ಸುದ್ದಿಬಿಂದು ಬ್ಯೂರೋ
ಶಿರಸಿ: ಸಾಮಾಜಿಕ ಹೋರಾಟಗಾರ,ಬಿಜೆಪಿ ಸದಸ್ಯರೂ ಆಗಿರುವ ಅನಂತಮೂರ್ತಿ ಹೆಗಡೆ ಇಂದು ಬೆಂಗಳೂರಿನ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರನ್ನು ಭೇಟಿ ಮಾಡಿ ಶುಭಾಶಯ ಕೋರಿದ ಅನಂತಮೂರ್ತಿ ಹೆಗಡೆ ಅವರು ಲೋಕಸಭಾ ಚುನಾವಣೆ ಕುರಿತು ಜಿಲ್ಲೆಯ ರಾಜಕೀಯದ ಬಗ್ಗೆ ಚರ್ಚೆ ನಡೆಸಿದ್ದರು.
ಅನಂತಮೂರ್ತಿ ಹೆಗಡೆ ಅವರು ಕಳೆದ ಒಂದು ವರ್ಷದಿಂದ ಜಿಲ್ಲೆಯಲ್ಲಿ ಸಾಮಾಜಿಕ ಕಾರ್ಯಗಳನ್ನ ಮಾಡುವ ಮೂಲಕ ಚಿರಪರಿಚಿತರಾಗಿದ್ದಾರೆ.ಜಿಲ್ಲೆಯಲ್ಲಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣವಾಗಬೇಕು ಎನ್ನುವ ವಿಚಾರವಾಗಿ ಶಿರಸಿಯಿಂದ ಕಾರವಾರದವರಗೆ 140ಕಿಲೋ ಮೀಟರ್ ಪಾದಯಾತ್ರೆ ನಡೆಸಿದ್ದಾರೆ. ಇನ್ನೂ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಆಸ್ಪತ್ರೆ ನಿರ್ಮಾಣದ ಬಗ್ಗೆ ಪ್ರತಿಭಟನೆ ನಡೆಸಿ ಸರಕಾರದ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ:-Son Murder:ಪತಿ ಮೇಲಿನ ಸಿಟ್ಟಿಗೆ ಹೆತ್ತ ಕಂದನನ್ನೆ ಕೊಂದು ಬಿಟ್ಟಳಾ ಕ್ರೂರಿ ತಾಯಿ.!
ಇನ್ನೂ ಉತ್ತರಕನ್ನಡ ಜಿಲ್ಲಾಧ್ಯಂತ ಇರುವ ಎಲ್ಲಾ ಆಟೋ ಚಾಲಕರಿಗೆ ಇನ್ಸೂರೆನ್ಸ್, ಸಮವಸ್ತ್ರ ನೀಡಿದ್ದಲ್ಲದೆ. ಬಸ್ ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ. ಇದರೊಂದಿಗೆ ಕೊನೆಗೌಡರಿಗೂ ಸಹ ವಿಮೆ ವ್ಯವಸ್ಥೆ ಕಲ್ಪಿಸಿದ್ದಾರೆ. ಇದರ ಜೊತೆಗೆ ಶಿಕ್ಷಣ ಕ್ಷೇತ್ರ ಸೇರಿದಂತೆ ಎಲ್ಲಾ ರಂಗದಲ್ಲಿ ಇರುವವರಿಗೆ ಸಹಾಯ ಮಾಡುವ ಮೂಲಕ ಅನಂತಮೂರ್ತಿ ಹೆಗಡೆ ಜಿಲ್ಲೆಯ ಜನರ ಗಮನ ಸೆಳೆದಿದ್ದಾರೆ.
ಈ ಭಾರಿ ಉತ್ತರಕನ್ನಡ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮನಸ್ಸು ಮಾಡಿದ್ದು, ಬಿಜೆಪಿಯ ಹೈಕಮಾಂಡ ಮಟ್ಟದಲ್ಲಿಯೂ ಸಹ ಅನಂತಮೂರ್ತಿ ಅವರ ಹೆಸರು ಸದ್ಯ ಮುನ್ನೆಲೆಗೆ ಬಂದಿದೆ. ಒಟ್ಟಿನಲ್ಲಿ ಯಾವುದೇ ರಾಜಕೀಯ ಇಲ್ಲದೇ ಸಮಾಜ ಸೇವೆ ಮಾಡುತ್ತಿರುವ ಅನಂತಮೂರ್ತಿ ಹೆಗಡೆ ಅವರನ್ನ ಸದ್ಯ ಬಿಜೆಪಿ ಹೈಕಮಾಂಡ ಗುರುತಿಸಿತುವುದು ವಿಶೇಷವಾಗಿದೆ.