ಶಿರಸಿ : ಲೋಕಸಭಾ ಚುನಾವಣೆಯ ಕಾವು ಏರತೊಡಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಈ ಈ ಬಾರಿ ಒಂದೇ ಸಮುದಾಯದ ಒಲೈಕೆಯಿಂದ ಹಿಂದುಳಿದ ವರ್ಗಗಳ ಮತಗಳು ಹೆಚ್ಚಾಗಿ ಬಿಜೆಪಿಗೆ ಮುಳ್ಳಾಗಲಿದೆ ಎನ್ನುವ ಅಂಶ ಚರ್ಚೆಗೆ ಕಾರಣವಾಗಿದೆ.

ರಾಜ್ಯದಲ್ಲಿ ಲೋಕಸಭಾ ಚುನಾವಣೆ ರಂಗೇರುತ್ತಿದ್ದು ಅಭ್ಯರ್ಥಿಗಳು ಗೆಲ್ಲಲ್ಲೇ ಬೇಕು ಎಂದು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.ಇನ್ನು ಜಿಲ್ಲೆಯಲ್ಲಿ ಚುನಾವಣಾ ಕಾವು ರಂಗೇರಿದ್ದು ಎರಡು ಪಕ್ಷದ ಅಭ್ಯರ್ಥಿಗಳು ಮುಖಂಡರು ಪ್ರಚಾರಕ್ಕೆ ಇಳಿದಿದ್ದಾರೆ.ಇನ್ನು ಚುನಾವಣೆಯಲ್ಲಿ ಕೆಲ ಅಂಶಗಳು ಎರಡು ಪಕ್ಷದ ಅಭ್ಯರ್ಥಿಗಳ ಲಾಭ ಹಾಗೂ ಹಿನ್ನಡೆಗೆ ಕಾರಣವಾಗುತ್ತಿದ್ದು ಒಂದೇ ಸಮುದಾಯದ ಒಲೈಕೆ ಬಿಜೆಪಿಗೆ ಈ ಬಾರಿ ಮುಳ್ಳಾಗಲಿದೆ ಎನ್ನುವುದು ಪಕ್ಷದ ವಲಯದಲ್ಲಿಯೇ ಕೇಳಿ ಬಂದಿದೆ.

ಬಿಜೆಪಿಯಲ್ಲಿ ಚುನಾವಣಾ ಮುನ್ನವೇ ಟಿಕೇಟ್ ಕೊಡುವಾಗ ಈ ಬಾರಿ ಸಂಸದ ಅನಂತ್ ಕುಮಾರ್ ಹೆಗಡೆ ಅವರನ್ನ ಬದಲಿಸಿದರೆ ಹಿಂದುಳಿದ ವರ್ಗದವರಿಗೆ ಟಿಕೇಟ್ ಕೊಡಬೇಕು ಎನ್ನುವ ಒತ್ತಾಯ ಜೋರಾಗಿ ಕೇಳಿ ಬಂದಿತ್ತು. ಕಳೆದ ಆರು ಬಾರಿ ಒಂದೇ ಸಮುದಾಯದ ವ್ಯಕ್ತಿಗೆ ಟಿಕೇಟ್ ನೀಡಿದ್ದು ಜಿಲ್ಲೆಯಲ್ಲಿ ಅತಿ ಹೆಚ್ಚು ಹಿಂದುಳಿದ ವರ್ಗಗಳ ಮತಗಳೇ ಹೆಚ್ಚಾಗಿ ಇರುವ ಹಿನ್ನಲೆಯಲ್ಲಿ ಈ ಬಾರಿ ಬದಲಾವಣೆ ಮಾಡಿದರೆ ಹಿಂದುಳಿದ ವರ್ಗಕ್ಕೆ ಆದ್ಯತೆ ಕೊಡಿ ಎನ್ನುವ ಆಗ್ರಹ ಕೇಳಿ ಬಂದಿತ್ತು.

ಜಿಲ್ಲೆಯಿಂದ ಆರು ಬಾರಿ ಸಂಸದರಾದವರು ಒಂದೇ ಸಮುದಾಯದಕ್ಕೆ ಸೇರಿದವರು. ಇನ್ನು ಜಿಲ್ಲೆಯಿಂದ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ವೇಳೆ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಶಿವರಾಮ್ ಹೆಬ್ಬಾರ್ ಒಂದೇ ಸಮುದಾಯಕ್ಕೆ ಸೇರಿದವರು. ಇನ್ನು ಕಳೆದ ಬಾರಿ ಈ ಬಾರಿ ಜಿಲ್ಲಾಧ್ಯಕ್ಷ ಸ್ಥಾನ ಸಹ ಅದೇ ಸಮುದಾಯಕ್ಕೆ ನೀಡಿದ್ದು ಇನ್ನು ಸರ್ಕಾರ ಆಡಳಿತಕ್ಕೆ ಬಂದ ವೇಳೆ ನಿಗಮ ಮಂಡಳಿ ಆಯ್ಕೆಯಲ್ಲೂ ಅದೇ ಸಮುದಾಯಕ್ಕೆ ಹೆಚ್ಚು ಆದ್ಯತೆ ಕೊಟ್ಟಿರುವುದು ಬಿಜೆಪಿಯ ಹಿಂದುಳಿದ ನಾಯಕರ ಕಣ್ಣು ಸಹ ಕೆಂಪಾಗುವಂತೆ ಮಾಡಿತ್ತು.

ಜಿಲ್ಲೆಯಲ್ಲಿ ಪಕ್ಷ ಕಟ್ಟಲು ದುಡಿಯಲು ಮಾತ್ರ ನಾವು ಬೇಕು. ಅಧಿಕಾರ ಅನುಭವಿಸಲು ಬೇರೆ ಸಮುದಾಯದವರು ಬೇಕು ಎನ್ನುವ ಆರೋಪ ಕೇಳಿ ಬಂದಿತ್ತು. ಇನ್ನು ಜಿಲ್ಲಾ ಬಿಜೆಪಿಯ ಪದಾಧಿಕಾರಿಗಳ ಆಯ್ಕೆಯಲ್ಲೂ ಒಂದೇ ಸಮುದಾಯಕ್ಕೆ ಅವಕಾಶ ಮಾಡಿಕೊಟ್ಟಿದ್ದು ಚುನಾವಣಾ ಮುನ್ನ ಸಾಕಷ್ಟು ವಿರೋಧಕ್ಕೆ ಕಾರಣವಾಗಿತ್ತು. ಸದ್ಯ ಲೋಕಸಭಾ ಟಿಕೇಟ್ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಅವಕಾಶ ಮಾಡಿಕೊಡದೇ ಮತ್ತೆ ಒಂದೇ ಸಮುದಾಯಕ್ಕೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ಹಿಂದುಳಿದ ವರ್ಗದ ಬಹುತೇಕರು ಕಿಡಿಕಾರಿದ್ದಾರೆ. ಬಿಜೆಪಿ ಒಳಗಿನ ಹಿಂದುಳಿದ ಸಮುದಾಯಕ್ಕೆ ಸೇರಿದ ನಾಯಕರೇ ಬಿಜೆಪಿ ನಾಯಕರ ನಡೆಗೆ ಕಿಡಿಕಾರುತ್ತಿದ್ದಾರೆ.

ದುಡಿಯಲು ನಾವು ಅಧಿಕಾರ ಅನುಭವಿಸಲು ಅವರು ಎನ್ನುವ ನಡೆ ಒಳ್ಳೆಯ ಬೆಳವಣಿಗೆಯಲ್ಲ. ಈ ಬಾರಿಯ ಮತದಾನದಲ್ಲಿ ಬಿಜೆಪಿ ಅಭ್ಯರ್ಥಿ ಕಾಗೇರಿಗೆ ತಕ್ಕ ಉತ್ತರ ಕೊಡಲು ಹಿಂದುಳಿದ ವರ್ಗಗಳ ಮತಗಳು ಒಂದಾಗಿದ್ದುಇದು ಬಿಜೆಪಿಯ ನಾಯಕರುಗಳಿಗೆ ನುಂಗಲಾರದ ತುತ್ತಾಗಿದೆ.

ಅವಕಾಶ ಇದ್ದರು ನಾಯಕರ ನಿರ್ಲಕ್ಷ
ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ನಾಯಕರಿಗೆ ಅಧಿಕಾರ ನೀಡುವ ವೇಳೆ ಸಾಕಷ್ಟು ಅವಕಾಶ ಇದ್ದರು ಬಿಜೆಪಿಯಲ್ಲಿ ಅವಕಾಶ ಕೊಡದೇ ಒಂದೇ ಸಮುದಾಯಕ್ಕೆ ಆದ್ಯತೆ ಕೊಡುವ ಕೆಲಸ ಮಾಡಲಾಗುತ್ತಿದೆ. ಜಿಲ್ಲೆಯಿಂದ ಒಂದೇ ಸಮುದಾಯಕ್ಕೆ ಸೇರಿದ ಕಾಗೇರಿ, ಶಿವರಾಮ್ ಹೆಬ್ಬಾರ್ ಬಿಜೆಪಿ ಅಧಿಕಾರಕ್ಕೆ ಬಂದ ವೇಳೆಯಲ್ಲಿ ಸಚಿವರಾದರೆ ಅನಂತ್ ಕುಮಾರ್ ಹೆಗಡೆ ಸಂಸದರಾಗಿದ್ದರು. ಇನ್ನು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಒಂದೇ ಒಂದು ಪಕ್ಷದ ಚಟುವಟಿಕೆಯಲ್ಲಿ ಪಾಲ್ಗೊಳ್ಳದೇ ಇದ್ದರು ಅನಂತ್ ಹೆಗಡೆ ಆಶೀಶರ ಅವರಿಗೆ ಅವಕಾಶ ಕೊಡಲಾಗಿತ್ತು. ಇದಲ್ಲದೇ ಯಲ್ಲಾಪುರದ ಪ್ರಮೋದ್ ಹೆಗಡೆ ಅವರಿಗೆ, ಯಕ್ಷಗಾನ ಅಕಾಡೆಮಿಗೆ ಅದೇ ಸಮುದಾಯದವರಿಗೆ ಅವಕಾಶ ಮಾಡಿಕೊಟ್ಟಿದ್ದು ಅಧಿಕಾರಕ್ಕಾಗಿ ಕಾಯುತ್ತಿದ್ದ ಹಿಂದುಳಿದ ವರ್ಗದವರ ಮುನಿಸಿಗೆ ಕಾರಣವಾಗಿತ್ತು.

ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಕಾರವಾರಕ್ಕೆ ಆಗಮಿಸಿದ ಬಸವರಾಜ್ ಪಾಟೀಲ್ ಯತ್ನಾಳ ತಮ್ಮ ಭಾಷಣದಲ್ಲಿ. ಜಿಲ್ಲೆಯ ಜನ ನೀವೆಲ್ಲಾ ಮೊದಲು ಕೂಡ ಹೆಗಡೆಗೆ ಮತ ಹಾಕಿದ್ದೀರಿ.ಈಗಲ್ಲೂ ಕೂಡ ಬಿಜೆಪಿಯಿಂದ ನಮ್ಮ ಪಕ್ಷದಿಂದ ಇನ್ನೊಂದು ಹೆಗಡೆಗೆ ಟಿಕೆಟ್ ಕೊಟ್ಟಿದ್ದೇವೆ. ಹೆಸರು ಮಾತ್ರ ಬದಲಾಗಿದೆ.ಆದರೆ ಆ ಹೆಗಡೆ ಬದಲಿಗೆ ಈ ಹೆಗಡೆಗೆ ಟಿಕೆಟ್ ಕೊಟ್ಟಿದ್ದೇವೆ ಎಂದು ಹೇಳಿರುವ ಭಾಷಣ ಜಿಲ್ಲೆಯ ಹಿಂದೂಳಿದವರ ಆಕ್ರೋಶಕ್ಕೆ ಕಾರಣವಾಗಿದೆ.ಜಿಲ್ಲೆಯಲ್ಲಿ ಹಿಂದುಳಿದವರಿಗೆ ರಾಜಕೀಯದಲ್ಲಿ ಅದರಲೂ ಬಿಜೆಪಿಯಲ್ಲಿ ಅವಕಾಶ ಇಲ್ವಾ ಎಂದು ಕ್ಷೇತ್ರದ ಹಿಂದುಳಿದ ಸಮುದಾಯದವರು ಗಂಭೀರವಾಗಿ ಚರ್ಚೆ ನಡೆಸುತ್ತಿದ್ದಾರೆ. ಈ ಬಾರಿ ಹಿಂದುಳಿದ ವರ್ಗಗಳ ನಾಯಕರು ಒಟ್ಟಾಗಿ ಬಿಜೆಪಿ ಅಭ್ಯರ್ಥಿ ವಿರುದ್ದ ತಿರುಗಿ ಬರಲು ಸಿದ್ದತೆ ನಡೆಸಿಕೊಂಡಿದ್ದಾರೆ ಎನ್ನಲಾಗಿದೆ