ಸುದ್ದಿಬಿಂದು ಬ್ಯೂರೋ ವರದಿ
ಮುರುಡೇಶ್ವರ: ಅಂಗಡಿ ಮುಂಗಟ್ಟು ವ್ಯಾಪಾರಸ್ಥರು, ಪ್ರವಾಸಿಗರ ಒತ್ತಡಕ್ಕೆ ಮಣಿದ ಉತ್ತರ ಕನ್ನಡ ಜಿಲ್ಲಾಡಳಿತ ಕೆಲವೊಂದು ಸುರಕ್ಷತಾ ಕ್ರಮ ಕೈಗೊಂಡು 19ದಿನಗಳ ಬಳಿಕ ಮುರುಡೇಶ್ವರ ಕಡಲತೀರ ನಿಷೇಧ ತೆರವು ಮಾಡಲು ಮುಂದಾಗಿದ್ದು, ನಾಳೆಯಿಂದಲೇ ಮುರುಡೇಶ್ವರ ಕಡಲತೀರ ಪ್ರವಾಸಿಗರಿಗಾಗಿ ತೆರೆದುಕೊಳ್ಳಲಿದೆ.
ಮುರುಡೇಶ್ವರ ಕಡಲತೀರದಲ್ಲಿ ನಾಲ್ವರು ಪ್ರವಾಸಿ ವಿದ್ಯಾರ್ಥಿನಿಯರು ಮೃತಪಟ್ಟ ಬಳಿಕ ಕಡಲತೀರಕ್ಕೆ ಪ್ರವಾಸಿಗರ ನಿಷೇಧ ಹೇರಲಾಗಿತ್ತು, ಬರೋಬ್ಬರಿ 19 ದಿನಗಳ ನಿಷೇಧದ ಬಳಿಕ,ಅಧಿಕಾರಿಗಳ ಮೀನಮೇಷದ ನಂತರ ನಾಳೆಯಿಂದ ಅಂದರೆ ಡಿ 29ರವಿವಾರ ದಿಂದ ಕಡಲತೀರ ಪ್ರವಾಸಿಗರ ಮುಕ್ತ ಅವಕಾಶಕ್ಕೆ ಸಿಗಲಿದೆ. ಕಡಲತೀರದಲ್ಲಿ ಈಗಾಗಲೆ ಡೇಂಜರ್ ಜೋನ್ ಮತ್ತು ಸೇಫ್ ಜೋನ್ ಎಂದು ಎರಡು ವಿಭಾಗ ಮಾಡಿ ಗುರುತಿಸಲಾಗಿದೆ, ಜಿಲ್ಲಾಡಳಿತ ಗುರುತಿಸಿದ ಸೇಫ್ ಜೋನ್ ಅಲ್ಲಿ ಮಾತ್ರ ಪ್ರವಾಸಿಗರು ಈಜಾಡಬಹುದು ಡೇಂಜರ್ ಜೋನ್ ಅಲ್ಲಿ ಈಜಾಡಲು ನಿಷೇಧ ಇರಲಿದೆ.ಕೆಲವೊಂದು ಸುರಕ್ಷಿತ ಕ್ರಮ ಕೈಗೊಂಡು ನಾಳೆಯಿಂದ ಕಡಲತೀರಕ್ಕೆ ಪ್ರವಾಸಿಗರ ಅವಕಾಶ ಸಿಗಲಿದೆ..
ಕಳೆದ ಒಂದು ವಾರದಿಂದ ಮುರುಡೇಶ್ವರ ಕಡಲತೀರಕ್ಕೆ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಿದ್ದಾರೆ, ಈ ನಡುವೆ ಇಲ್ಲಿ ಕಡಲತೀರಕ್ಕೆ ಪ್ರವಾಸಿಗರ ನಿಷೇಧ ಇರುವ ಕಾರಣ ಈಗಲೂ ಕೂಡಾ ಪ್ರವಾಸಿಗರು ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕಿ ಹೋಗುತ್ತಿದ್ದಾರೆ, ಒಂದು ಸುರಕ್ಷಿತ ಕ್ರಮ ಕೈಗೊಳ್ಳಲು 20ದಿನ ತೆಗೆದುಕೊಂಡ ಉತ್ತರ ಕನ್ನಡ ಜಿಲ್ಲಾಡಳಿತ ಪ್ರವಾಸೋದ್ಯಮ ಬೆಳೆಸುವ ಬದಲು ಪಾತಾಳಕ್ಕೆ ಕೊಂಡೊಯ್ಯತ್ತಿದೆ ಎನ್ನುತ್ತಿದ್ದಾರೆ, ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟು 18ದಿನಗಳ ವರೆಗೂ ಕೈಕಟ್ಟಿ ಕುಳಿತ ಜಿಲ್ಲಾಡಳಿತ ನಿನ್ನೆ ಮೊನ್ನೆಯಿಂದ ಸುರಕ್ಷಿತ ಕ್ರಮದ ಬಗ್ಗೆ ಗಮನಹರಿಸುತ್ತಿದ್ದು ಬೇಜವಾಬ್ದಾರಿ ಬಿಟ್ಟು ಬೇರೆ ಏನು ಹೇಳಲು ಅಸಾಧ್ಯ ಎನ್ನೋದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ನಾಳೆಯಿಂದ ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ಮುಕ್ತ ಅವಕಾಶ ಸಿಕ್ಕರೂ ಕೂಡಾ ಜಿಲ್ಲಾಡಳಿತ ಗುರುತುಪಡಿಸಿದ ಜಾಗದಲ್ಲೆ ಈಜಾಡಿ ಮೋಜು ಮಸ್ತಿ ಮಾಡಬೇಕಿದೆ..ಒಂದು ವೇಳೆ ಜಿಲ್ಲಾಡಳಿತ ನಿರ್ಧರಿಸಿರುವ ಸ್ಥಳ ಬಿಟ್ಟು ಬೇರೆಡೆ ಮೋಜು ಮಸ್ತಿ ಮಾಡಿದಲ್ಲಿ ಅಂತಹವರ ವಿರುದ್ಧ ಕ್ರಮಕ್ಕೆ ಸಹ ಮುಂದಾಗಲಿದೆ.
ಗಮನಿಸಿ