ಬೆಂಗಳೂರಿನ ಯಶವಂತಪುರದಲ್ಲಿ ಮಾತ್ರ ಮಾಡಲಾಗುತ್ತಿತ್ತು. ಆದರೆ ಈಗ ಶಿರಸಿಗೂ ವ್ಯವಹಾರ ವಿಸ್ತರಿಸಿದ್ದು ಜಿಲ್ಲೆಯಲ್ಲಿ ಸೇವಾ ಕಾರ್ಯಕ್ರಮ ಮಾಡುತ್ತಿದ್ದೇವೆ. ಮುಂದಿನ ದಿನದಲ್ಲಿ ಕಿತ್ತೂರು,‌ ಖಾನಾಪುರ ಭಾಗದಲ್ಲಿಯೂ ಸಹ ಸಾಮಾಜಿಕ ಮಾಡಲಾಗುತ್ತಿದೆ ಎಂದರು